ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಬಣ್ಣದ ಲೋಕ
 
 

ಇದೆಷ್ಟು ಸರಿ?

ಹದಿನೈದರ ಚದುರೆ ಮಿಲಿ ಸೈರಸ್ ಕ್ಷಮೆ ಕೇಳಿ ಸುಸ್ತಾಗಿದ್ದಾಳೆ. ಹೌದು ಸ್ವಾಮಿ, ತೆಳುವಾದ ಹೊದಿಕೆ ಹೊದ್ದು ಬೆನ್ನು ಹಾಗೂ ಭುಜ ಪ್ರದರ್ಶಿಸುತ್ತಿರುವ ಕುಖ್ಯಾತ ನಗ್ನ ಭಾವಚಿತ್ರಕ್ಕಾಗಿ! 'ವ್ಯಾನಿಟಿ ಫೇರ್' ವೆಬ್‌ಸೈಟ್‌ನಲ್ಲಿ ಈ ಫೋಟೊ ಪ್ರಕಟವಾಗಿತ್ತು. ಕೆಟ್ಟ ಮೇಲೆ ಬುದ್ಧಿ ಬಂತು... ಅಂದಿರಾ? ಅದೇನೇ ಇರಲಿ. ಎಳೆಯ ವಯಸ್ಸಿನ ಮಕ್ಕಳು ಮುಗ್ಧತೆ ಕಳೆದುಕೊಂಡು ಕೇವಲ ಮಾದಕವಾಗಿ ಕಾಣಬೇಕು ಎಂಬ ಉದ್ದೇಶದಿಂದ ಇಂತಹ ತಪ್ಪು ದಾರಿ ಹಿಡಿಯುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನೂ ನಮ್ಮ ಮುಂದಿಟ್ಟಿದ್ದಾಳೆ ಮಿಲಿ ಸೈರಸ್.

'ಪರಿಚಯ' ಪ್ರಸಂಗ

ತುಂಟ ಕಂಗಳ ಚಿಗರೆ ರೇಖಾ ಈಗ ಸೋಲಿನ ಕುದುರೆ! ಅಯ್ಯೋ ಇದನ್ನು ನಾವು ಹೇಳ್ತಿಲ್ಲ. ಗಾಂಧಿನಗರವಿಡೀ ಕಿಚಾಯಿಸ್ತಿದೆ. 'ಹುಡುಗಾಟ'ದಲ್ಲಿ ಚಿನ್ನದ ಹುಡುಗ ಗಣೇಶನ ಮಾಯಾಜಾಲವೇನೋ ಬಚಾವ್ ಮಾಡಿತ್ತು. ಆದರೆ 'ಹೆತ್ತರೆ ಹೆಣ್ಣೇ ಹೆರಬೇಕು' ತೋಪೆದ್ದು ಹೋಯಿತು. 'ಆಕ್ಸಿಡೆಂಟ್'ನ್ನು ನಿರ್ದೇಶಕ ರಮೇಶ್ ಅವರೇ 'ಬಾಲ್ಕನಿ ಬಾದ್‌ಶಾ' ಎಂದಿದ್ದಾರೆ. ಈ ಚಿತ್ರ ಸೋತಿದೆ ಎಂದು ಚಿತ್ರರಂಗವಿಡೀ ಬೊಬ್ಬಿಡುತ್ತಿದೆ. ಇಷ್ಟೆಲ್ಲಾ ಆದ್ಮೇಲೆ ಈಗ ಸುದ್ದಿ ಏನೆಂದರೆ, ರೇಖಾ ಮತ್ತೆ ಗಾಂಧಿನಗರಕ್ಕೆ ಕಾಲಿಟ್ಟಿದ್ದಾಳೆ! 'ಹುಡುಗಾಟ' ಮಾಡಿ ಗೆದ್ದ ನಿರ್ದೇಶಕ ಸಂಜಯ್ ಅವರ ಮುಂದಿನ ಚಿತ್ರ 'ಪರಿಚಯ'ಕ್ಕೆ ರೇಖಾ ನಾಯಕಿ. 'ಗೆಳೆಯ', 'ಹನಿ ಹನಿ' ಎನ್ನುತ್ತಾ ಸ್ಯಾಂಡಲ್‌ವುಡ್‌ನಲ್ಲಿ ತೆವಳುತ್ತಿರೋ ತರುಣ್ ನಾಯಕ. ಬರೋಬ್ಬರಿ ಜೋಡಿ ಬಿಡಿ ಸ್ವಾಮಿ. ಗುಡ್‌ಲಕ್ ಸಂಜಯ್!

ಅಮೀರ್ ದುರದೃಷ್ಟ

ಸಂತೋಷ್ ಮೊಗದಲ್ಲಿ ಈಗ ನಗುವೋ ನಗು! ಯಾರು ಸ್ವಾಮಿ ಈ ಸಂತೋಷ್ ಎಂದು ಅಚ್ಚರಿಯೆ? ಚೊಚ್ಚಲ ಚಿತ್ರ 'ಕೆಂಪ' ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ ನಿರ್ದೇಶಕ ಚಕ್ರವರ್ತಿ ಅವರ ಹೊಸ ಚಿತ್ರ 'ಜನ್ಮ'ಕ್ಕೆ ನಾಯಕನಾಗೋ ಅದೃಷ್ಟ ಗಿಟ್ಟಿಸಿಕೊಂಡಾತ. ಸಂತೋಷ್ ಏಕೆ? ಮೊನ್ನೆ ಮೊನ್ನೆ 'ದುನಿಯಾ' ಚಿತ್ರದಲ್ಲಿ 'ಲೂಸ್ ಮಾದ' ಎನ್ನುತ್ತಾ ಕಣ್ಣು ಬಿಟ್ಟಿದ್ದ ಯೋಗೀಶ್ 'ನಂದ ಲವ್ಸ್ ನಂದಿತ' ಚಿತ್ರದ ಯಶಸ್ಸಿನ ನಂತರ ಗಾಂಧಿನಗರದ ಹಾಟ್ ಪ್ರಾಪರ್ಟಿ! 'ಒರಟ ಐ ಲವ್ ಯೂ' ಎನ್ನುತ್ತಾ ಬಂದ ಪ್ರಶಾಂತ್, 'ಆ ದಿನಗಳು' ಮೂಲಕ ಪರಿಚಯವಾದ ಚೇತನ್ ಈಗ ಎರಡೆರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಂತೂ ಸ್ಯಾಂಡಲ್‌ವುಡ್‌ನಲ್ಲಿ ಹೊಸಬರಿಗೆ ರೆಡ್ ಕಾರ್ಪೆಟ್!

ರೆಡ್ ಕಾರ್ಪೆಟ್!

ಸಂತೋಷ್ ಮೊಗದಲ್ಲಿ ಈಗ ನಗುವೋ ನಗು! ಯಾರು ಸ್ವಾಮಿ ಈ ಸಂತೋಷ್ ಎಂದು ಅಚ್ಚರಿಯೆ? ಚೊಚ್ಚಲ ಚಿತ್ರ 'ಕೆಂಪ' ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ ನಿರ್ದೇಶಕ ಚಕ್ರವರ್ತಿ ಅವರ ಹೊಸ ಚಿತ್ರ 'ಜನ್ಮ'ಕ್ಕೆ ನಾಯಕನಾಗೋ ಅದೃಷ್ಟ ಗಿಟ್ಟಿಸಿಕೊಂಡಾತ. ಸಂತೋಷ್ ಏಕೆ? ಮೊನ್ನೆ ಮೊನ್ನೆ 'ದುನಿಯಾ' ಚಿತ್ರದಲ್ಲಿ 'ಲೂಸ್ ಮಾದ' ಎನ್ನುತ್ತಾ ಕಣ್ಣು ಬಿಟ್ಟಿದ್ದ ಯೋಗೀಶ್ 'ನಂದ ಲವ್ಸ್ ನಂದಿತ' ಚಿತ್ರದ ಯಶಸ್ಸಿನ ನಂತರ ಗಾಂಧಿನಗರದ ಹಾಟ್ ಪ್ರಾಪರ್ಟಿ! 'ಒರಟ ಐ ಲವ್ ಯೂ' ಎನ್ನುತ್ತಾ ಬಂದ ಪ್ರಶಾಂತ್, 'ಆ ದಿನಗಳು' ಮೂಲಕ ಪರಿಚಯವಾದ ಚೇತನ್ ಈಗ ಎರಡೆರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಂತೂ ಸ್ಯಾಂಡಲ್‌ವುಡ್‌ನಲ್ಲಿ ಹೊಸಬರಿಗೆ ರೆಡ್ ಕಾರ್ಪೆಟ್!

ಮಲ್ಲಿಕಾವತಾರಂ!

ಹಿರಿಯರೆದುರು ಚಪ್ಪಲಿ ಧರಿಸಿ ನಡೆಯುವುದೇ ಪಾಪ ಎಂಬ ಧೋರಣೆ ಇರುವಲ್ಲಿ ತುಂಡುಡುಗೆ ತೊಟ್ಟು ಬಂದರೆ ಏನಾದೀತು? ಆಗೋದೇನು? ಮಲ್ಲಿಕಾ ಶೆರಾವತ್ ಕಥೆಯಾದೀತು ಅಷ್ಟೆ. ಕಮಲ್ ಹಾಸನ್ ಅವರ 'ದಶಾವತಾರಂ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಮಾದಕ ನಟಿ ಮಲ್ಲಿಕಾ ಖಾಲಿ ಬೆನ್ನು ಮತ್ತು ನೀಳ ಕಾಲುಗಳ ಪ್ರದರ್ಶಿಸುತ್ತಾ ಕರಿ ತುಂಡುಡುಗೆ ತೊಟ್ಟು ಬಂದಿದ್ದಳು. ತಮಿಳು ಮಂದಿ ಸುಮ್ಮನಾದಾರೇ? ಮುಖ್ಯಮಂತ್ರಿ ಎದುರು ನೀಟಾಗಿ ಉಡುಪು ಧರಿಸಿಲ್ಲ ಎಂಬ ಕಾರಣಕ್ಕೆ ಬಲಪಕ್ಷಗಳು ಆಕೆಯ ಮೇಲೆ ದೂರು ಸಲ್ಲಿಸಿವೆ. ಎಚ್ಚರವಿರಲಿ ಮಲ್ಲಿಕಾ. ಇಲ್ಲಿ ನಿನ್ನಾಟ ನಡೆಯೋಲ್ಲ....

ರೇಸ್ ಹುಡುಗಿ ಕಥೆ

ಬಿಪ್ಸ್ ಎಂಬ ಮಾಯಾಂಗನೆ ವಿವಾದಕ್ಕೆ ಬಿದ್ದು ಒದ್ದಾಡುತ್ತಿದ್ದಾಳೆ. 'ಮತ್ತೆ ಜಾನ್...' ಎಂದು ಆಕಳಿಸಬೇಕಿಲ್ಲ. ಇದು ಒಂಥರಾ ವಿಶೇಷ ಸುದ್ದಿ!? ವಿಜ್‌ಕ್ರ್ಯಾಫ್ಟ್ ಸಂಸ್ಥೆ ಬಿಪಾಶಾ ಮೇಲೆ ಪ್ರಕರಣ ದಾಖಲಿಸಿದೆ. ಬಚ್ಚನ್ ಕುಟುಂಬದ 'ಅನ್‌ಫಾರ್ಗೆಟೆಬಲ್ ಟೂರ್'ಗೆ ಬಿಪ್ಸ್ ಮಿತಿಮೀರಿ ದುಡ್ಡು ಕೇಳಿದ್ದೇ ಕಾರಣ. 'ರೇಸ್' ಹಿಟ್ ಆಗಿದ್ದೇ ತಡ ಬಿಪಾಶಾ ಸಂಭಾವನೆ ಏರಿಸಿದ್ದಾಳೆ. 'ಕೊಡಲ್ಲ' ಅಂದದ್ದೇ ಟೂರ್‌ನಿಂದ ಹೊರನಡೆದೇ ಬಿಟ್ಟಳು ಮಹಾರಾಣಿ. ಪಂಚಾಯ್ತಿ ಗಿಂಚಾಯ್ತಿ ಮಾಡ್ಕೊಂಡು ಸರಿ ಮಾಡ್ಕೊಳ್ರಪ್ಪಾ. ಇದು ಟಿಆರ್‌ಪಿ ಕಾಲ!

ಜೆನಿಫರ್ ರಂಪಾಯಣ!

ಬಳುಕುವ ಸೊಂಟದ ಸಣಕಲು ಬೆಡಗಿ ಜೆನಿಫರ್ ಕೊತ್ವಾಲ್ 'ಮುಡ್ ಮುಡ್ ಕೇ ನಾ ದೇಖೋ ಮುಡ್ ಮುಡ್ ಕೇ'ನಲ್ಲಿ ಬಾಲಿವುಡ್ ಅವಕಾಶ ಗಿಟ್ಟಿಸಿಕೊಂಡ ವಿಷ್ಯ ತಿಳಿದೇ ಇದೆಯಲ್ಲಾ? 'ಮುಡ್ ಮುಡ್ ಕೇ...'ನಲ್ಲಿ ಈಕೆಗೆ ಎರಡನೇ ನಾಯಕಿ ಪಟ್ಟ ಎಂದು ಗುಲ್ಲೆದ್ದಿದ್ದೇ ತಡ, ಈಕೆ ಸಿಡಿದು ಬಿದ್ದಿದ್ದಾಳೆ. ಹೀಗೆ ಗಾಸಿಪ್ ಹರಡಿಸಿದ ಮತ್ತೊಬ್ಬ ನಾಯಕಿ ನಿಹಾರಿಕಾ ಸಿಂಗ್ ಜೊತೆ ತಗಾದೆ ತೆಗೆದಿದ್ದಾಳೆ. 'ಜೋಗಿ' ಚಿತ್ರದಲ್ಲಿ 'ಚುಕು ಬುಕು ರೈಲು, ನಿಲ್ಲೋದಿಲ್ಲ ಎಲ್ಲು, ಯಾಕಿಂಗೆ ಓಡುತೈತೋ...' ಎಂದು ಸೊಂಟ ಕುಣಿಸುತ್ತಾ ಸ್ಯಾಂಡಲ್‌ವುಡ್‌ನ್ನು ಅಲುಗಿಸಿದ್ದ ಈ ಪೋರಿ ಕನ್ನಡದವಳೇ ಆಗಿ ಬಿಟ್ಟಿದ್ದಳು. ಆದರೇನು ಸ್ವಾಮಿ? ಥಳುಕು-ಬಳುಕಿನ ಬಾಲಿವುಡ್‌ಗೆ ದಕ್ಷಿಣದ ಜನಪ್ರಿಯತೆ, ದುಡ್ಡು ಯಾವ ಲೆಕ್ಕ ಹೇಳಿ? ಆದರೆ ನಮ್ಮ ಬೆಡಗಿಯರ ಬಾಲಿವುಡ್ ಕನಸಿಗೆ ಕೊನೆ ಎಂಬುದಿಲ್ಲ. ಅಂದ ಮೇಲೆ ಈ ರಂಪ- ರಾಮಾಯಣ ಬೇಕೇ ಬೇಕು! ಇಲ್ಲಾ ಅಂದ್ರೆ ಪ್ರಚಾರ ಸಿಕ್ಕೋದು ಹ್ಯಾಗಪ್ಪಾ? ಎಲ್ಲಾ ಪಬ್ಲಿಸಿಟಿ ತಂತ್ರ!

ಎನ್.ಕೆ. ಸುಪ್ರಭ, ನೇಹಾ ಸರಿನ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .