ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ರಜಾ ವಿಶೇಷಾಂಕ
ಕೃಷ್ಣಮೃಗಗಳ ಬೆನ್ನೇರಿ...
 

ಕೃಷ್ಣಮೃಗಗಳಿಗೆಂದೇ ಮೀಸಲಾಗಿಟ್ಟಿರುವ ಒಂದೇ ಒಂದು ರಾಷ್ಟ್ರೀಯ ಉದ್ಯಾನವನ ವೇಲಾವದರ್. ಮಾಯಾಂಕ್ ವ್ಯಾಸ್ ಅಲ್ಲಿನ ರೋಚಕ ಅನುಭವವನ್ನು ಮುಂದಿಟ್ಟಿದ್ದಾರೆ

 

ಬಿಸಿಲು ನಿಗಿನಿಗಿಸುತ್ತಿತ್ತು.. ನಾವು ಆಗಿನ್ನೂ ವೇಲಾವದರ್ ಚೆಕ್ ಪೋಸ್ಟ್ ತಲುಪಿದ್ದೆವು ನಾವು ಕೃಷ್ಣ ಮೃಗಗಳ ರಾಷ್ಟ್ರೀಯ ಉದ್ಯಾನವನ (ಬ್ಲಾಕ್ ಬಕ್ ನ್ಯಾಷನಲ್ ಪಾರ್ಕ್- ಬಿಬಿಎನ್‌ಪಿ)ಕ್ಕೆ ಹೋಗುತ್ತಿದ್ದೆವು ಬಹುಶಃ ದೇಶದಲ್ಲೇ ಕೃಷ್ಣ ಮೃಗಗಳಿಗಾಗಿರುವ ಏಕೈಕ ರಾಷ್ಟ್ರೀಯ ಉದ್ಯಾನವನ ಅದು ಹಾಗೆ ನಮ್ಮ ವಾಹನ ರಾಷ್ಟ್ರೀಯ ಉದ್ಯಾನವನದ ಮುಖ್ಯ ದ್ವಾರ ತಲುಪಿತು ಇನ್ನೇನು ವಾಹನ ಬಲಬದಿಯ ಮೊದಲ ಕಡಿದಾದ ತಿರುವು ತಿರುಗಬೇಕು.. ಹಾ!! ನಮ್ಮ ದಾರಿಗೆ ಅಡ್ಡಲಾಗಿ- 20 ಕೃಷ್ಣಮೃಗಗಳು ನಿಂತಿದ್ದವು! ಅಲ್ಲೇ 20 ನಿಮಿಷಗಳ ಕಾಲ ನಿಲ್ಲಬೇಕಾಯಿತು, ನಾನಂತೂ ವನ ಪಾಲಕನಂತೆ ಅವುಗಳ ಸ್ವಭಾವ ವಿನ್ಯಾಸಗಳ 'ಅಧ್ಯಯನ' ಮಾಡುತ್ತಿದ್ದೆ!

ಆ ಕಿರಿದಾದ ದಾರಿಯಿಂದಲೇ ಮೈಲುಗಟ್ಟಲೆ ಚಾಚಿದ್ದ ಹುಲ್ಲುಗಾವಲು ಕಾಣಿಸುತ್ತಿತ್ತು ಹುಣ್ಣಿಮೆಯ ದಿನದ ಉಬ್ಬರವಿಳಿತ ಸೃಷ್ಟಿಸಿದ ಉಪ್ಪಿನ ಮರಿಗೆಗಳು ಅಲ್ಲೆಲ್ಲ ಇದ್ದವು ಉದ್ಯಾನವನ ಸಮುದ್ರಮಟ್ಟದಿಂದ ಕೇವಲ 2 ಮೀಟರ್ ಎತ್ತರದಲ್ಲಿತ್ತು ಅದೂ ಕೇವಲ 18 ಕಿಮೀ ಅಂತರದಲ್ಲಿ ಪಶ್ಚಿಮದಲ್ಲಿ ಕ್ಯಾಂಬೆ ಕೊಲ್ಲಿ ಕೃಷ್ಣ ಮೃಗಗಳಿಗೆ ಹೇಳಿ ಮಾಡಿಸಿದಂಥ ತಾಣ ಇದು ಇಲ್ಲಿ ವರ್ಷಕ್ಕೆ ಸರಾಸರಿ 500 ಮಿಮೀನಷ್ಟು ಮಳೆ ಬೀಳುತ್ತದೆ ಎರಡು ವರ್ಷಗಳಿಗೊಮ್ಮೆ ಬರಗಾಲ ತಲೆದೋರುತ್ತದೆ ಬೇಸಿಗೆಯಲ್ಲಿ ತಾಪಮಾನ 37 ಡಿಗ್ರಿ ಸೆಲ್ಷಿಯಸ್‌ನಿಂದ 44 ಡಿಗ್ರಿ ಸೆಲ್ಷಿಯಸ್‌ವರೆಗೆ ಇರುತ್ತದೆ ಆ ಬಿಸಿಲಿನ ಝಳ ಕೃಷ್ಣ ಮೃಗಗಳನ್ನು ಹಾಗೂ ಅವುಗಳ ಮಾಂಸಾಹಾರಿ ಪ್ರಾಣಿಗಳಾದ ಕತ್ತೆ ಕಿರುಬ ಹಾಗೂ ತೋಳಗಳನ್ನು ಹೈರಾಣಾಗಿಸುತ್ತದೆ

ಆದರೆ ಅಂಥಾ ಬಿಸಿಲಲ್ಲೂ ಒಳ್ಳೆ ಹವಾನಿಯಂತ್ರಿತ ಕೊಠಡಿಯೊಳಗೆ ಓಡಾಡಿದಂತೆ ಹಿಂಡು ಹಿಂಡು ಕೃಷ್ಣಮೃಗಗಳು ಓಡಾಡುತ್ತಿದ್ದ ಪರಿ ನಮ್ಮನ್ನು ಬೆಚ್ಚಿಬೀಳಿಸಿತು ಇಲ್ಲಿನ ಬದುಕು ಕೇವಲ ಪ್ರಾಣಿಗಳಿಗೆ ಮಾತ್ರವಲ್ಲ ಅವುಗಳ ಪಾಲಕರಿಗೂ ಹಲವು ಸವಾಲುಗಳನ್ನು ಒಡ್ಡುತ್ತಿದೆ ಅರಣ್ಯ ಇಲಾಖೆ ಉದ್ಯಾನವನದ ಅಲ್ಲಲ್ಲಿ 15 ಕೊಳಗಳನ್ನು ತೋಡಿದೆ ಮಣ್ಣು ಲವಣಾಂಶ ಹೊಂದಿರುವುದರಿಂದ ಆ ಕೆರೆಗಳನ್ನು ನಿಗದಿತ ಅಡಿಗಿಂತ ಆಳದಲ್ಲಿ ತೋಡುವುದು ಅಸಾಧ್ಯವಾಯಿತು ಮಳೆಗಾಲದಲ್ಲಿ ಆ ಕೆರೆಗಳಲ್ಲಿ ಶೇಖರವಾದ ನೀರು ಬೇಸಿಗೆ ಬಿಡಿ ಚಳಿಗಾಲಕ್ಕೂ ಮುನ್ನವೇ ಆರಿ ಹೋಗಿರುತ್ತದೆ

ಮಾತುಕತೆಗಳೊಂದಿಗೆ ನಾವು ಮುಂದು ವರಿಯುತ್ತಿದ್ದಂತೆ ಗೈಡ್ ಕೂಡಲೇ ವಾಹನ ನಿಲ್ಲಿಸುವಂತೆ ಚಾಲಕನಿಗೆ ಹೇಳಿದರು ಅಬ್ಬಬ್ಬಾ ಅಂದರೆ ಒಂದು 80 ಮೀಟರ್ ಅಂತರದಲ್ಲಿ ಎರಡು ತೋಳಗಳು ನಿಂತಿದ್ದವು ಒಂದೆಡರಡು ಬಾರಿ ಕ್ಯಾಮೆರಾ ಕ್ಲಿಕ್ಕಿಸಿ ಅವುಗಳ ಏಕಾಂತಕ್ಕೆ ಭಂಗ ತರದಂತೆ ಅಲ್ಲಿಂದ ದೂರ ಸರಿದೆವು

ಕೊಂಚ ಮುಂದೆ ಸಾಗಿದ ಕೂಡಲೇ ಎಲ್ಲರೂ ಒಮ್ಮೆಗೇ ಕಿರುಚಿದೆವು "ಗಾಡಿ ನಿಲ್ಲಿಸಿ...!!" "ನೋಡಿ ನೀವು ಅದೃಷ್ಟವಂತರು ಅಂತ ನಾನು ಹೇಳಿರಲಿಲ್ಲವೇ, ಇದು ಉದ್ಯಾನವನದಲ್ಲಿರುವ ಏಕೈಕ ಪ್ರಾಣಿ, ಇಷ್ಟು ದಿನ ನನ್ನ ಕಣ್ಣಿಗೇ ಬಿದ್ದಿರಲಿಲ್ಲ, ಮೊದಲ ಭೇಟಿಗೇ ನಿಮಗೆ ದರ್ಶನವಿತ್ತಿದೆ ನೋಡಿ" ಕಣ್ಣಗಲಿಸಿ ಮುಂದಿದ್ದ ಅಲ್ಬಿನೋ ಕೃಷ್ಣ ಮೃಗದ ಕಡೆ ಬೊಟ್ಟು ಮಾಡುತ್ತಾ ಬಿಪಿನ್ ಹೇಳಿದರು ಕೃಷ್ಣ ಮೃಗವೇ ಆಗಿದ್ದರೂ ಬಾಯಿಂದ ಕಾಲವರೆಗೂ ಆಲ್ಬಿನೋಗೆ ಬಿಳಿ ಬಣ್ಣ 32 ಚದರ ಕಿಮೀ ವಿಸ್ತೀರ್ಣದ ಆ ಹುಲ್ಲುಗಾವಲಿನಲ್ಲಿ ಆಲ್ಬಿನೋವನ್ನು ನೋಡುವುದೇ ಹಬ್ಬ

ಸೂರ್ಯ ಪಶ್ಚಿಮವನ್ನು ಕೆಂಪಾಗಿಸುತ್ತಿದ್ದಂತೆ ನಾವು ಅರಣ್ಯ ಇಲಾಖೆಯ ಪ್ರವಾಸಿ ಮಂದಿರಗಳ ಕಡೆ ಹೆಜ್ಜೆ ಹಾಕಿದೆವು ಬೇಗ ಮಲಗಿದರೆ ಮುಂಜಾನೆ ಹೊತ್ತಿಗೇ ಉದ್ಯಾನ ಸುತ್ತಬಹುದು ಎಂಬ ಲೆಕ್ಕಾಚಾರದಲ್ಲಿ ಸೂರ್ಯ ಉದಯಿಸುವುದಕ್ಕಾಗಿ ನಾನು ಶತಪಥ ಹಾಕುತ್ತಿದ್ದೆ ನೀವು ನಂಬುತ್ತೀರೋ ಇಲ್ಲವೋ, ನನ್ನ ಕೋಣೆಯಿಂದ ಕೇವಲ 20 ಮೀಟರ್ ಅಂತರದಲ್ಲಿ 20 ಕೃಷ್ಣ ಮೃಗಗಳು ಮೇಯುತ್ತಿದ್ದವು!

ಹಿಂತಿರುಗುವ ದಾರಿಯಲ್ಲಿ ಸಿಕ್ಕಿದ ಕಲ್ಲು ಹಾಗೂ ಮಣ್ಣಿನ ರಾಶಿ ಬಗ್ಗೆ ಬಿಪಿನ್ ಅವರನ್ನು ಕೇಳಿದೆ ಬಿಪಿನ್ ಪ್ರಕಾರ ಅದು ಕಲ್ಲುಗಳ ರಾಶಿಯಲ್ಲ ಬದಲಿಗೆ ದಿಬ್ಬ ಕಳೆದ ವರ್ಷ ಪ್ರವಾಹ ಇಲ್ಲಿನ 200 ಕೃಷ್ಣ ಮೃಗಗಳನ್ನು ಬಲಿ ತೆಗೆದುಕೊಂಡಿತ್ತು ಸಮತಟ್ಟಾದ ಹುಲ್ಲುಗಾವಲಿನ ಪ್ರದೇಶವಾದ ಕಾರಣ ಪ್ರವಾಹದಿಂದ ತಪ್ಪಿಸಿಕೊಳ್ಳಲು ಇಲ್ಲಿನ ಪ್ರಾಣಿಗಳಿಗೆ ಮಾರ್ಗಗಳಿಲ್ಲ ಆ ಕಾರಣದಿಂದ ಅರಣ್ಯ ಇಲಾಖೆ ಸುಮಾರು 2 ಲಕ್ಷ ವೆಚ್ಚದಲ್ಲಿ ಕಲ್ಲು ಮಣ್ಣಿನ ಕೃತಕ ದಿಬ್ಬ ನಿರ್ಮಿಸಿತು ಪ್ರವಾಹ ಬಂದಾಗ ಇದರ ಮೇಲೆ ರಕ್ಷಣೆ ಪಡೆದುಕೊಳ್ಳಬಹುದು ಆದರೆ ನಿಜ ಹೇಳಬೇಕೆಂದರೆ 1600 ಕೃಷ್ಣ ಮೃಗಗಳು, 16 ತೋಳಗಳು ಹಾಗೂ ಒಂದೆರಡು ಕತ್ತೆ ಕಿರುಬಗಳಿಗೆ ಈ ಒಂದು ದಿಬ್ಬದ ಆಸರೆ ಯಾವ ಮೂಲೆಗೂ ಸಾಲದು

ಇನ್ನೂ ಒಂದು ವಿಷಯವೆಂದರೆ, ಬಿಬಿಎನ್‌ಪಿ ಆವಾಸವಾಗಿರುವುದು ಕೇವಲ ಕೃಷ್ಣ ಮೃಗಗಳಿಗೆ ತೋಳಗಳಿಗೆ ಮಾತ್ರವಲ್ಲ ಬಿಬಿಎನ್‌ಪಿ ಜೌಗು ಪ್ರದೇಶವನ್ನೂ ಹೊಂದಿರುವುದರಿಂದ ಹಲವು ವಲಸೆ ಹಕ್ಕಿಗಳ ಚಿಲಿಪಿಲಿ ನಾದವೂ ಇಲ್ಲಿದೆ ಅವುಗಳಲ್ಲಿ ಮುಖ್ಯವಾದವು ಲೆಸ್ಸರ್ ಫ್ಲೋರಿಕಾನ್ ಮತ್ತು ಹ್ಯಾರಿಯರ್ ಬಹುಶಃ ಏಷ್ಯಾದಲ್ಲೇ ಲೆಸ್ಸೆರ್ ಫ್ಲೋರಿಕಾನ್‌ಗಳಿಗೆ ಬಹು ದೊಡ್ಡ ವಲಸೆ ನೆಲೆ ಬಿಬಿಎನ್‌ಪಿ ಅಷ್ಟೇ ಅಲ್ಲದೆ ಬಿಬಿಎನ್‌ಪಿ ಬಕ ಪಕ್ಷಿ, ರಾಜಹಂಸ, ಪೆಲಿಕನ್, ಬಾತು ಕೋಳಿಗಳು ಮುಂತಾದ ಇತರೆ ಜಲ ಪಕ್ಷಗಳನ್ನು ಅಧಿಕ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಕೃಷ್ಣ ಮೃಗಗಳಿಗಾಗೇ ಇರುವ ಬಿಬಿಎನ್‌ಪಿಯಿಂದ ಹಿಂತಿರುಗಿದ ಮೇಲೂ ಆ ಪರಿಸರದ ಗುಂಗು ಇನ್ನೂ ಹೋಗಿಲ್ಲ ಆ ಪ್ರಕೃತಿ, ಪ್ರಾಣಿಗಳ ವಿಹಾರ, ವಿಶಿಷ್ಟ ಪರಿಸರ ವ್ಯವಸ್ಥೆ ಎಲ್ಲವೂ ಅಮೋಘ... ರಜೆಯ ಮೋಜಿಗೆ ಪ್ರಕೃತಿಯ ಸಾಥ್ ಇದ್ದರೆ ಆ ಖುಷಿಯೇ ಬೇರೆ!!

ಟಿಎಸ್‌ಐ

ರಜಾ ವಿಶೇಷಾಂಕದಲ್ಲಿ ಇನ್ನೇನಿದೆ

ಭಾರತದ ರೋಚಕ ರಸ್ತೆ ಪಯಣ

  ಪರಂಪರೆಯ ನಾಡಿನಲ್ಲಿ ಉಲ್ಲಾಸದ ಪಯಣ

  ಆಹ್ಲಾದಕರ ಗ್ಯಾಂಗ್‌ಟಾಕ್ ಪಯಣ

  ರುದ್ರ ರಮಣೀಯ ತಾಣ...

  ಹಾಲ್ನೊರೆಯ ಗಂಗಾವತರಣ

  ಮತ್ತೆ ಮುಗ್ಧತೆಯ ಮಡಿಲಿಗೆ...

ಸಾರ್ಥಕ ಪ್ರವಾಸ

  ಹಿಮ ಕಣಿವೆಯ ಸೊಬಗು

  ಯಾರಿಗೂ ಪಾಲು ನೀಡಿಲ್ಲ, ಯಾರು ಕೇಳಲೂ ಇಲ್ಲ

  ಬುಡಕಟ್ಟು ಬದುಕು

  ಮನಮೋಹಕ ಒರಿಸ್ಸಾ

ಕಣ್ಮುಚ್ಚುವ ಮುನ್ನ ನೋಡಲೇಬೇಕಾದ ಐದು ತಾಣಗಳು

  ಸಮ್ಮೋಹಕ ಪ್ರಕೃತಿ ಸೌಂದರ್ಯ

  ಕ್ಯಾಮೆರಾ ಕಣ್ಣಲ್ಲಿ ಕಾಡು

ಕಾಡಿನ ಜಾಡು

  ಹಸಿರ ಲೋಕದಲಿ ವನ್ಯಜೀವಿ ಸಾಮ್ರಾಜ್ಯ

  ಕೃಷ್ಣಮೃಗಗಳ ಬೆನ್ನೇರಿ...

  ಸೈಲೆಂಟ್ ವ್ಯಾಲಿ: ಇದು ಮೌನ ರಾಗ

ತಾರಾ ಲೋಕದ ರಜಾ-ಮಜಾ

  ಮೈ- ಮನ ತಣಿಸುವ ಕುಲು ಮನಾಲಿ

  ಫ್ರಾನ್ಸ್: ಬೇಸಿಗೆ ಸವಿನೆನಪುಗಳು

  ಲಕ್ಷದ್ವೀಪ: ಭೂರಮೆಯ ಮುಕುಟದ ಮಣಿ

 ಕಾಡುವ ಸುನಾಮಿ ನೆನಪು

 ಸ್ಪೇನ್ ನೆನಪಲ್ಲಿ ಗುಲ್ ಪನಾಗ್

 ಪ್ರವಾಸಿಗರ ಸ್ವರ್ಗ

 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .