|
ಬಾರ್ಬರಾದಿಂದ ಟ್ರೇಸಿ ಸಾಂಟಾ ನನಗೆದುರಾದಳು. ಅಮೆರಿಕ ಕಡಲತೀರದಲ್ಲೂ ಅದೆಷ್ಟೊ ಸಂಭ್ರಮದ ಸಮಾರಂಭಗಳು ನಡೆಯುತ್ತವೆ. ಅಂತರ್ ರಾಷ್ಟ್ರೀಯ ಆರ್ಕಿಡ್ ಪ್ರದರ್ಶನ, ಅದ್ದೂರಿ ಹವಾಯಿ ಸಂಗೀತ ಮತ್ತು ಹುಲಾ ನೃತ್ಯಗಳ ಸಂಜೆ ಸೊಬಗು, ವಿವಿಧ ಧಾರ್ಮಿಕ ಉಪನ್ಯಾಸ... ಎಲ್ಲವೂ ಮಾರ್ಚ್ ಮೊದಲ ವಾರದಲ್ಲಿ ಅಲ್ಲಿ ಜರುಗಿದ್ದವು. ಅವೆಲ್ಲಾ ಸಂಭ್ರಮದ ಸಂಜೆ ಕಳೆಯಬಯಸುವ ಮಹಿಳೆಯರಿಗೆ ಅದ್ಭುತ ಸಮಾರಂಭಗಳೇ. ಆದರೆ, ಬಾರ್ಬರಾ ಇಲ್ಲಿದ್ದಾಳೆ! ಅಮೆರಿಕದ ಪಶ್ಚಿಮ ಕರಾವಳಿಗೆ ಸುಮಾರು 9500 ಮೈಲುಗಳಷ್ಟು ದೂರದಲ್ಲಿ ಭಾರತದ ಪವಿತ್ರ ನದಿದಂಡೆಯಲ್ಲಿ ಗಂಟೆಗಟ್ಟಲೆ ಉಸಿರಾಟದ ಸರ್ಕಸ್ ಮಾಡುತ್ತಾ, ದೇಹ ದಂಡಿಸುವ ವ್ಯಾಯಾಮ ನಡೆಸಿ ಚಾಪೆ ಸುತ್ತಿಡುತ್ತಿದ್ದ ಅವಳ ಮೊಗದಲ್ಲಿ ನಗು!
ನಾವು ಹೃಷಿಕೇಶದಲ್ಲಿದ್ದೆವು. ಅಲ್ಲಿ ಭೋರ್ಗರೆಯುತ್ತಿರುವ ಗಂಗಾ ನದಿ ದಡದಲ್ಲಿ 'ಅಂತರ್ ರಾಷ್ಟ್ರೀಯ ಯೋಗ ಉತ್ಸವ- 2008'ನ್ನು ಆಯೋಜಿಸಲಾಗಿತ್ತು. 'ಪರಮಾರ್ಥ ನಿಕೇತನ' ಆಶ್ರಮ ಮತ್ತು 'ಉತ್ತರಖಂಡ್ ಪ್ರವಾಸಿ ಅಭಿವೃದ್ಧಿ ಮಂಡಳಿ' ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರತದ ಅತ್ಯಪೂರ್ವ ಯೋಗ ಪರಂಪರೆಯನ್ನು ಜಗತ್ತಿನ ಮುಂದೆ ಪ್ರದರ್ಶಿಸುವ ಮತ್ತು ಅದಕ್ಕೆ ಹೊಸ ಭಾಷ್ಯ ಬರೆಯುವ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಾಗಾರವಿದು ಎಂದರೆ ಅತಿಶಯೋಕ್ತಿ ಎನಿಸದು. ಸಾಮಾನ್ಯ ಒಬ್ಬ ಪತ್ರಕರ್ತನಿಗಿರುವ ಕುತೂಹಲಗಳನ್ನು ಇಟ್ಟುಕೊಂಡೇ ನಾನು ಆ ಸ್ಥಳಕ್ಕೆ ಭೇಟಿ ನೀಡಿದ್ದೆನಾದರೂ ಅಲ್ಲಿ ಕಳೆದ ಮೂರು ದಿನವೂ ಅಪೂರ್ವ ಮನಃಶಾಂತಿ ಪಡೆದೆ. ಸಮಾನ ಮನಸ್ಕರಿಗೆ ಶಾಂತಿ ಮತ್ತು ಯೋಗಮುದ್ರೆ ವಿನಿಮಯಕ್ಕೆ ಅತ್ಯುತ್ತಮ ವೇದಿಕೆಯಾಗಿತ್ತದು.
ಹರಿದ್ವಾರದಿಂದ ಒಂದು ಗಂಟೆ ಕಾರು ಪ್ರಯಾಣದ ಬಳಿಕ ರಾಮ್ ಝೂಲಾ ತೂಗುಸೇತುವೆ ದಾಟಿ ಸಾಗಿದೆ. ಮುಂದೆ ಎಡ, ಬಲ ಎಂದು ತಿರುವು ತಿರುಗುತ್ತಾ ಸಾಗಿದ ಮೇಲೆ 'ಪರಮಾರ್ಥ ಆಶ್ರಮ'ಕ್ಕೆ ತಲುಪಿದೆ. ಭಕ್ತಿಯನ್ನು ಹುಡುಕಿಕೊಂಡು ದೇಶ- ವಿದೇಶಗಳಿಂದ ಆಗಮಿಸುವ ಯಾತ್ರಿಗಳ ಪುಣ್ಯಸ್ಥಳವಿದು. ಅವರ ದೈವಿಕ ಅನ್ವೇಷಣೆಗೆ ಉತ್ತರವಾಗಿವೆ ಇಲ್ಲಿನ ನಿತ್ಯ ಪ್ರಾರ್ಥನೆಗಳು, ಧ್ಯಾನ ಮತ್ತು ಧಾರ್ಮಿಕ ಪ್ರವಚನಗಳು. ನಮ್ಮ ಪುಟ್ಟ ಸುಸಜ್ಜಿತ ಕೊಠಡಿಯನ್ನು ತಲುಪುವ ಮುನ್ನ ಇಲ್ಲಿ ವಿದೇಶಿಯರೇ ಹೆಚ್ಚಾಗಿ ಸೇರಿರುವುದು ಗಮನ ಸೆಳೆಯಿತು. 40 ವರ್ಷಗಳ ಹಿಂದೆ ಮಹರ್ಷಿ ಮಹೇಶ್ ಯೋಗಿ ಅವರನ್ನು ಭೇಟಿಯಾಗಲು 'ಫ್ಯಾಬ್ ಫೋರ್ ಆಫ್ ಲಿವರ್ಪೂ ಲ್' (ಬೀಟಲ್ ಸಂಗೀತ ತಂಡ) ಇಲ್ಲಿನ ಆಶ್ರಮಕ್ಕೆ ಬಂದಾಗ ಇಂತಹುದೇ ಜನಜಂಗುಳಿಯ ಸ್ಥಿತಿ ನಿರ್ಮಾಣವಾಗಿದ್ದಿರಬಹುದು. ಆ ಸಂದರ್ಭದಲ್ಲಿ ಮಾಧ್ಯಮ ಮತ್ತು ಅಭಿಮಾನಿಗಳು ಹೃಷಿಕೇಶದುದ್ದಕ್ಕೂ ಬೀಟಲ್ಸ್ ತಂಡವನ್ನು ಬೆಂಬತ್ತಿದ್ದವು.
ಪ್ರಾಯೋಜಕರ ಗದ್ದಲವನ್ನು ಹಿಂಬಾಲಿಸುತ್ತಾ ನಾನು ಮೊದಲ ದಿನ ಸಂಜೆ 'ಗಂಗಾ ಆರತಿ'ಯ ಸ್ಥಳಕ್ಕೆ ಧಾವಿಸಿದೆ. ಅದಕ್ಕಾಗಿ ಪವಿತ್ರ ನದಿಗೆ ಕೃತಕ ಒಡ್ಡು ಕಟ್ಟಿ ದಂಡೆ ಮೇಲೆ ನೀರಿನ ಕೊಳ ನಿರ್ಮಿಸಲಾಗಿತ್ತು. ಇದು ಪರಮಾರ್ಥ್ ಆಶ್ರಮದಲ್ಲಿ ನಿತ್ಯ ನಡೆಯುವ ಕಾರ್ಯಕ್ರಮ. ಆದರೆ ಇಂದು ವಿಶೇಷ ದಿನ. ಯೋಗ ಉತ್ಸವದ ಅಧಿಕೃತ ಉದ್ಘಾಟನಾ ದಿನ. ವೇದಿಕೆ ಮೇಲೆ ಸುಮಾರು 12 ಅಡಿ ಉದ್ದದ ಕೆನೆ ಬಣ್ಣದ ಧ್ಯಾನ ನಿರತ ಶಿವನ ಮೂರ್ತಿಯೊಂದು ಇತ್ತು. ಸಮುದ್ರಮಥನದ ಸಂದರ್ಭದಲ್ಲಿ ಬಂದ ವಿಷವನ್ನು ಕುಡಿದು ಬ್ರಹ್ಮಾಂಡಕ್ಕೆ ಒದಗಿದ್ದ ಸಂಕಷ್ಟವನ್ನು ನಿವಾರಿಸಿದ ಬಳಿಕ ಶಿವ ನೀಲಕಂಠನೆಂದು ಪ್ರಸಿದ್ಧಿ ಪಡೆದಿದ್ದು ಈ ಹೃಷಿಕೇಶದಲ್ಲಿ ಎಂಬ ಐತಿಹ್ಯವಿದೆ. ಸಾಂಪ್ರದಾಯಿಕ ಸ್ವಾಗತ ಮತ್ತು ಸನ್ಮಾನಗಳ ಬಳಿಕ ಗಂಗಾಮಾತೆ ಮತ್ತು ಹಿಂದೂ ದೇವತಾಗಣವನ್ನು ಪೂಜಿಸುವ ವೇದಘೋಷಗಳು ಮುಗಿಲು ಮುಟ್ಟಿದವು. ಸೂರ್ಯಾಸ್ತವಾಗುತ್ತಲೇ ಬೆಳಗಿದ ದೀಪಗಳು ಭಕ್ತಿಯಿಂದ ಪರಿಭ್ರಮಣೆ ನಡೆಸಿದವು. ಸುಶ್ರಾವ್ಯ ಭಜನೆಗಳು ಮೇಳೈಸಿದವು.
ಉತ್ಸವದ ಪ್ರತಿ ದಿನ ದೇಶ- ವಿದೇಶಗಳಿಂದ ಆಗಮಿಸಿದ್ದ 500 ಪ್ರತಿನಿಧಿಗಳಿಗಾಗಿ ವಿವಿಧ ಯೋಗ ತರಗತಿಗಳನ್ನು ನಡೆಸಲಾಗುತ್ತಿತ್ತು. ಈಗಿನ ಶಂಕರಾಚಾರ್ಯ ಸ್ವಾಮಿ ದಿವ್ಯಾನಂದ ತೀರ್ಥ, ಪಂಡಿತ್ ವಾಮದೇವ ಶಾಸ್ತ್ರಿ ಮತ್ತು ಸ್ವಾಮಿ ಚಿದಾನಂದ ಸರಸ್ವತಿ ಮೊದಲಾದ ದಿಗ್ಗಜರ ಉಪನ್ಯಾಸಗಳು ಮತ್ತು ಸಂವಾದಗಳು ಜರುಗಿದವು. ಯೋಗದ ಅಗಾಧ ಶಕ್ತಿ ಅಥವಾ ಹಿಮಾಲಯದ ಏಕಾಂತ ಮತ್ತು ಭೋರ್ಗರೆಯುವ ಗಂಗಾ ತಟ ಈ ಹಬ್ಬಕ್ಕೆ ಯಥಾರ್ಥ ಸೊಬಗನ್ನು ನೀಡಿತ್ತು. ಅದು ಗುರುಮುಖ್ ಕೌರ್ ಖಾಲ್ಸಾ ಅವರ ದೈತ್ಯ 'ಕುಂಡಲಿನಿ ವ್ಯಾಯಾಮ' ಅಥವಾ ಡಂಕನ್ ಪೀಕ್ ಅವರ ದೇಹವನ್ನು ಸುರುಳಿ ಸುತ್ತುವ 'ಶಕ್ತಿ ವಿನ್ಯಾಸ'ವಾಗಿರಲಿ. ಇಲ್ಲಿನ ಸಾಮಾನ್ಯ ಎಲ್ಲ ಯಾತ್ರಿಗಳ ಮೊಗದಲ್ಲೂ ಬೆಚ್ಚನೆಯ ಪರಮಾನಂದ ಮತ್ತು ಅರಿಯದ ಉನ್ಮಾದವಿತ್ತು. ಆ ಯೋಗಾಭ್ಯಾಸದ ಉತ್ಸಾಹಗಳೇ ಹಾಗಿರುತ್ತವೆ. ಕಂಪ್ಯೂಟರ್ ಮುಂದೆ ಜಡವಾಗಿದ್ದ ದೇಹ ಕೂಡಾ ಬಾಗಲು ಮತ್ತು ಬಳುಕಲು ಹಿಂಜರಿಯದು.
ದಿನಕ್ಕೆ ಮೂರು ಬಾರಿ ಸಿಗುವ ಆ ಆಪ್ಯಾಯಮಾನ ಸಾತ್ವಿಕ ಸಸ್ಯಾಹಾರಿ ಭೋಜನದ ಸಂದರ್ಭದಲ್ಲಿ
ಪ್ರತಿನಿಧಿಗಳಿಗೆ ಪರಸ್ಪರ ಪರಿಚಯ ಮಾಡಿಕೊಳ್ಳುವ ಅವಕಾಶ ದೊರೆತಿತ್ತು. ಆರಾಮವಾಗಿ ಶೀರ್ಷಾಸನ ನಿರ್ವಹಿಸಿದ ಆಸ್ಟ್ರೇಲಿಯಾದ ಬೆಲಿಂಡಾ ನಯವಾಗಿ, "ನಾನು ಇದರಲ್ಲಿ ಅಷ್ಟು ಪರಿಣತಳಲ್ಲ" ಎಂದಳು. ಅಮೆರಿಕದ ಮೋನಿಕ್ ಚೇಂಬರ್‍ಸ್ ಶೀರ್ಷಾಸನವನ್ನು ಪ್ರದರ್ಶಿಸುತ್ತಾ ಸ್ವದೇಶದ ತನ್ನ ಫಿಟ್‌ನೆಸ್
ಸ್ಟುಡಿಯೋದ ವಿಸಿಟಿಂಗ್ ಕಾರ್ಡ್‌ನ್ನು ಹೊರತೆಗೆದಳು. ಇಂಗ್ಲೆಂಡ್‌ನ ಪೀಟರ್, "ನೀವು ಕೆಲಸದಲ್ಲೂ ವಾಣಿಜ್ಯೋದ್ದೇಶ ಹುಡುಕುತ್ತೀರೇನು" ಎಂದ. ಊಟದ ಬಳಿಕ ಉತ್ತರಖಂಡ್‌ನ ಸಮೃದ್ಧ ಜಾನಪದ ಸಂಗೀತ ಮತ್ತು ನೃತ್ಯದ ಸೊಬಗನ್ನು ಸವಿಯುವ ಅವಕಾಶ ಸಿಕ್ಕಿತು. ಮೂರನೇ ದಿನದ ಅಪರಾಹ್ನ ನಾನು ವಾಪಸು ಹೊರಟೆ. ದಾರಿಯುದ್ದಕ್ಕೂ ಗಂಗೆಯನ್ನು ನೋಡುತ್ತಿದ್ದಾಗ, ಅದೇ ಸ್ಥಳದಲ್ಲಿ ನೆಲೆ ನಿಲ್ಲಬೇಕೆಂಬ ಬಯಕೆ ಉಕ್ಕುತ್ತಿತ್ತು. ಆದರೆ ನನ್ನದು ಅನಿವಾರ್ಯ ಸ್ಥಿತಿ.
ಸ್ವಾಮಿ ಚಿದಾನಂದ ಸರಸ್ವತಿ, ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಮತ್ತು ಮಹಾಗುರು
ಅಂತರ್ ರಾಷ್ಟ್ರೀಯ ಯೋಗ ಉತ್ಸವವನ್ನು ಆಯೋಜಿಸುವ
ಉದ್ದೇಶ ?
ಪ್ರತಿಕ್ರಿಯೆ ಹೇಗಿದೆ?
ದೇಶ ವಿದೇಶಗಳಿಂದ ಬರುವ ನೂರಾರು ಜನರಿಗೆ
ಯೋಗದ ನಿಜ ಅರ್ಥವನ್ನು ತಿಳಿಸಿಕೊಡುವ ಉದ್ದೇಶದಿಂದ ನಾವು ಪ್ರತಿ ವರ್ಷ
'ಅಂತರ್
ರಾಷ್ಟ್ರೀಯ ಯೋಗ ಉತ್ಸವ'
ಆಯೋಜಿಸುತ್ತೇವೆ.
ಜನರು ವಿಶ್ವದಾದ್ಯಂತ ಹಲವೆಡೆ ಆಸನ ಮತ್ತು ಪ್ರಾಣಾಯಾಮ
ತರಬೇತಿ ಪಡೆಯುತ್ತಾರೆ.
ಆದರೆ ಇಲ್ಲಿ ಪವಿತ್ರ ಹಿಮಾಲಯದ ತಪ್ಪಲಲ್ಲಿ ಈ ವೈಜ್ಞಾನಿಕ
ಪ್ರಕಾರ ಹುಟ್ಟಿ ಬೆಳೆದಿದೆ.
ಇದೇ ಕಾರಣಕ್ಕೆ ಈ ವೈಜ್ಞಾನಿಕ ಪ್ರಕಾರವನ್ನು
ಅಭ್ಯಾಸ ಮಾಡುವ ಪವಿತ್ರ ತಾಣವಿದು.
ಗಂಗಾ ಮಾತೆಯ ಪವಿತ್ರ ಸ್ಪರ್ಶ ಹಾಗೂ ಹಿಮಾಲಯದ
ತಪ್ಪಲಿನ ಈ ತಾಣ ಯಾತ್ರಿಗಳಿಗೆ ಒಂದು ಅನೂಹ್ಯ ಅನುಭವ ನೀಡುತ್ತದೆ.
ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡಲು
ಪ್ರೇರೇಪಿಸುತ್ತದೆ.
ವರ್ಷಗಳಿಂದ ಈ ಹಬ್ಬ ನಡೆಸುತ್ತಿದ್ದೀರಿ .
ಅದರಿಂದಾಗಿ ಏನಾದರೂ ಬದಲಾವಣೆ ಕಂಡುಬಂದಿದೆಯೇ?
ಹೌದು ,
ಅಗಾಧ ಜನಪ್ರಿಯತೆ ಗಳಿಸಿದೆ.
1999ರಲ್ಲಿ
ಸುಮಾರು 25ರಿಂದ
30
ಪ್ರತಿನಿಧಿಗಳಿದ್ದರು ಮತ್ತು 2-3
ಯೋಗಾಚಾರ್ಯರಿದ್ದರು.
ಈ ಬಾರಿ ನಮ್ಮಲ್ಲಿ
500
ಪ್ರತಿನಿಧಿಗಳಿದ್ದಾರೆ ಮತ್ತು 20ಕ್ಕೂ
ಹೆಚ್ಚು ಯೋಗಾಚಾರ್ಯರಿದ್ದಾರೆ.
ಈ ಕಾರ್ಯಕ್ರಮ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ
ಮನ್ನಣೆ ಪಡೆಯುತ್ತಿದೆ.
ಗಂಗಾ ಆರತಿಯ ಪ್ರಾಮುಖ್ಯತೆ ಏನು ?
ಪ್ರತಿ ಸಾಯಂಕಾಲ ಸೂರ್ಯ ಕಿರಣಗಳು ಗಂಗಾ
ಮಾತೆಯ ಅಗಾಧ ಜಲಧಾರೆಯನ್ನು ಸ್ಪರ್ಶಿಸುತ್ತಿದ್ದಂತೆಯೇ ನಾವು ಗಂಗಾ ಆರತಿಗಾಗಿ
ಜೊತೆಗೂಡುತ್ತೇವೆ .
ಈ ದೈವಿಕ ಬೆಳಕಿನ ಸಮಾರಂಭ ಹಾಡು,
ಪ್ರಾರ್ಥನೆ,
ವಿಧಿ-
ವಿಧಾನಗಳು ಮತ್ತು ಸುಸ್ಪಷ್ಟ ಭಕ್ತಿಯ ಸಂಗಮ.
ಆರತಿ ಎಂದರೆ ಶುದ್ಧ ತುಪ್ಪದಲ್ಲಿ ಉರಿಯುತ್ತಿರುವ
ಡಜನ್‌ಗಟ್ಟಲೆ ಜ್ವಾಲೆಗಳಿಂದ ಸಾಲುಗಟ್ಟಿದ ಒಂದು ಅಲಂಕೃತ ತೈಲ ದೀಪ.
ಆರತಿಗೂ ಒಂದು ವಿಶಿಷ್ಟ ಮಹತ್ವವಿದೆ.
ದಿನವಿಡೀ ದೇವರು ನಮಗೆ ಬೆಳಕನ್ನು
ಪ್ರಸಾದಿಸುತ್ತಾನೆ.
ಸೂರ್ಯನ ಬೆಳಕು.
ಜೀವನ ಬೆಳಕು.
ಆಶೀರ್ವಾದದ ಬೆಳಕು.
ಇದಕ್ಕೆಲ್ಲಾ ನಾವು ಸಮರ್ಪಿಸುವ ಧನ್ಯವಾದವೇ ಆರತಿ.
ನಾವು ಧನ್ಯವಾದ ಎಂಬ ಬೆಳಕನ್ನು ದೇವರಿಗೆ
ಸಮರ್ಪಿಸುತ್ತೇವೆ.
ನಮ್ಮ ಪ್ರೀತಿಯ ಬೆಳಕು ಮತ್ತು ಭಕ್ತಿಯ ಬೆಳಕದು.
ಗಂಗಾ ಆರತಿಯ ಸಂದರ್ಭದಲ್ಲಿ ನಾವು ನಮ್ಮ ನಿತ್ಯ
ಜೀವನದ ಸಾಮಾನ್ಯ ಒತ್ತಡ ಮತ್ತು ನೋವುಗಳನ್ನು ಮರೆಯುತ್ತೇವೆ ಮತ್ತು ಸಂತೋಷ,
ಶಾಂತಿಯಿಂದ ಒಂದುಗೂಡುತ್ತೇವೆ.
ಕೆಂಡ ಉಗುಳುತ್ತ ಪ್ರಜ್ವಲಿಸುತ್ತಿದ್ದ ಸೂರ್ಯ
ಅಸ್ತಂಗತನಾಗುತ್ತಿದ್ದಂತೆಯೇ ಪ್ರತಿಫಲಿಸುವ ಹೊನ್ನ ಕಿರಣಗಳ ತೀಕ್ಷ್ಣತೆಗೆ
ಕಣ್ಣಂಚಲ್ಲಿ ಆನಂದಭಾಷ್ಪಗಳು ಉದುರುತ್ತವೆ.
ಯಾವುದೋ ಅವ್ಯಕ್ತ ದೈವಿಕ ಮತ್ತು ಪವಿತ್ರ
ಕೊಂಡಿಯೊಂದರ ಜೊತೆಗೆ ಬೆಸೆದ ಅಪೂರ್ವ ಅನುಭವ ನಮಗಾಗುತ್ತದೆ.
ಗಂಗಾ ಆರತಿ ನಮಗೊಂದು ದೈವಿಕ ಸಂತಸ ನೀಡುವ ಕ್ಷಣ.
ಆದರೆ ಇದು
60 ನಿಮಿಷಗಳಿಗೆ
ಮಾತ್ರ ಸೀಮಿತವಾಗಿರುವ ಆನಂದ.
ಆದರೆ ಆ ಅನುಭವ ಮಾತ್ರ ದಿನವಿಡೀ ನಮ್ಮ
ಜೊತೆಗಿದ್ದು ಅಲೌಕಿಕ ಉಲ್ಲಾಸ ತುಂಬುತ್ತದೆ.
ಇಷ್ಟೊಂದು ದೈಹಿಕ ಶ್ರಮದಲ್ಲಿ ಯೋಗದ ಆಂತರಿಕ
ವಿಕಾಸದ ಗುಣ ಕಳೆದುಹೋಗಿಬಿಡಬಹುದಲ್ಲವೇ ?
ಅದೂ ಪಾಶ್ಚಾತ್ಯರು ಅಭ್ಯಾಸ ಮಾಡುವಾಗ...
ಹಾಗಾಗೇ ,
ನಾವು ಯೋಗಾಚಾರ್ಯರನ್ನು ಆರಿಸುವಾಗ ತುಂಬಾ
ಕಾಳಜಿಯಿಂದ ಆ ಕೆಲಸ ಮಾಡುತ್ತೇವೆ.
ಯೋಗದ ಪ್ರಕಾರಗಳನ್ನು ಕಲಿಸುವಲ್ಲಿ ಬದ್ಧತೆ
ಇರುವವರನ್ನು ಮಾತ್ರ ಆರಿಸುತ್ತೇವೆ.
ಉದಾಹರಣೆಗೆ ಹಲವರು ಬರೀ ದೈಹಿಕ ಯೋಗ ತರಬೇತಿ ಎಂದೇ
ನಂಬಿರುವ 'ಅಯ್ಯಂಗಾರ್
ಯೋಗ'ವನ್ನೇ
ತೆಗೆದುಕೊಳ್ಳಿ.
ಬಿರ್ಜೋ ಮೆಹ್ತಾ ಅವರಿಂದ ಅಯ್ಯಂಗಾರ್ ಯೋಗ
ಕಲಿತುಕೊಳ್ಳುವಾಗ ಇದು ದೇಹ,
ಮನಸ್ಸು ಮತ್ತು ಚೈತನ್ಯದ ಜೊತೆಗೆ ಸುಪ್ತ ಪ್ರಜ್ಞೆ
ಮತ್ತು ಜಾಗೃತಿ ಮೂಡಿಸುವ ಕಲಿಕೆ ಎನ್ನುವುದನ್ನು ತಿಳಿಯಬಹುದು.
ಅದೇ ರೀತಿ ವಿದೇಶದಿಂದ ಬಂದಿರುವ ನಮ್ಮ ಎಲ್ಲಾ
ಯೋಗಾಚಾರ್ಯರೂ ಯೋಗದ ದೈಹಿಕ ಶ್ರಮದ ಕಡೆಗೆ ಮಾತ್ರವಲ,
ಅದರ ಪಾವಿತ್ರ್ಯವನ್ನೂ ಗಮನದಲ್ಲಿರಿಸಿಕೊಂಡವರು.
ಆಸನ ತರಬೇತಿ ಮಾತ್ರವಲ್ಲ,
ಪ್ರಾಣಾಯಾಮ,
ಧ್ಯಾನ,
ವೇದಾಂತ ಮತ್ತು ಸತ್ಸಂಗ ಹಾಗೂ ಸನ್ಯಾಸಿಗಳ ಜೊತೆಗೆ
ಪ್ರಶ್ನೋತ್ತರ ಮತ್ತು ದೈವಿಕ ಸಂಜೆಯ ಅನುಭವ,
ಗಂಗಾ ಆರತಿ...
ಎಲ್ಲವೂ ಇದೆ.
ಆದರೆ ಯೋಗ ಉತ್ಸವಗಳು ಭಾರತೀಯರಿಗಿಂತ ಅಧಿಕ
ಪಾಶ್ಚಾತ್ಯರನ್ನೇ ಆಕರ್ಷಿಸುವುದೇಕೆ ?
ಭಾರತೀಯರು ನಾವು ಈಗಾಗಲೇ ಯೋಗ ಕಲಿತಿದ್ದೇವೆ
ಎಂದುಕೊಂಡಿದ್ದಾರೆ .
ಏಕೆಂದರೆ ಅದು ಅವರಿಗೆ ರಕ್ತಗತ.
ಸುಲಭವಾಗಿ ಸಿಗುವ ವಸ್ತುಗಳಿಗೆ ಮೌಲ್ಯ ಕಡಿಮೆ
ಅಲ್ಲವೆ?
ಪಾಶ್ಚಾತ್ಯರಿಗೆ ಯೋಗ ಕಲಿಯಬೇಕಾದ ಪ್ರಕಾರ.
ಹೊಸದು ಮತ್ತು ಮೌಲ್ಯಯುತ.
ಭಾರತೀಯರಿಗೆ ಇದು ಪುರಾತನ ಕಲೆ.
ತಮ್ಮ ಮುತ್ತಜ್ಜ ಬೆಳ್ಳಂಬೆಳಗ್ಗೆ ಮಾಡುತ್ತಿದ್ದ
ವ್ಯಾಯಾಮ.
ಹೀಗಾಗಿ ಅದಕ್ಕೆ ಅಂತಹ ಮಹತ್ವವಿಲ್ಲ.
ಆದರೆ ಈ ಭಾವನೆ ಬದಲಾಗುತ್ತಿದೆ ಎಂದು ನಂಬಿರುವೆ.
ಭಾರತೀಯರು ಇದರ ಮಹತ್ವನ್ನು
ತಿಳಿದುಕೊಳ್ಳುತ್ತಿದ್ದಾರೆ ಮತ್ತು ಈ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.
ಮತ್ತೆ ಯೋಗದ ಕಡೆ ವಾಲುತ್ತಾರೆ.
ಟಿಎಸ್‌ಐ
|