|

ಬಣ್ಣದ ಬದುಕಿನ ಆರಂಭ..
ಬಾಲ್ಯದಿಂದಲೂ ನಾಟಕಗಳಲ್ಲಿ
ಅಭಿನಯಿಸುತ್ತಿದ್ದೆ. ಈ ನಟನಾ
ಕೌಶಲ್ಯವೇ ಕಿರುತೆರೆಗೆ ನನ್ನನ್ನು ಸೆಳೆಯಿತು.
ಕಳೆದ ದಶಕದಲ್ಲಿ ನಿಮ್ಮಲ್ಲಾದ ಬದಲಾವಣೆ..
ಮೊದಲೆಲ್ಲಾ ಅಭಿನಯಿಸಬೇಕೆಂದರೂ ಪಾತ್ರದ
ಒಳಹೊಕ್ಕು ನೋಡದೆ,
ಅರ್ಥಮಾಡಿಕೊಳ್ಳದೆ ಅಭಿನಯಿಸುತ್ತಿದ್ದೆ.
ಆದರೆ ಈಗ ಯಾವುದೇ ಪಾತ್ರ ನೀಡಲಿ ಅದರಲ್ಲಿ ಸಂಪೂರ್ಣವಾಗಿ ನನ್ನನ್ನು
ತೊಡಗಿಸಿಕೊಂಡು ಅಭಿನಯಿಸುತ್ತೇನೆ.
ಓರ್ವ ಧಾರಾವಾಹಿ ನಟನಿಗಿರುವ ಸವಾಲುಗಳೇನು?
ಧಾರಾವಾಹಿ ನಟನೊಬ್ಬನಿಗೆ ಬೆಳವಣಿಗೆಯ ಅವಕಾಶ
ತೀರಾ ಸೀಮಿತ. ಪ್ರಸ್ತುತ
ಧಾರಾವಾಹಿಗಳಿಗಿಂತ ರಿಯಾಲಿಟಿ ಶೋಗಳೇ ಹೆಚ್ಚಾಗುತ್ತಿವೆ.
ಈ ನಡುವೆ ಕಲಾವಿದನೊಬ್ಬ ಜನಪ್ರಿಯಗೊಂಡರೆ ಅದೇ ದೊಡ್ಡ ಸವಾಲು.
ಓರ್ವ ನಟನನ್ನು ಕಿರುತೆರೆ,
ಬೆಳ್ಳಿತೆರೆ ನಟನೆಂದು ಬ್ರಾಂಡ್ ಮಾಡುವುದು ಎಷ್ಟರಮಟ್ಟಿಗೆ ಸರಿ?
ಈ ಬಗ್ಗೆ ನನಗೂ ಬೇಸರವಿದೆ.
ಕಲಾವಿದರನ್ನು ಬ್ರಾಂಡ್ ಮಾಡುವುದು ಸಮಂಜಸವಲ್ಲ.
ಆದರೆ ಜನರೇ ಬ್ರಾಂಡ್ ಮಾಡಿದರೆ ಒಪ್ಪಿಕೊಳ್ಳುವುದು
ಅನಿವಾರ್ಯವಾಗುತ್ತದೆ.
ನಿಮಗೆ ತೃಪ್ತಿ ನೀಡುವ ಪಾತ್ರ?
ಮುಗ್ಧ ಪಾತ್ರಗಳಿಗಿಂತ ಆಕ್ರಮಣಕಾರಿ ಪಾತ್ರಗಳು
ನನ್ನ ಮುಖಚರ್ಯೆಗೆ ಒಪ್ಪುತ್ತವೆ.
ಸಿನಿಮಾಗಳಲ್ಲಿ ಅವಕಾಶ..?
ಅವಕಾಶಗಳಿಂದ ದೂರ ಉಳಿದಿಲ್ಲ,
ನನಗಿಷ್ಟವಾದ ಪಾತ್ರಗಳು ಸಿಕ್ಕರೆ ನಟಿಸಲು ಸಿದ್ಧ.
ಟಿಎಸ್‌ಐ
ಚಿತ್ರಾ ಕರ್ಕೇರಾ
|