|
ಆಸಪಾಟಾದ ಹೆದ್ದಾರಿ ಮೇಲೆ ಸರಾಗವಾಗಿ ಮುಂದೆ ಸಾಗಿದರೆ ಗಮ್ಯ ಸಿಗುತ್ತದೆ.
ಪ್ರವಾಸದ ಮಜಾ ಅನುಭವಿಸಲು ಇದಕ್ಕಿಂತ ಅದ್ಭುತ
ತಾಣ ಮತ್ತೊಂದಿಲ್ಲ.
ಮನ ತಣಿಸುವ ಆಕರ್ಷಣೆಗಳೂ ಸಾಕಷ್ಟಿವೆ.
ಬೆಂಗಳೂರಿನಿಂದ
150 ಕಿ.ಮೀ.
ದೂರದಲ್ಲಿರುವ ಶಿವನಸಮುದ್ರಕ್ಕೆ ರಸ್ತೆ ಮೂಲಕ
ಪ್ರಯಾಣ ಒಂದು ಅದ್ಭುತ ಅನುಭವ.
ಇಲ್ಲಿ ಎರಡು ವಿಹಂಗಮ ಜಲಪಾತಗಳಿವೆ.
ಕಾವೇರಿ ನದಿ ಇಲ್ಲಿ ಜಲಪಾತವಾಗಿ ಭೋರ್ಗರೆಯುವ
ದೃಶ್ಯ ಮಾತ್ರವಲ್ಲ,
ಇನ್ನೂ ಅನೇಕ ವಿಶಿಷ್ಟತೆಗಳಿವೆ.
ಇದು ಒಂದು ಪರಿಪೂರ್ಣ ಪಯಣ.
ಗಮ್ಯಕ್ಕಿಂತ ಆ ಪಯಣವೇ ಹಲವು ಸುಮಧುರ
ನೆನಪುಗಳನ್ನು ನಿಮ್ಮ ಮನದಲ್ಲಿ ಅಚ್ಚೊತ್ತಬಹುದು.
ಅಂದ ಮಾತ್ರಕ್ಕೆ ಜಲಪಾತಗಳು ಚೆನ್ನಾಗಿಲ್ಲ
ಎಂದರ್ಥವಲ್ಲ.
ಗಗನಚುಕ್ಕಿ ಮತ್ತು ಭರಚುಕ್ಕಿ ಭಾರತದ ಎರಡನೇ ಅತೀ ಎತ್ತರದ
ಜಲಪಾತ.
ಅಲ್ಲದೆ ಮಳೆಗಾಲದಲ್ಲಂತೂ ಧುಮ್ಮಿಕ್ಕುವ ಜಲರಾಶಿ.
ರಭಸದಿಂದ ಕೆಳ ಹರಿಯುವ ಜಲಧಾರೆ
100 ಮೀಟರ್‌ಗಳ
ಮೇಲಿನಿಂದ ಬಂಡೆಗಳ ಮೇಲೆ ಬೀಳುತ್ತದೆ.
ಮಂಡ್ಯ ಜಿಲ್ಲೆಯಲ್ಲಿರುವ ಈ ಎರಡು ಜಲಪಾತಗಳನ್ನು ತಲುಪುವ ಮುನ್ನ ದಾರಿ
ಮಧ್ಯೆ ಕರ್ನಾಟಕದ ಮೋಹಕತೆಯನ್ನು ಕಣ್ಣಲ್ಲಿ ಸೆರೆಹಿಡಿದು ಧನ್ಯರಾಗುತ್ತೀರಿ.
ಬೆಂಗಳೂರಿನಿಂದ
'ಬೆಂಗಳೂರು-
ಮೈಸೂರು ಎಕ್ಸ್‌ಪ್ರೆಸ್'
ಹಾದಿಯಲ್ಲಿ ಮುಂದೆ ಹೋದರೆ ಮೊದಲಿಗೆ ನೀವು ದಾಟುವ ನಗರ ರೇಷ್ಮೆ ನೆಲ ರಾಮನಗರ.
ಆನಂತರ ಸಿಗುತ್ತದೆ ಚನ್ನಪಟ್ಟಣ.
ಪುಟ್ಟ ಊರು ಚನ್ನಪಟ್ಟಣ ಕರಕುಶಲ ವಸ್ತುಗಳಿಗೆ
ಪ್ರಸಿದ್ಧ.
ರಸ್ತೆ ಬದಿಯಲ್ಲಿ ಸಿಗುವ ಅಂಗಡಿಗಳಲ್ಲಿ ಸ್ವಲ್ಪ ಚೌಕಾಶಿ
ಮಾಡಿ ಈ ಕರಕುಶಲ ವಸ್ತುಗಳನ್ನು ಖರೀದಿಸಬಹುದು.
ಮಂಡ್ಯ ಪ್ರವೇಶಿಸಿದೊಡನೆ ಕರ್ನಾಟಕದ ಗ್ರಾಮೀಣ
ಸೊಗಡು ತೆರೆದುಕೊಳ್ಳುತ್ತದೆ.
ಶಿವನಸಮುದ್ರಕ್ಕೆ ಹೋಗಲು ಕೊಳ್ಳೇಗಾಲದ
ರಸ್ತೆಯಲ್ಲಿ ಸಂಚರಿಸಿದ ತಕ್ಷಣ ಮನಮೋಹಕ ಪ್ರಕೃತಿ-
ಆಹ್ಲಾದದ ಅನುಭವಕ್ಕೆ ಸಣ್ಣ ಮುಳ್ಳು ಚುಚ್ಚಿದಂತೆ
ಭಾಸವಾಗುತ್ತದೆ.
ಏಕೆಂದರೆ ಈ ರಸ್ತೆಗಳೆಲ್ಲಾ ದುರಸ್ತಿಯಲ್ಲಿವೆ.
ಉಳಿದಂತೆ ಪ್ರಯಾಣದಲ್ಲಿ ನಯವಾದ ರಸ್ತೆ ಹಿತವಾದ
ಅನುಭವ ನೀಡುತ್ತದೆ.
ನಾನು ಸಣ್ಣ ಕಾರಿನಲ್ಲಿ ಪ್ರಯಾಣಿಸ ಬಯಸಿದ್ದೆ.
ಬೈಕ್
(ಆದರೆ ಬೈಕ್‌ನಲ್ಲಿ ಹೋಗಬೇಕೆಂದರೆ ಇದು ತುಂಬಾ
ದೀರ್ಘ ಪಯಣ)
ಅಥವಾ ಸಾಮಾನ್ಯ ಕಾರಿನಲ್ಲೂ ಹೋಗಬಹುದು.
ಜಲಪಾತದ ಪಕ್ಕದವರೆಗೂ ನೀವು ವಾಹನದಲ್ಲಿ
ಸಂಚರಿಸಬಹುದು.
ಆದರೆ ಭಾರೀ ವಾಹನಗಳಿಗೆ ಮಾತ್ರ ಇಲ್ಲಿ ಪ್ರವೇಶವಿಲ್ಲ.
ರಸ್ತೆಯಲ್ಲಿ ಪ್ರಯಾಣಿಸುತ್ತ್ತಾ ನೀವು ಕಾವೇರಿಯ
ಮತ್ತೊಂದು ದಡವನ್ನು ಕಾಣಬಹುದು.
ಹಾಗೆಯೇ ಒಂದು ಕಾಲದಲ್ಲಿ
'ವೀರಪ್ಪನ್
ನೆಲೆವೀಡು'
ಆಗಿದ್ದ ಕಾಡು ದೂರದಲ್ಲೆಲ್ಲೋ ಕಣ್ಣಿಗೆ ಬೀಳುತ್ತದೆ.
ನಿಗೂಢವಾಗೇ ಉಳಿಯಬಹುದಾಗಿದ್ದ ಈ ಕಾಡು ಶ್ರೀಗಂಧ
ಕಳ್ಳನಿಂದಾಗಿ ಕುಖ್ಯಾತಿ ಪಡೆದಿದೆ.
ಗಗನಚುಕ್ಕಿ ಜಲಪಾತದ ಹಾದಿಯಲ್ಲಿ ಮುಂದೆ ಹೋಗುತ್ತಾ ಮೊದಲಿಗೆ ನೀವು
ಶಿವನಸಮುದ್ರ ಬ್ಲಫ್ ಅಥವಾ ಜಲವಿದ್ಯುತ್ ಸ್ಥಾವರವನ್ನು ತಲುಪುತ್ತೀರಿ.
(1901ರಲ್ಲಿ
ನಿರ್ಮಿಸಲಾದ ಇದು ಏಷ್ಯಾದ ಹಳೇ ಸ್ಥಾವರಗಳಲ್ಲಿ ಒಂದಾಗಿದೆ).
ಕಡಿದಾದ ಬಂಡೆ ಮೇಲೆ ಲಂಬವಾಗಿ ಈ ಸ್ಥಾವರ ನೆಲೆ
ನಿಂತಿರುವುದರಿಂದ 'ಬ್ಲಫ್'
ಎಂಬ ಹೆಸರು ಬಂದಿದೆ.
ಆದರೆ ಈ ಸ್ಥಾವರ ಈಗ ಪ್ರವಾಸಿಗರಿಗೆ ನಿಲುಕದ ಸ್ಥಳವಾಗಿದೆ.
ಗಗನಚುಕ್ಕಿ ಜಲಪಾತ ಎತ್ತರದ ಮತ್ತು ಭಯಾನಕ ಜಲಪಾತವೂ ಹೌದು.
ಈ ಜಲಪಾತದ ಸಮೀಪಕ್ಕೆ ಹೋಗುವುದು ಸಾಧ್ಯವೇ ಇಲ್ಲ.
ಜಲಪಾತವನ್ನು ವೀಕ್ಷಿಸಲು ಕಬ್ಬಿಣದ ತಡೆಗೋಡೆಯನ್ನು
ನಿರ್ಮಿಸಲಾಗಿದೆ.
ಈ ತಡೆಗೋಡೆಗಳನ್ನು ದಾಟಿ ಜಲಪಾತವನ್ನು ಸಮೀಪದಿಂದ ನೋಡುವ
ಪ್ರಯತ್ನ ಮಾಡದೇ ಇರುವಂತೆ ಪೊಲೀಸರು ಅಲ್ಲಲ್ಲಿ ಹಾಕಿರುವ ಸೂಚನಾ ಫಲಕಗಳು
ಎಚ್ಚರಿಸಿವೆ.
ಮತ್ತೊಂದು ದೊಡ್ಡ ಸೂಚನಾಫಲಕ,
"೨006ರಲ್ಲಿ
ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ತಡೆಗೋಡೆಯನ್ನು ದಾಟಿ ಜಲಪಾತವನ್ನು
ಸಮೀಪದಿಂದ ನೋಡಲು ಹೋಗಿ ಜಾರಿಬಿದ್ದು ಮೃತ ಪಟ್ಟಿದ್ದಾರೆ"
ಎಂದು ಇಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯ
ದುರಂತ ಕಥೆಯನ್ನು ಸಾರುತ್ತದೆ.
ಈ ಜಲಪಾತಗಳಿಗೆ ಇಂತಹ ದುರಂತ ಅಧ್ಯಾಯಗಳು ಹೊಸದೇನಲ್ಲ.
16ನೇ
ಶತಮಾನದಲ್ಲಿ ಈ ಪ್ರಾಂತದ ರಾಜ ನಂಜರಾಜ ಮತ್ತು ಆತನ ಪತ್ನಿ ಇದೇ ಜಲಪಾತಕ್ಕೆ
ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಪ್ರತೀತಿ ಇದೆ.
ಗಗನಚುಕ್ಕಿ ಜಲಪಾತಕ್ಕೆ ಕಿ.ಮೀ.
ದೂರದಲ್ಲೇ ಭರಚುಕ್ಕಿ ಇದೆ.
ಇಲ್ಲಿ ಪ್ರವಾಸಿಗರು ಧುಮ್ಮಿಕ್ಕಿ ಹರಿಯುವ ಕಾವೇರಿ
ನದಿಯ ಸೌಂದರ್ಯವನ್ನು ಹತ್ತಿರದಿಂದ ವೀಕ್ಷಿಸಬಹುದು.
ಆದರೆ ಭರಚುಕ್ಕಿಯ ಒಂದೇ ಒಂದು ತೊಡಕೆಂದರೆ
ಜಲಪಾತದ ಅಡಿಗೆ ತಲುಪಲು 150
ಮೆಟ್ಟಿಲುಗಳನ್ನು ಇಳಿಯಬೇಕು.
ಒಂದು ಬಾರಿ ಅಲ್ಲಿಗೆ ತಲುಪಿದರೆ ಕೊಂಚ
ನೀರಾಟಕ್ಕೇನೂ ಬರವಿಲ್ಲ.
ಅತೀ ಎತ್ತರದಿಂದ ರಭಸವಾಗಿ ಧುಮುಕುವ ಪ್ರಾಕೃತಿಕ ಶವರ್
ಅಡಿಯಲ್ಲಿ ನಿಲ್ಲುವ ಮಜಾವೇ ಬೇರೆ.
ಅಲ್ಲದೆ ದೋಣಿಯಲ್ಲಿ ಜಲಪಾತಕ್ಕೆ ಒಂದು ಸುತ್ತು
ಹೊಡೆಯುವ ಅವಕಾಶವಿದೆ.
ಇಂತಹ ಅತಿಯಾದ ದೈಹಿಕ ಚಟುವಟಿಕೆಗಳೆಲ್ಲಾ ಇಷ್ಟವಿಲ್ಲದೆ
ಇದ್ದಲ್ಲಿ ಅಲ್ಲೇ ಇರುವ ಆಲದ ಮರದ ನೆರಳಲ್ಲಿ ಹಾಯಾಗಿ ಕುಳಿತು ತಂಪು ಹನಿಗಳ
ನಡುವೆ ಕಾವೇರಿ ಭೋರ್ಗರೆಯುತ್ತಾ ಬಂಡೆಗಳ ಮೇಲೆ ಧುಮ್ಮಿಕ್ಕುವ ಸೌಂದರ್ಯವನ್ನು
ಆಹ್ಲಾದಿಸಬಹುದು.
ನೀರೊಳಗೆ ಬಿದ್ದು ಮಜಾ ಮಾಡಿ ಅಥವಾ ಹೊತ್ತು ತಂದ ಬಾಸ್ಕೆಟ್
ಬಿಚ್ಚಿ ಹೊಟ್ಟೆ ತಂಪು ಮಾಡಿಕೊಳ್ಳಬಹುದು.
ಇಂತಹ ಪ್ರವಾಸದಲ್ಲಿ ಜೊತೆಗೆ ಒಂದು ಪಿಕ್‌ನಿಕ್ ಬಾಸ್ಕೆಟ್ ಇರುವುದು
ಒಳಿತು.
ಏಕೆಂದರೆ ಈ ಜಲಪಾತದ ಅಡಿಯಲ್ಲಿ ವಿಶೇಷ ತಿನಿಸುಗಳೇನೂ
ಸಿಗದು.
ಹಾಗೆಯೇ ಇಂತಹ ಸುಂದರ ಸ್ಥಳದಲ್ಲಿ ಪಿಕ್‌ನಿಕ್ ಆಚರಿಸುವ
ಸಂತೋಷ ಮತ್ತು ಸೌಭಾಗ್ಯ ಮತ್ತೊಮ್ಮೆ ದೊರೆಯುವುದು ಕಷ್ಟವೇ!
ಆದರೆ ಏನೆಲ್ಲಾ ತಿನಿಸುಗಳನ್ನು ಕಟ್ಟಿಕೊಂಡು
ಬರುವಿರಿ ಎನ್ನುವ ಬಗ್ಗೆ ಜಾಗರೂಕರಾಗಿರಿ.
ಮತ್ತೆ
150
ಮೆಟ್ಟಿಲುಗಳನ್ನು ಏರಬೇಕಿದೆ!
ಪ್ರಕೃತಿದತ್ತ ಜಲರಾಶಿ ಕಲ್ಲು ಬಂಡೆಗಳ ಮೇಲೆ ರಭಸವಾಗಿ ಚಿಮ್ಮುವ ಅಪೂರ್ವ
ದೃಶ್ಯವನ್ನು ಕಣ್ತುಂಬಿಸಿಕೊಂಡ ಮೇಲೆ ಕೊಂಚ ಸಮಯವನ್ನು ಉಳಿಸಿಕೊಂಡು
ವಾಪಸಾಗುವುದು ಒಳಿತು.
ಅಂದರೆ,
ಮಂಡ್ಯ ತೊರೆದು ಮುಂದೆ ಬಂದ ಕೂಡಲೇ ಸಿಗುವ
ಮದ್ದೂರಿನ 'ಕೆಫೆ
ಕಾಫಿ ಡೇ'
ಮಳಿಗೆಗೆ ಭೇಟಿ ನೀಡುವುದನ್ನು ಮರೆಯದಿರಿ.
ದಿನವಿಡೀ ಪ್ರಕೃತಿಯ ಮಡಿಲಲ್ಲಿ ಕಳೆದು ಮತ್ತೆ
ಬೆಂಗಳೂರಿನ ಜಂಜಡದ ಬದುಕಿಗೆ ಮೈವೊಡ್ಡುವ ಮುನ್ನ ಹೆದ್ದಾರಿಯ ಪಕ್ಕದಲ್ಲಿರುವ
ಈ ವಿಶಿಷ್ಟ ತಾಣದಲ್ಲಿ (ನಿತ್ಯದ
ಕೆಫೆಗಳಿಗಿಂತ ಕೊಂಚ ದುಬಾರಿ)
ಕೆಲ ನಿಮಿಷಗಳನ್ನು ಕಳೆಯುವುದೊಳಿತು.
ಪ್ರಯಾಣ ಮುಗಿಸಿ ವಾಪಸಾಗುತ್ತಾ ನಾವು ಸಾಗುತ್ತಿರುವ ರಸ್ತೆಯ ವಿವರ
ಹೇಳುತ್ತಿರುವ ಮೈಲಿಗಲ್ಲುಗಳನ್ನು ಕಂಡೆವು.
ನಾವು ಎಸ್‌ಎಚ್ ೩೩ರಲ್ಲಿ ಪ್ರಯಾಣಿಸುತ್ತಿದ್ದೆವು.
ಈ ಮೈಲಿಗಲ್ಲು
'ರೂಟ್
66' ಚಿಹ್ನೆಯ
ತದ್ರೂಪ ಎನಿಸಿತು.
ಇದು 'ರೂಟ್
66'
ಆಗಿರದೇ ಇರಬಹುದು.
ಆದರೆ ಈ ರಸ್ತೆಯಲ್ಲಿ ಅದಕ್ಕಿಂತ ಹೆಚ್ಚಿನ ಆಕರ್ಷಣೆಗಳಿವೆ.
ಸರಿ,
ಇನ್ನೂ ತಡವೇಕೆ?
ಈಗಲೇ ವಾಹನ ಏರಿ.
ಏಕೆಂದರೆ ನೀವು ಈ ಪ್ರಯಾಣದ ಪ್ರೇಮ ಪಾಶಕ್ಕೆ
ಬೀಳದೆ ಇರಲು ಸಾಧ್ಯವೇ ಇಲ್ಲ.
ಟಿಎಸ್‌ಐ
ತಾರಿಖ್ ಲಷ್ಕರ್ |