|
ಮಾಯಾವತಿ ಆಡಳಿತದಲ್ಲಿ ದಲಿತರು
ಸುರಕ್ಷಿತರಲ್ಲ ಅಥವಾ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎನ್ನುವ
ಹೇಳಿಕೆ ಸಂಪೂರ್ಣ ವೈಭವೀಕೃತ ಮಾತಲ್ಲದೆ ಇದ್ದರೂ,
ಅಗತ್ಯಕ್ಕಿಂತ ಹೆಚ್ಚು ಬಣ್ಣ ಬಳಿದ ಮಾತು
ಎನ್ನಲಡ್ಡಿಯಿಲ್ಲ.
ಮಾಧ್ಯಮಗಳಲ್ಲಿ ಜನಪ್ರಿಯವಾಗಿರುವ ಇಂತಹ ಚಿತ್ರಣವನ್ನು
ವ್ಯಾಖ್ಯಾನಿಸಬೇಕೆಂದರೆ ಮಾಯಾ ಆಡಳಿತದಲ್ಲಿ ರಾಜ್ಯದ ದಲಿತರು ಶೋಷಣೆಯಿಂದ
ಮುಕ್ತರಾಗಬೇಕು ಎನ್ನುವ ನಿರೀಕ್ಷೆ ಇತ್ತು ಎನ್ನುವುದನ್ನು
ನೆನಪಿಸಿಕೊಳ್ಳಬೇಕು.
ಆದರೆ ಇಂತಹ ಚಿಂತನೆಯನ್ನು ನಿಯಂತ್ರಿಸುವ ಮತ್ತೊಂದು
ವ್ಯಾಖ್ಯಾನವೂ ಇದೆ.
ಪ್ರತಿ ಬಾರಿ ದಲಿತ ದೌರ್ಜನ್ಯವನ್ನೇ ಭೂತಗನ್ನಡಿಯಲ್ಲಿಟ್ಟು
ನೋಡುವುದೇಕೆ?
ಒಂದು ಪುಟ್ಟ ದೌರ್ಜನ್ಯವನ್ನು ದೊಡ್ಡದಾಗಿ ಚಿತ್ರಿಸುವ
ಅಗತ್ಯವೇನಿದೆ ಎನ್ನುವ ಚಿಂತನೆ ಅದು.
ಆದರೆ ರಾಜ್ಯದಲ್ಲಿ ದಲಿತರ ಮೇಲೆ ಇಂದಿಗೂ
ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ ಎನ್ನುವುದು ಮಾತ್ರ ಸುಳ್ಳಲ್ಲ.
ಕೆಲ ಪ್ರಕರಣಗಳಂತೂ ಬೀಭತ್ಸವಾಗಿರುತ್ತವೆ.
ಇತ್ತೀಚೆಗೆ ಮಥುರಾದಲ್ಲಿ ದಲಿತ ಯುವತಿಯನ್ನು
ಜೀವಂತ ಬೆಂಕಿಗೆ ಎಸೆದ ಪಾಶವೀ ಕೃತ್ಯ ಎಸಗಲಾಗಿದೆ.
ಈ ಪ್ರಕರಣವನ್ನು ಸೂಕ್ತ ದೃಷ್ಟಿಕೋನದಲ್ಲಿ
ಅರ್ಥೈಸಿಕೊಳ್ಳುವ ಅಗತ್ಯವಿದೆ.
ಕಳೆದ ಮೇಯಲ್ಲಿ ಮಾಯಾವತಿ ಉತ್ತರ ಪ್ರದೇಶದಲ್ಲಿ
ಅಧಿಕಾರದ ಗದ್ದುಗೆ ಹಿಡಿದಿರುವುದು ನಿಜಕ್ಕೂ ಮಹತ್ತರ ಬದಲಾವಣೆಯೇ.
ಸಮಾಜ ದಲಿತ ಮಹಿಳೆಯೊಬ್ಬಳನ್ನು ತಮ್ಮ
ಉತ್ತರಾಧಿಕಾರಿಯಾಗಿ ಆರಿಸಿದ್ದು ಸಣ್ಣ ವಿಚಾರವಾಗಲು ಸಾಧ್ಯವೇ ಇಲ್ಲ.
ಭಾರತ ಇತಿಹಾಸದ ಎರಡು ಮಹಾನ್ ಯಶಸ್ಸಿನ ಜೊತೆ
ಮಾತ್ರ ಮಾಯಾವತಿಯವರ ಈ ಮಹತ್ತರ ವಿಜಯವನ್ನು ಹೋಲಿಸಬಹುದು.
ಮೊದಲನೆಯದು ಗುರು ರವಿದಾಸ್ ಅವರು ಕಾಶಿ
ಬ್ರಾಹ್ಮಣರನ್ನು ಸೋಲಿಸಿರುವುದು ಮತ್ತು ಬಾಬಾ ಸಾಹೆಬ್ ಡಾ.
ಅಂಬೆಡ್ಕರ್ ಅವರು ಭಾರತದ ಸಂವಿಧಾನ ರಚನೆಯ ಹೊಣೆ
ಹೊತ್ತದ್ದು!
ಮಾಯಾವತಿ ದಿಗ್ವಿಜಯ ಒಂದು ರೀತಿಯಲ್ಲಿ
ಕರಗುತ್ತಿರುವ ರಾಜಕೀಯ ಸ್ವರೂಪಕ್ಕೆ ಉತ್ತಮ ಉದಾಹರಣೆಯಾಗಬಲ್ಲುದು.
ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರು ದಲಿತರ ಹಿಂದೆ
ಮೆರವಣಿಗೆ ಹೊರಟಂತಹ ಮಾಂತ್ರಿಕ ಸಾಮಾಜಿಕ ಬದಲಾವಣೆ.
ವಿವರಿಸಿ ಹೇಳಬೇಕೆಂದರೆ,
ಸಾಮಾಜಿಕವಾಗಿ ಬಹಿಷ್ಕೃತರಾಗಿದ್ದ ದಲಿತರು
ಬ್ರಾಹ್ಮಣರು ಕಟ್ಟಿ ಬೆಳೆಸಿದ್ದ
'ದಲಿತ ದ್ವೇಷಿ'
ಪ್ರಭುತ್ವವೊಂದರ ಕೆಳಗೆ ತುಳಿತಕ್ಕೊಳಗಾದ ವರ್ಗವಾಗಿದ್ದರು.
ಆದರೆ ಈಗ ಅದೇ ಸಾಮಾಜಿಕ ಶ್ರೇಷ್ಠ ವರ್ಗ ದಲಿತರ
ದೈತ್ಯಬಲದ ಮುಂದೆ ತಲೆ ತಗ್ಗಿಸಿದೆ.
ಆದರೆ ಭಾರತೀಯ ಸಮಾಜದಲ್ಲಿ ದಲಿತರು ಮತ್ತು
ಬ್ರಾಹ್ಮಣರು ಮಾತ್ರ ಇರುವುದಲ್ಲ.
ರಜಪೂತರು ಅಥವಾ ಕ್ಷತ್ರಿಯರು ಐತಿಹಾಸಿಕವಾಗಿ
ಆಡಳಿತದ ಚುಕ್ಕಾಣಿ ಹಿಡಿದವರು.
ಇವರು ದಲಿತ-
ಬ್ರಾಹ್ಮಣ ಬಾಂಧವ್ಯದಿಂದ ಹೊರತಾಗಿದ್ದಾರೆ.
ಒಬಿಸಿಗಳು ಅಥವಾ ಶೂದ್ರರು ರಾಜಕೀಯ ವ್ಯವಸ್ಥೆಯ
ಮತ್ತೊಂದು ವಾರಸುದಾರರು.
ಇವರೂ ದಲಿತ-ಬ್ರಾಹ್ಮಣ
ಮೈತ್ರಿ ಕೂಟದಿಂದ ಹೊರಗುಳಿದಿದ್ದಾರೆ.
ಮಾಯಾ ಅವರ ಸಾಮಾಜಿಕ ರಚನೆಯನ್ನು ಆಳವಾಗಿ
ಅವಲೋಕಿಸಿದರೆ ಅವರ ಪರವಾಗಿ ಬಂದ ಜನಾದೇಶ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್
ಯಾದವ್ ಅವರ ವಿರೋಧಿ ಅಲೆ ಮಾತ್ರವಲ್ಲ.
ಒಬಿಸಿಗಳ,
ರಜಪೂತರ ಮತ್ತು ಜಾಟ್ ಜನಾಂಗದ ವಿರುದ್ಧ ಬಂದ
ಜನಾದೇಶವದು.
ಈಗ ಮಾಯಾ ಅವರು ಹೇಗೆ ಚಾಣಾಕ್ಷತೆಯಿಂದ ದಲಿತ-ಬ್ರಾಹ್ಮಣ
ಮೈತ್ರಿ ಕೂಟವನ್ನು ವಿನ್ಯಾಸಗೊಳಿಸಿದ್ದಾರೆಯೋ,
ಅದೇ ರೀತಿ ಈ ಹಿಂದೆ ಮುಲಾಯಂ ಸಿಂಗ್ ಅವರು ಯಾದವ-
ರಜಪೂತ ಮೈತ್ರಿಕೂಟವನ್ನು ಕಟ್ಟಿ ಬೆಳೆಸಿದ್ದರು.
ದಲಿತರ ಮೇಲೆ ಶೋಷಣೆ ನಡೆದಾಗಲೆಲ್ಲ ಆರೋಪಿ
ಸ್ಥಾನದಲ್ಲಿರುವುದು ರಜಪೂತ್/ಜಾಟ್
ಅಥವಾ ಮೇಲ್ವರ್ಗದ ಒಬಿಸಿಗಳು.
ಇದು ಸಮಗ್ರ ಭಾರತದಲ್ಲಿ ಕಂಡು ಬರುವ
ಚಿತ್ರಣವೆಂದರೆ ತಪ್ಪಿಲ್ಲ.
ಏಕೆಂದರೆ ಎಲ್ಲೇ ಹಿಂಸಾಕೃತ್ಯಗಳು ನಡೆಯಲಿ
ಅಲ್ಲೆಲ್ಲಾ ಮಧ್ಯಮ ಜಾತಿಯವರೇ ದಬ್ಬಾಳಿಕೆ ನಡೆಸಿರುತ್ತಾರೆ.
ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ
ತಿರುವು ಮರುವಾಗಿದೆ.
ಈವರೆಗೂ ಉತ್ತರ ಪ್ರದೇಶದ ಜನಾದೇಶದ ಬಗ್ಗೆ ಮತ್ತು ದಲಿತರು
ತಮ್ಮನ್ನು ಆಳುತ್ತಿದ್ದಾರೆ ಎಂಬ ವಿಚಾರವನ್ನು ಸೈರಿಸಲಾರದೆ ಒಬಿಸಿಗಳು/ಜಾಟರು
ಮತ್ತು ರಜಪೂತರು ಅಸಮಾಧಾನದ ಬೆಂಕಿಯಲ್ಲಿ ಬೇಯುತ್ತಿದ್ದಾರೆ.
ಇದಕ್ಕೆ ಉತ್ತಮ ಉದಾಹರಣೆ ಟಿಕಾಯಿತ್.
ಅವರು ಮಾಯಾವತಿ ವಿರುದ್ಧ ಜಾತಿನಿಂದನೆ ಮಾಡಿದ್ದೇ
ಅಲ್ಲದೆ,
ತಮ್ಮ ಜಾಟ್ ಜನಾಂಗದ ಕೆಲವರು ದಲಿತರ ನೇತೃತ್ವದಲ್ಲಿರುವ
ಸರ್ಕಾರಕ್ಕೆ ಮತ ಹಾಕಿದ್ದಾರೆ ಎಂದು ಅತೃಪ್ತಿ ಪ್ರಕಟಿಸಿದ್ದಾರೆ.
ಇಲ್ಲಿ ನಾವು ಉತ್ತರ ಪ್ರದೇಶದ ಜನಾದೇಶದ ಬಗ್ಗೆ
ಟಿಕಾಯಿತ್ ಅವರ ಅಸಮಾಧಾನವನ್ನು ಸ್ಪಷ್ಟವಾಗಿ ಕಾಣಬಹುದು.
ಮಾಯಾವತಿ ವಿರುದ್ಧ ಜಾತಿನಿಂದನೆ ಮಾಡಿರುವುದು
ದೊಡ್ಡ ಅಪರಾಧವೇನಲ್ಲ,
ತಾನು ಕೀಳು ಭಾಷಾಪ್ರಯೋಗ ಮಾಡಿಲ್ಲ,
ಅಲ್ಲದೆ ಈ ರೀತಿಯ ನಿಂದನೆ ನಮ್ಮ ದೇಶದಲ್ಲಿ
ಸಾಮಾನ್ಯ ಎಂದು ಮಾಧ್ಯಮಗಳಲ್ಲಿ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ!
ದಲಿತರ ಮೇಲಿನ ಶೋಷಣೆಯನ್ನು ಇನ್ನೊಂದು ಬಗೆಯಲ್ಲೂ
ವ್ಯಾಖ್ಯಾನಿಸಬಹುದು.
ಶೋಷಣೆಗೆ ಒಳಗಾಗುವ ದಲಿತರು ಬಡವರೇನೂ ಅಲ್ಲ.
ದಲಿತರಲ್ಲಿ ಬಹುತೇಕರು ಉತ್ತಮ ದರ್ಜೆಯ ಜೀವನ
ನಡೆಸುತ್ತಿದ್ದಾರೆ.
ಉದಾಹರಣೆಗೆ ಪಶ್ಚಿಮ ಉತ್ತರ ಪ್ರದೇಶ,
ರಾಜಸ್ತಾನ ಮತ್ತು ಹರಿಯಾಣಗಳಲ್ಲಿ ಸಾಮಾನ್ಯವಾಗಿ
ದಲಿತ ವಧು-ವರರ
ಮೇಲೆ ಮತ್ತು ಮದುವೆ ಮೆರವಣಿಗೆ ಮೇಲೆ ಗ್ರಾಮಸ್ಥರು ಆಕ್ರಮಣ ನಡೆಸಿದ ಸುದ್ದಿ
ಕೇಳುತ್ತಲೇ ಇರುತ್ತೇವೆ.
ಕಾರಣ?
ವಧುವರರು ಕುದುರೆ ಮೇಲೆ ಮೆರವಣಿಗೆ ಹೊರಟಿರುತ್ತಾರೆ.
ಅಂದರೆ ದಲಿತ ವಧು-ವರರನ್ನು
ಸೈಕಲ್ ರಿಕ್ಷಾದ ಮೇಲೆ ಮೆರವಣಿಗೆ ಕರೆದುಕೊಂಡು ಹೋಗುವುದನ್ನು
ಒಪ್ಪಿಕೊಳ್ಳಬಹುದು.
ಆದರೆ ಕುದುರೆ ಮೇಲಲ್ಲ!
ಮಾಯಾವತಿ ಆಡಳಿತದ ಉತ್ತರಪ್ರದೇಶದಲ್ಲಿ ದಲಿತರ
ಮೇಲೆ ನಡೆಯುತ್ತಿರುವ ಶೋಷಣೆಯನ್ನು ಇಂತಹ ವಿಶಾಲ ಸಾಮಾಜಿಕ ಚೌಕಟ್ಟನ್ನು
ಆಧರಿಸಿ ಪರಿಶೀಲಿಸಬೇಕು.
ಮೊತ್ತಮೊದಲನೆಯದಾಗಿ ತಮ್ಮ ಶತ್ರುವಿನ ಮೇಲೆ ದಾಳಿ
ನಡೆಸುವಾಗ ಬಂದೂಕುಗಳು ಅಥವಾ ಚೂಪಾದ ಅಲಗುಗಳಿರುವ ವಸ್ತುಗಳನ್ನೇ ಬಳಸುವುದೇಕೆ?
ಶತ್ರುವಿಗೆ ಬೆದರಿಕೆ ಹಾಕಿ,
ಬೈಗುಳ ಹರಿಸಿ ಅಥವಾ ಸಣ್ಣ ಪುಟ್ಟ ಹೊಡೆದಾಟಗಳ
ಮೂಲಕ ಸಿಟ್ಟನ್ನು ತೋರ್ಪಡಿಸುವುದಿಲ್ಲವೇಕೆ?
ದಾಳಿ ಮಾಡುವವರ ಜೀವನಕ್ಕೆ ಶತ್ರುವಿನಿಂದ ನಿಜವಾದ
ಬೆದರಿಕೆ ಎನಿಸಿದಾಗ ಅಥವಾ ಆತ ನಿರ್ಧಿಷ್ಟ ಸಾಮಾಜಿಕ ಮಿತಿಯನ್ನು ಮೀರಿ
ನಡೆದಿದ್ದಾನೆ ಎಂದು ಅನಿಸಿದಲ್ಲಿ ಮಾತ್ರ ಮಾರಕಾಸ್ತ್ರಗಳನ್ನು ಬಳಸುತ್ತಾರೆ!
ಉತ್ತರ ಪ್ರದೇಶದಲ್ಲಿ ದಲಿತರು ನಿಧಾನವಾಗಿ
ಸಮೃದ್ಧಿಯ ಕಡೆಗೆ ಹೆಜ್ಜೆ ಹಾಕುತ್ತಿರುವುದರಿಂದ,
ಒಂದು ಕಾಲದಲ್ಲಿ ಪ್ರಭಾವಿ ವರ್ಗದ
ಒಡೆತನದಲ್ಲಿದ್ದ ವ್ಯಾವಹಾರಿಕ ಮಾರುಕಟ್ಟೆ ನಿಧಾನವಾಗಿ ಕೈ ಜಾರುತ್ತಿರುವ
ಆತಂಕವೇ ಈ ದಾಳಿಗಳಿಗೆ ಮೂಲ ಕಾರಣ.
ಭೂ ಸಂಪನ್ಮೂಲಗಳು ಮತ್ತು ಸ್ಥಳೀಯ
ಸಂಸ್ಥೆಗಳಲ್ಲಿ ದಲಿತರ ಪ್ರಭಾವ ಹೆಚ್ಚಾಗುತ್ತಿರುವುದರಿಂದ ಉತ್ತರ ಪ್ರದೇಶದ
ರಾಜಕೀಯ ಅಧಿಕಾರ ಸ್ವರೂಪವೂ ಬದಲಾಗುತ್ತಿದೆ ಎನ್ನುವುದು ಒಬಿಸಿ ಜನಾಂಗದ
ವ್ಯಾಪಕ ಅಭಿಪ್ರಾಯ.
ಪ್ರಜಾಪ್ರಭುತ್ವದ ಬೇರುಗಳು ಆಳವಾಗಿ
ವ್ಯಾಪಿಸುತ್ತಿರುವಂತೆಯೇ ಪ್ರಭಾವೀ ಎನಿಸಿದ್ದವರೆಲ್ಲಾ ಸ್ಪರ್ಧೆಯಲ್ಲಿ ಹಿಂದೆ
ಬೀಳುತ್ತಿದ್ದಾರೆ.
ಉತ್ತರ ಪ್ರದೇಶದ ರಾಜಕೀಯದಲ್ಲಿ ಮಾಯಾ ಅವರ
ಹಠಾತ್ ವೈಭವದಿಂದ 'ಪ್ರಭಾವ'ದ
ಅರ್ಥವೇ ಬದಲಾಗಿ ಹೋಗಿದೆ.
ದಲಿತರು ಮತ್ತು ಬ್ರಾಹ್ಮಣರ ನಡುವಿನ ಈ ಹೊಸ
ಬಾಂಧವ್ಯದಿಂದಾಗಿ ರಜಪೂತರು/ಜಾಟರು/ಒಬಿಸಿಗಳಿಗೆ
ಉಸಿರು ಕಟ್ಟಿದಂತಾಗಿದೆ.
ಇದೇ ಒಂದು ವಿಧದ ಸಾಮಾಜಿಕ ಸಂಘರ್ಷದ ರೂಪ ತಾಳಿದೆ ಮತ್ತು
ಇದರ ಪ್ರತಿಫಲವೇ ದಲಿತರ ಮೇಲಿನ ದಾಳಿಗಳು.
ಟಿಎಸ್‌ಐ
|