ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಇಷ್ಟೇ - ಇಷ್ಟು
ನವೀನ್ ಕೃಷ್ಣ : ನಟ
 

 

ಕಿರುತೆರೆಯಿಂದ ಬೆಳ್ಳಿತೆರೆಗೆ ಬರುವಾಗ ಎದುರಾದ ಸವಾಲು?

ನನಗೆ ಮೊದಲಿನಿಂದಲೂ ಸಿನಿಮಾದಲ್ಲೇ ಸಾಧನೆ ಮಾಡಬೇಕೆಂಬ ಆಸೆ ಇತ್ತು. ಹಾಗಾಗಿ ಕಿರುತೆರೆಯಲ್ಲಿ ಉತ್ತಮ ಬ್ಯಾನರ್ ಮತ್ತು ಆಯ್ದ ಪಾತ್ರಗಳಲ್ಲಷ್ಟೇ ಅಭಿನಯಿಸುತ್ತಿದ್ದೆ. ಕಿರುತೆರೆಯಿಂದ ನಾಯಕನಾಗಿ ಬಡ್ತಿ ಹೊಂದುವುದು ಸುಲಭವಲ್ಲ. ಈಗಂತೂ ಒಂದು ವರ್ಷದಿಂದ ಕಿರುತೆರೆಯಲ್ಲಿ ಕಾಣಿಸಿಕೊಂಡೇ ಇಲ್ಲ.

ತಂದೆ ಶ್ರೀನಿವಾಸಮೂರ್ತಿ ಪ್ರಸಿದ್ಧಿ ಈ ಕ್ಷೇತ್ರದಲ್ಲಿ ಬೆಳೆಯಲು ಪೂರಕವಾಯಿತೇ?

ಅಂತಹ ಹಿರಿಯ ವ್ಯಕ್ತಿಯ ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ನನ್ನನ್ನು ಇಂತಹ ವ್ಯಕ್ತಿಯ ಮಗ ಎಂದು ಗುರುತಿಸುತ್ತಾರೆಯೇ ಹೊರತು ನವೀನ್ ಕೃಷ್ಣ ಎಂದು ಗುರುತಿಸುವುದು ಕಡಿಮೆ. ಇಲ್ಲಿ ಯಾರ ಮಗ ಎನ್ನುವುದಕ್ಕಿಂತ ನೀವೆಷ್ಟು ಸಾಧನೆ ಮಾಡಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ.

'ಧಿಮಾಕು' ಚಿತ್ರದ ಕುರಿತು...

ಪ್ರೇಮ ಕಥೆ ಇರುವ ಕೌಟುಂಬಿಕ ಚಿತ್ರ ಇದು. ನಟನಾಗಿ ನನಗೆ ಕಿರುತೆರೆಯಲ್ಲಿ ಮಾಡಲು ಸಾಧ್ಯವಾಗದೆ ಇರುವುದು ಇಲ್ಲಿ ಸಾಧ್ಯವಾಗಿದೆ. ಇಲ್ಲಿ ನನ್ನ ಮೂಲಗುಣಕ್ಕೆ ಸವಾಲೊಡ್ಡುವ, ನಾನಲ್ಲದಿರುವ ಪಾತ್ರದಲ್ಲಿ ಅಭಿನಯಿಸಿದ್ದೇನೆ.

'ಧಿಮಾಕು' ಮಾಡುತ್ತಾ ನಿಮ್ಮ ಧಿಮಾಕೂ ಹೆಚ್ಚಿದೆಯೇ?!

ಇಲ್ಲ. ನಾನು ಮೃದು ಹೃದಯಿ.

ಮುಂದಿನ ಚಿತ್ರಗಳು?

ಸದ್ಯಕ್ಕೆ 'ಧಿಮಾಕು' ಚಿತ್ರದಲ್ಲಿ ಬ್ಯುಸಿ ಇದ್ದೇನೆ. ಮುಂದಿನ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಟಿಎಸ್‌ಐ

ಡಿ.ಎಸ್. ಶ್ರೀಕಲಾ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .