ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಇಷ್ಟೇ - ಇಷ್ಟು
ಟಿ.ಎಸ್. ರಮೇಶ್: ಕೀಬೋರ್ಡ್ ವಾದಕ
 

 

ಕೀಬೋರ್ಡ್ ವಾದ್ಯದ ಕಡೆ ಯುವಜನರ ಒಲವು ಹೇಗಿದೆ?

ಕೀಬೋರ್ಡ್ ಈಗ ಯುವಜನರ ಜನಪ್ರಿಯ ವಾದ್ಯವಾಗಿಬಿಟ್ಟಿದೆ. ಶಾಸ್ತ್ರೀಯ ವಾದ್ಯಗಳನ್ನು ಕಲಿಯಿರಿ ಎಂದು ನಾನೇ ಸಲಹೆ ನೀಡಿದರೂ ಅತ್ತ ಹೋಗದೆ ಕೀಬೋರ್ಡ್ ಕಲಿಯಲು ಬರುತ್ತಾರೆ.

ಕೀಬೋರ್ಡ್‌ನತ್ತ ಇಷ್ಟೊಂದು ಆಕರ್ಷಣೆ ಹೆಚ್ಚಾಗಲು ಕಾರಣ?

ಇದರಲ್ಲಿ ಮಲ್ಟಿಟ್ಯೂನ್‌ಗಳಿಗೆ ಅವಕಾಶ ಇದೆ. ಇದೊಂದು ವಾದ್ಯ ಇದ್ದರೆ ಸಾಕು. ತಬಲಾದಿಂದ ಬಾನ್ಸುರಿವರೆಗೆ ನೂರಾರು ವಾದ್ಯಗಳ ದನಿ ಹೊರಡಿಸಲು ಸಾಧ್ಯ.

ಕಲಾವಿದನ ಪ್ರತಿಭೆ ಜೊತೆಗೆ ಪವರ್ (ವಿದ್ಯುತ್) ಕೂಡಾ ಅಗತ್ಯವಾದ ಈ ವಾದ್ಯಕ್ಕೆ ಅದರದ್ದೇ ಮಿತಿಗಳಿವೆ ಅಲ್ಲವೆ?

ನಿಜ. ಇನ್ನೂ ಒಂದು ಅಪಾಯಕಾರಿ ಬೆಳವಣಿಗೆ ಎಂದರೆ ಕೀಬೋರ್ಡ್‌ನಿಂದಾಗಿ ಸಭಿಕರನ್ನು, ಶ್ರೋತೃಗಳನ್ನು ಮೋಸ ಮಾಡುವುದೂ ಹೆಚ್ಚಾಗಿದೆ.

ಇದರೊಳಗೆ ರೆಕಾರ್ಡ್ ಮಾಡುವ ಸೌಲಭ್ಯ ಇರುವುದರಿಂದ ಡಮ್ಮಿ ಟ್ರಾಕ್‌ಗಳನ್ನು, ಕರೋಕೆಯನ್ನು (ವಾದ್ಯ ಸಂಗೀತ) ರೆಕಾರ್ಡ್ ಮಾಡಿಕೊಂಡು ಪ್ರೇಕ್ಷಕರೆದುರು ಸುಮ್ಮನೆ ವಾದ್ಯ ನುಡಿಸಿ ದಂತೆ ಅಭಿನಯಿಸುವ ಪರಿಪಾಠ ಹೆಚ್ಚಾಗುತ್ತಿದೆ. ಇತ್ತೀಚಿನ ಬಹುಪಾಲು ಆರ್ಕೆಸ್ಟ್ರಾಗಳು ಈ ಮಾದರಿಯವೇ ಆಗಿವೆ.

ಅದೆಷ್ಟೇ ಜನಪ್ರಿಯವಾಗಿದ್ದರೂ ಕೀಬೋರ್ಡ್‌ಗೆ ಶಾಸ್ತ್ರೀಯ ಸ್ಥಾನಮಾನ ಇಲ್ಲ ಅಲ್ಲವೇ?

ಹೌದು. ಈ ಹಿಂದೆ ಹಾರ್ಮೊನಿಯಂ ಮತ್ತಿತರ ವಾದ್ಯಗಳನ್ನೂ ಹಾಗೇ ಅಸ್ಪೃಶ್ಯವಾಗಿ ನೋಡಲಾಗುತ್ತಿತ್ತು. ಕೀಬೋರ್ಡ್‌ಗೆ ಶಾಸ್ತ್ರೀಯ ವಾದ್ಯವಾಗುವ ಅರ್ಹತೆ ಇದ್ದೇ ಇದೆ. ಅದನ್ನು ದೊರಕಿಸಿಕೊಡುವ ಕಲಾವಿದರು ಬರಬೇಕಷ್ಟೆ.

ಟಿಎಸ್‌ಐ

ಬಿ.ಎಸ್. ನಾರಾಯಣಸ್ವಾಮಿ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .