ಹಣದುಬ್ಬರ: ಸಮಸ್ಯೆ
ಪ್ರಭಾವದ ಪರಿಧಿಯ ಹೊರಗೆ...
ಲ್ಯಾಟಿನ್ ಅಮೆರಿಕ ಎಷ್ಟು ದಿನ ಜಾಗತಿಕ ಬಿಕ್ಕಟ್ಟಿನಿಂದ ದೂರವಿರಬಹುದು?

ಜಾಗತಿಕವಾಗಿ ಪ್ರಗತಿಯಲ್ಲಿ ನಾಗಾಲೋಟ ಕಿತ್ತ ದಿನಗಳು ಕಳೆದವು.
ಈಗ ಜಗತ್ತೇ ಹಿಂದಕ್ಕೆ ಹೆಜ್ಜೆ ಇಡುತ್ತಿದೆ.
ಸಬ್‌ಪ್ರೈಮ್ ಸಾಲ ಬಿಕ್ಕಟ್ಟು ಮತ್ತು ಇತರ ಸಾಲ ಸಮಸ್ಯೆಗಳು ಜಾಗತಿಕ
ನೆಲೆಯಲ್ಲಿ ಅಲೆ ಎಬ್ಬಿಸಿರುವುದು ಮಾತ್ರವಲ್ಲ,
ತೃತೀಯ ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪ್ರಗತಿಗೆ ತೀವ್ರ ಹಿನ್ನಡೆ
ಮತ್ತು ತಡೆ ಒಡ್ಡಿವೆ.
ಹಾಗೆಯೇ ನಾನಾ ವಿಧದ ಸಂಸ್ಕೃತಿಗಳ ನೆಲೆವೀಡಾಗಿರುವ ಲ್ಯಾಟಿನ್ ಅಮೆರಿಕಕ್ಕೆ ಮಾತ್ರ ಈ ಜಾಗತಿಕ
ಬಿಕ್ಕಟ್ಟು ಮತ್ತು ದೀರ್ಘಕಾಲೀನ ಹಾಹಾಕಾರದ ಬಿಸಿ ತಟ್ಟಿಲ್ಲ.
1960ರಿಂದ ಲ್ಯಾಟಿನ್ ಅಮೆರಿಕ ಪ್ರಗತಿಯ
ಹಾದಿಯಲ್ಲಿದೆ.
'ಲ್ಯಾಟಿನ್ ಅಮೆರಿಕ ಮತ್ತು
ಕೆರಿಬಿಯನ್ ದೇಶಗಳ ವಿಶ್ವಸಂಸ್ಥೆಯ ಆರ್ಥಿಕ ಆಯೋಗ'
ನೀಡಿದ ವರದಿಗಳ ಪ್ರಕಾರ ಈ ಖಂಡ ಶೇ.
5ರ ಪ್ರಗತಿ ದರ ದಾಖಲಿಸಿದೆ.
ಅಂದಾಜು ಶೇ.
5.3
ವಾರ್ಷಿಕ ಪ್ರಗತಿ ದರದಲ್ಲಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆದಿದೆ.
ಮುಂಬರುವ ದಿನಗಳಲ್ಲಿ ಶೇ.
3.8
ಪ್ರಗತಿ ದರ ದಾಖಲಿಸುವ ನಿರೀಕ್ಷೆ ಇದೆ.
ಇಲ್ಲಿ ಹಣ ದುಬ್ಬರವೂ ಮಂದಗತಿಯಲ್ಲಿದೆ.
ವಿದೇಶಿ ಹೂಡಿಕೆಗಳು ಮಾತ್ರ ದಾಖಲೆ ದರದಲ್ಲಿ ಏರುತ್ತಿವೆ.
ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳಲ್ಲಿ ವಿದೇಶಿ ನೇರ ಹೂಡಿಕೆ
ಅತ್ಯಧಿಕ 125 ಶತಕೋಟಿ ಡಾಲರ್‌ಗಳ
ಮಟ್ಟದಲ್ಲಿವೆ. ಲ್ಯಾಟಿನ್
ಅಮೆರಿಕದ ಪ್ರಮುಖ ಅರ್ಥವ್ಯವಸ್ಥೆಗಳಾದ ಬ್ರೆಜಿಲ್,
ಚಿಲಿ,
ವೆನೆಜುವೆಲಾ ಮತ್ತು ಮೆಕ್ಸಿಕೊ ಮೊದಲಾದುವುಗಳಲ್ಲಿ ಆಂತರಿಕ ನೇರ ವಿದೇಶಿ ಹೂಡಿಕೆ
ದ್ವಿಗುಣಗೊಂಡಿವೆ. ಮೆಕ್ಸಿಕೊ
ಶೇ. 80ರಷ್ಟು
ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತಿದೆ.
ಆದರೆ ಈ ಸಮೃದ್ಧಿಗೆ ಬರೀ ವೀಕ್ಷಕನಾಗುವ ಭಾಗ್ಯವಷ್ಟೇ ಅಮೆರಿಕಕ್ಕೆ
ಒದಗಿ ಬಂದಿದೆ. ಅಮೆರಿಕದ
ಸಾಲ ಬಿಕ್ಕಟ್ಟು ಅಥವಾ ಜಾಗತಿಕ ಆರ್ಥಿಕ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿರುವ ಪರಿಣಾಮಗಳು
ಲ್ಯಾಟಿನ್ ಅಮೆರಿಕದಲ್ಲಿ ಕಾಣಸಿಗುವುದಿಲ್ಲ.
ಅಮೆರಿಕದ ಬಡ್ಡಿದರ ಕಡಿತದಿಂದಾಗಿ ಈಗ ಜಾಗತಿಕ ಹೂಡಿಕೆದಾರರು ಲ್ಯಾಟಿನ್
ಅಮೆರಿಕದ ಒಡಂಬಡಿಕೆ ಮತ್ತು ಷೇರುಗಳ ಸಮೃದ್ಧಿಯತ್ತ ಆಕರ್ಷಿತರಾಗುತ್ತಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಾಂತದ ಅರ್ಥ ವ್ಯವಸ್ಥೆಗಳ ಕರೆಂಟ್
ಅಕೌಂಟ್ (ಚಾಲ್ತಿ ಲೆಕ್ಕ)
ಮತ್ತು ಫಿಸ್ಕಲ್ ಅಕೌಂಟ್‌ಗಳು
(ವಿತ್ತವರ್ಷದ ಲೆಕ್ಕ)ಗಳು
ಅಧಿಕ ಆದಾಯ ದಾಖಲಿಸಿವೆ.
ಈವರೆಗೂ ಲ್ಯಾಟಿನ್ ಅಮೆರಿಕದ ಅರ್ಥ ವ್ಯವಸ್ಥೆಗಳು ಯಶಸ್ಸಿನ ಹಾದಿ
ತುಳಿದಿವೆಯಾದರೂ,
ಇತ್ತೀಚೆಗಿನ ಜಾಗತಿಕ ಇಂಧನ ದರ ಏರಿಕೆ ಮತ್ತು ಆಹಾರ ಬಿಕ್ಕಟ್ಟಿನಿಂದಾಗಿ ಈ ದೇಶಗಳ ಮೇಲೆ ಒತ್ತಡ
ಮತ್ತು ಆತಂಕ ಹೆಚ್ಚಾಗುತ್ತಿರುವುದನ್ನು ಅಲ್ಲಗಳೆಯಲಾಗದು.
ಹಣದುಬ್ಬರ ಏರುತ್ತಲೇ ಇದೆ.
ಚಿಲಿ,
ಮೆಕ್ಸಿಕೊ,
ಬ್ರೆಜಿಲ್ ಮತ್ತು ಅರ್ಜೆಂಟಿನಾಗಳಲ್ಲಿ ಕೇಂದ್ರ ಬ್ಯಾಂಕ್‌ಗಳು ನಿಗದಿ ಮಾಡಿದ
ಮಿತಿಯನ್ನು ಮೀರಿ ಬೆಳೆಯುತ್ತಿದೆ.
ಇತ್ತೀಚೆಗೆ ಹಣದುಬ್ಬರವನ್ನು ಇಳಿಸಲು ಬೆಲೆ ಏರಿಕೆ ನಿರ್ಧಾರ ಕೈಗೊಂಡಿರುವ
ಕೇಂದ್ರೀಯ ಬ್ಯಾಂಕ್‌ಗಳು ಹಣ ಪ್ರವಾಹವನ್ನು ಬಿಗಿಗೊಳಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಿವೆ.
ಸರ್ಕಾರಗಳೂ ಹಣದುಬ್ಬರ ನಿಯಂತ್ರಣಕ್ಕಾಗಿ ಪೂರ್ವಭಾವಿ ಕ್ರಮಗಳನ್ನು
ಕೈಗೊಂಡಿವೆ.
ಪೆರುವಿನ 15
ಶತಕೋಟಿ ಡಾಲರ್‌ಗಳ ತಾಮ್ರ ಮಾರಾಟ,
ಇತ್ತೀಚೆಗೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿದ ಮೆಕ್ಸಿಕೊ
ಕ್ರಮದಿಂದಾಗಿ ಅರ್ಥ ವ್ಯವಸ್ಥೆಗೆ ಶೇ.
ಒಂದರಷ್ಟು ಒಟ್ಟು ರಾಷ್ಟ್ರೀಯ ಉತ್ಪನ್ನದ ಕೊಡುಗೆ,
ಇಂಧನ ಸಾಮರ್ಥ್ಯ ಹೆಚ್ಚಳಕ್ಕೆ ವೆನೆಜುವೆಲಾದ ಪ್ರಯತ್ನಗಳು...
ಇವು ಲ್ಯಾಟಿನ್ ಅಮೆರಿಕ ದೇಶಗಳು ನಿಧಾನವಾಗಿ ಇತರ ದೇಶಗಳ ಮೇಲಿನ
ಪರಾವಲಂಬನೆಯನ್ನು ಕೊಡವಿಕೊಳ್ಳುತ್ತಿರುವುದಕ್ಕೆ ಸಾಕ್ಷಿಗಳಾಗಿವೆ.
ಹಾಗಿದ್ದಾಗ್ಯೂ ಸಮೃದ್ಧಿಯ ಸೂಕ್ತ ಹಂಚಿಕೆ ಈ ದೇಶಗಳ ಮುಂದಿರುವ ಪ್ರಮುಖ
ಸವಾಲು ಎನ್ನಬಹುದು.
ಸಂಪತ್ತನ್ನು ಕಾಪಿಡುವುದು ಅಥವಾ ಹೂಡಿಕೆಗಳಲ್ಲಿ ವಿನಿಯೋಗಿಸುವ ಬದಲಾಗಿ ಯೋಗ್ಯ ಕ್ಷೇತ್ರಗಳಲ್ಲಿ
ಹಂಚುವ ಅಗತ್ಯವಿದೆ. ಶಿಕ್ಷಣ,
ಆರೋಗ್ಯ,
ಉತ್ಪನ್ನ ಮತ್ತು ತಂತ್ರಜ್ಞಾನಗಳಲ್ಲಿ ಹೂಡಿಕೆಗೆ ಪ್ರಾಥಮಿಕ ಆದ್ಯತೆ ನೀಡಬೇಕು.
ಏಕೆಂದರೆ ಅಭಿವೃದ್ಧಿಯ ಹಾದಿಯಲ್ಲಿ ಇವುಗಳು ಮಂದಗತಿಯಲ್ಲಿ ಸಾಗಬಾರದು.
ಐಐಪಿಎಂ
'ಥಿಂಕ್ ಟ್ಯಾಂಕ್
ಅಕ್ರಂ ಹಕ್
ಸಂಚಾರ: ಎಷ್ಟು ಸುರಕ್ಷಿತ?
ಯಾರಿಗೆ ಪರವಾನಗಿ?
ಪರವಾನಗಿಯ ಖಾಸಗೀಕರಣದಿಂದ ರಸ್ತೆ ಅಪಘಾತಕ್ಕೆ ಕಡಿವಾಣ ಸಾಧ್ಯ

ಭಾರತದಲ್ಲಾಗುವ ರಸ್ತೆ ಅಪಘಾತಗಳ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡದ ದಿನವೇ
ಇಲ್ಲವೇನೋ.
ಸ್ವಯಂ ಘೋಷಿತ
'ಸುರಕ್ಷಿತ'
ಚಾಲಕರ ಕೈ ಚಳಕವನ್ನು ಕೊಂಡಾಡಲೇ ಬೇಕು.
ದೇಶದ ರಾಜಧಾನಿ ದಿನವೊಂದಕ್ಕೆ ಆರು ಅಪಘಾತಗಳನ್ನು
ಕಾಣುತ್ತಿದೆ.
ನಮ್ಮ ಸ್ವಯಂ ಘೋಷಿತ ಅರ್ಹ ಚಾಲಕರಿಗೆ ಯುರೋಪಿಯನ್ ಅಥವಾ
ಅಮೆರಿಕನ್ ರಾಷ್ಟ್ರಗಳಲ್ಲಿ ಪರವಾನಗಿ ಬಿಟ್ಟು ವಾಹನವನ್ನು ಮುಟ್ಟುವ ಅವಕಾಶವೂ
ಸಿಗುವುದಿಲ್ಲ ಎಂಬುದರಲ್ಲಿ ಅನುಮಾನವೇ ಇಲ್ಲ.
ಸುರಕ್ಷತೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುವ ಇತರ
ದೇಶಗಳ ಚಾಲಕ ಪರೀಕ್ಷೆಯಲ್ಲಿ ಭಾರತೀಯರು ಹಿಂದೆ ಬೀಳುವುದಕ್ಕೂ ಅದೇ ಕಾರಣ.
ಡ್ರೈವಿಂಗ್ ಪರೀಕ್ಷೆ ಇಲ್ಲದೆ ಅಥವಾ ಸ್ವಯಂ ಹಾಜರಾಗದೆಯೇ ದಲ್ಲಾಳಿಯ ಕೈಗೆ
ಒಂದೆರಡು ನೋಟುಗಳನ್ನಿತ್ತರೆ ಸಾಕು ನಮ್ಮಲ್ಲಿ ಪರವಾನಗಿ ಆರಾಮದಲ್ಲಿ ಕೈ
ಸೇರುತ್ತದೆ.
ದಲ್ಲಾಳಿಗಳ ಮೂಲಕ ಪರೀಕ್ಷೆ ನಡೆಸುವ ಸರ್ಕಾರಿ ಅಧಿಕಾರಿಗಳು
ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ ಎಂಬುದನ್ನು ಬಿಡಿಸಿ ಏನೂ ಹೇಳಬೇಕಿಲ್ಲ.
ಭಾರತೀಯ ಡ್ರೈವಿಂಗ್ ಪರೀಕ್ಷೆಯಲ್ಲಿ ಸರಳ ಚಾಲಕ
ಪರೀಕ್ಷೆ ಅಥವಾ ಸಣ್ಣ ಪುಟ್ಟ ದೈಹಿಕ ಪರೀಕ್ಷೆಗಳಿಗೆ ಅವಕಾಶವೇ ಇಲ್ಲ.
ಇರುಳು ಕುರುಡುತನ ಅಥವಾ ಕಣ್ಣಿನ ಪರೀಕ್ಷೆಗಳನ್ನು
ಮಾಡಿದರೆ ದೇಶದ ರಸ್ತೆಗಳಲ್ಲಿ ಆಗಿಂದಾಗ್ಗೆ ನಡೆಯುವ ಎಷ್ಟೋ ರಸ್ತೆ ಅಪಘಾತಗಳ
ಸಂಖ್ಯೆಗಳನ್ನು ಗಣನೀಯವಾಗಿ ಇಳಿಸಬಹುದು.
ಬ್ರಿಟನ್ ಮುಂತಾದ ರಾಷ್ಟ್ರಗಳಲ್ಲಿ ಹತ್ತರಲ್ಲಿ ಆರು ಅಭ್ಯರ್ಥಿಗಳು
ಡ್ರೈವಿಂಗ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುತ್ತಾರೆ.
ಆ ಪರೀಕ್ಷೆಗಳು ನಮ್ಮ ದೇಶದಲ್ಲಿ ನಡೆಯುವ
ಪರೀಕ್ಷೆಗಳಂತಲ್ಲ!
ಕಾರು ಎಂಜಿನ್,
ಕೂಲಂಟ್,
ವಿಂಡ್ ಸ್ಕ್ರೀನ್ ವಾಷರ್,
ಬ್ರೇಕ್ ಫ್ಲೂಯಿಡ್,
ಟಯರ್ ಮುಂತಾದವುಗಳ ಕುರಿತ ಅಭ್ಯರ್ಥಿಯ ಅರಿವೂ
ಅಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಆ ಪರೀಕ್ಷೆ ಅರ್ಧಗಂಟೆಗಳ ಕಾಲ ನಡೆಯುತ್ತದೆ.
ಆದರೆ ನಮ್ಮಲ್ಲಿ ಒಬ್ಬ ಅಭ್ಯರ್ಥಿಗೆ ವಾಹನ ಚಾಲನೆ
ಬಿಡಿ,
ವಾಹನದ ಭಾಗಗಳ ಬಗ್ಗೆ ತಿಳಿಯದಿದ್ದರೂ ಆತನಿಗೆ ವಾಹನ
ಚಲಾಯಿಸಲು ಪರವಾನಗಿ ದೊರೆಯುತ್ತದೆ.
ಅಭ್ಯರ್ಥಿಯ ಬದಲಿಗೆ ನಕಲಿ ಅಭ್ಯರ್ಥಿ ಬಂದು
ಡ್ರೈವಿಂಗ್ ಪರೀಕ್ಷೆ ಮುಗಿಸಿ ಹೋಗುವ ಸಂಗತಿಯೂ ಇಲ್ಲಿ ಹಳಸಲು!
ನಗರದ ಸುಸಜ್ಜಿತ ಕಾರುಗಳಲ್ಲಿ ವಿನಿ ಡಿಜೆ
ಸಿಸ್ಟಮ್‌ಗಳೇನು ವಿರಳವಲ್ಲ.
ಇವು ಚಾಲಕರ ಏಕಾಗ್ರತೆಯ ಮೇಲೆ ಅಡ್ಡಪರಿಣಾಮ
ಬೀರುತ್ತದೆ ಎಂಬುದನ್ನು ಮತ್ತೊಮ್ಮೆ ಬಿಡಿಸಿ ಹೇಳಬೇಕಾದ್ದಿಲ್ಲ.
ರಸ್ತೆ ಅಪಘಾತಗಳ ಸಂಖ್ಯೆಯನ್ನು ಇಳಿಸಲು ಸರ್ಕಾರ ಖಾಸಗಿ ಕಂಪನಿಗಳನ್ನು
ನೇಮಿಸಬೇಕು.
ತೀವ್ರ ಪರೀಕ್ಷೆಗಳ ನಂತರವೇ ಅಭ್ಯರ್ಥಿಗಳಿಗೆ ಪರವಾನಗಿ
ನೀಡುವಂತೆ ಕಂಪನಿಗಳಿಗೆ ಆದೇಶಿಸಬೇಕು.
ಮೋಟಾರ್ ವಾಹನಗಳ ಕಾಯ್ದೆಯಲ್ಲಿ ಸಣ್ಣ ತಿದ್ದುಪಡಿ
ತರುವ ಮೂಲಕ ಈ ಖಾಸಗೀಕರಣವನ್ನು ಜಾರಿಗೆ ತರಬಹುದು.
ಪರವಾನಗಿಗಳ ನವೀಕರಣ ಹಾಗೂ ಹಂಚಿಕೆಯ
ಕಾಲಾವಧಿಯನ್ನೂ ಇದು ಗಣನೀಯವಾಗಿ ಇಳಿಸುತ್ತದೆ.
ದೇಶದಾದ್ಯಂತ ಸುಮಾರು
8 ಕೋಟಿ
ವಾಹನಗಳು ಇರುವ ಪ್ರಸಕ್ತ ಕಾಲದಲ್ಲಿ ಅಗತ್ಯವಾಗಿ ಸುಧಾರಣೆ ಕಾಣಬೇಕಾದ
ಮತ್ತೊಂದು ಕ್ಷೇತ್ರ ಇದು ಎಂದರೆ ತಪ್ಪಲ್ಲ.
ರಸ್ತೆ ಅಪಘಾತಗಳಲ್ಲಿ ಪ್ರಾಣ ಬಿಡುವವರು ಸುಪ್ಪತ್ತಿಗೆ ಮೇಲಿನ ಜೀವನ
ನಡೆಸುವವರಲ್ಲ;
ಬದಲಿಗೆ ಒಪ್ಪೊತ್ತಿನ ಅನ್ನಕ್ಕೂ ಅಲೆದಾಡಿ,
ಕೂಲಿ ಕೆಲಸ ಮಾಡಿ ಕಠಿಣ ಪರಿಶ್ರಮ ಪಡುವ ಶ್ರೀ
ಸಾಮಾನ್ಯರು!
ಐಐಪಿಎಂ
'ಥಿಂಕ್ ಟ್ಯಾಂಕ್'
ಸ್ರೇ ಅಗರ್‌ವಾಲ್
|