ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ರಾಶಿ ಚಕ್ರ
Rashi Chakra

Astrology Makara ಮಕರ

(ಡಿ.22-ಜ.21)

ಕಾರ್ಯಕ್ಷೇತ್ರದಲ್ಲಿ ಪ್ರಗತಿಯತ್ತ ನಿಧಾನಗತಿಯ ಹೆಜ್ಜೆ. ಇತರರ ಸಲಹೆಗಳನ್ನು ಮುಕ್ತ ಮನಸ್ಸಿಂದ ಸ್ವೀಕರಿಸಿ. ಇದರಿಂದ ನಿರೀಕ್ಷಿತ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಕಾನೂನು ಮತ್ತು ವೃತ್ತಿಕ್ಷೇತ್ರ ಸಂಬಂಧಿತ ಸಮಸ್ಯೆಗಳು ಪರಿಹಾರವಾಗಲಿವೆ. ದಾಂಪತ್ಯ ಜೀವನಕ್ಕೆ ಹೆಚ್ಚು ಆದ್ಯತೆ ನೀಡಿ. ಮಕ್ಕಳಿಗೆ ಶುಭಸುದ್ದಿ.

Astrology  Vrushabhaವೃಷಭ

(ಏ.21-ಮೇ.20)

ಕೌಟುಂಬಿಕ ಮತ್ತು ವೃತ್ತಿಕ್ಷೇತ್ರದ ಕೆಲಸ-ಕಾರ್ಯಗಳ ನಡುವೆ ನೀವು ಕಳೆದುಹೋಗಲಿದ್ದೀರಿ. ಯೋಜನೆಗಳ ಬಗ್ಗೆ ಸೂಕ್ತ ರೂಪುರೇಷೆ ಹಾಕಿಕೊಳ್ಳುವುದು ಒಳಿತು. ನಿಮ್ಮ ಸಂಗಾತಿಯನ್ನು ನಿರ್ಲಕ್ಷಿಸಬೇಡಿ. ಆರೋಗ್ಯದ ಕುರಿತು ಕಾಳಜಿಯಿರಲಿ. ಸರಿಯಾಗಿ ಪಥ್ಯ ಆಹಾರ ಸೇವಿಸಿ, ಉತ್ತಮ ಆರೋಗ್ಯ ನಿಮ್ಮದಾಗಲಿದೆ.

Astrology Kanyaಕನ್ಯಾ

(ಆ.24-ಸೆ.23)

ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ನೆರವಿಗಾಗಿ ನಿಮ್ಮತ್ತ ಕೈಚಾಚುವುದರಿಂದ ಕಾರ್ಯದೊತ್ತಡ ಹೆಚ್ಚಾಗಲಿದೆ. ಎಲ್ಲವನ್ನೂ ಮಾಡಿಮುಗಿಸಬೇಕು ಎಂಬ ಧಾವಂತದಲ್ಲಿ ಅತ್ಯಂತ ಮುಖ್ಯ ವಿವರಗಳನ್ನು ಗಮನಿಸದೇ ಇರಬಹುದು. ಅನಿರೀಕ್ಷಿತ ಬದಲಾವಣೆಗಳು ನಿಮ್ಮನ್ನು ಗೊಂದಲಕ್ಕೆ ಸಿಲುಕಿಸಿಬಹುದು.

Astrology  Kumbhaಕುಂಭ

(ಜ.22-ಫೆ.19)

ಕೆಲ ವಿಚಾರಗಳಲ್ಲಿ ತೀರ ಗೊಂದಲ ಉಂಟಾಗಬಹುದು, ಆದರೆ ವಸ್ತುನಿಷ್ಠ ವಿಶ್ಲೇಷಣೆಯಿಂದ ಹಲವು ಪ್ರಶ್ನೆಗಳಿಗೆ ಉತ್ತರ ದೊರಕಲಿದೆ. ಹವ್ಯಾಸವೊಂದನ್ನು ಆದಾಯದ ಮೂಲವಾಗಿ ಬಳಸಿಕೊಳ್ಳುವ ಅವಕಾಶವಿದೆ. ಪ್ರಣಯ ಸಂಬಂಧಗಳು ಗರಿಗೆದರಲಿವೆ. ಸಾಮಾಜಿಕ ಚಟುವಟಿಕೆಗಳಿಗೆ ಪ್ರಾಶಸ್ತ್ಯ ನೀಡಿ. ವಿದೇಶದಿಂದ ಶುಭಸುದ್ದಿ.

Astrology  Mithunaಮಿಥುನ

(ಮೇ.21-ಜೂ.21)

ನಿಮ್ಮ ಸಾಮರ್ಥ್ಯ ಹೆಚ್ಚಲಿದೆ. ಯೋಜನೆಗಳನ್ನು ಸಮರ್ಥವಾಗಿ ನಿಭಾಯಿಸಲಿದ್ದೀರಿ. ಈ ವಾರ ನೀವು ಆಶಾವಾದಿಗಳಾಗಿರುವಿರಿ. ಸಣ್ಣ- ಪುಟ್ಟ ತೊಂದರೆಗಳು ನಿಮ್ಮನ್ನು ಬಾಧಿಸುವುದಿಲ್ಲ. ಪರಿಣಾಮಕಾರಿ ಸಂವಹನ ಕೌಶಲ್ಯದಿಂದ ನಿರೀಕ್ಷೆಗಳು ಈಡೇರಲಿವೆ. ವಿದೇಶದಲ್ಲಿರುವ ಬಂಧುಗಳೊಂದಿಗೆ ಬೆರೆಯುವ ಅವಕಾಶ.

Astrology  Tulaತುಲಾ

(ಸೆ.24-ಅ.23)

ನಿಗದಿತ ಕೆಲಸ-ಕಾರ್ಯಗಳನ್ನು ಮುಗಿಸುವ ಒತ್ತಡಕ್ಕೆ ಸಿಲುಕಲಿದ್ದೀರಿ. ನಿಮ್ಮ ಯೋಜನೆ ಬಗ್ಗೆ ಆಕ್ಷೇಪಗಳು ಕೇಳಿಬರಬಹುದು. ಸಹೋದ್ಯೋಗಿಗಳ ಮನ ಗೆಲ್ಲಲು ಕ್ರಿಯಾಶೀಲವಾಗಿ ಯೋಚಿಸಬೇಕಾಗಬಹುದು. ಪ್ರೀತಿಪಾತ್ರರ ಸಲಹೆಗಳಿಗೆ ಮನ್ನಣೆ ನೀಡಿ. ಪ್ರಣಯಿಗಳಿಗೆ ಪರ್ವಕಾಲ. ಆರೋಗ್ಯದ ಕುರಿತು ಮುಂಜಾಗಾರೂಕತೆ ಅಗತ್ಯ.

Astrology  Meenaಮೀನ

(ಫೆ.20-ಮಾ.20)

ಸ್ಪರ್ಧಾ ಮನೋಭಾವಕ್ಕೆ ಒಂದು ಮಿತಿ ಇರಲಿ. ಅದರಿಂದ ಸಹೋದ್ಯೋಗಿಗಳ ವಿಶ್ವಾಸ ಗಳಿಸುವಲ್ಲಿ ಅಡ್ಡಿಯಾಗಬಹುದು. ಉದ್ಯೋಗವಕಾಶಗಳ ಕುರಿತ ಮಾತುಕತೆಗಳಿಗೆ ಮುನ್ನ ಸ್ಪಷ್ಟ ಸಿದ್ಧತೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ಪೇಚಾಡಬೇಕಾದೀತು. ಅನಿರೀಕ್ಷಿತ ವಿಳಂಬ ಮತ್ತು ಬದಲಾವಣೆಗಳು ಕಿರಿಕಿರಿ ಉಂಟುಮಾಡಲಿವೆ. ಪ್ರೇಮಜೀವನ ತೃಪ್ತಿಕರ.

Astrology  Katakaಕಟಕ

(ಜೂ.22-ಜು.22)

ನಿಮಗೆ ಹೊಸ ಆಲೋಚನೆಗಳು ಸುಲಭವಾಗಿ ಬರುತ್ತವೆ. ಆದರೆ, ಅವುಗಳನ್ನು ಕಾರ್ಯರೂಪಕ್ಕೆ ಇಳಿಸುವತ್ತ ಗಮನಕೊಡಿ. ಸಹೋದ್ಯೋಗಿಗಳ ಅಭಿಪ್ರಾಯಗಳಿಗೆ ಮನ್ನಣೆ ನೀಡಿ, ಅವರೊಂದಿಗಿನ ಸಂಬಂಧಗಳು ಇನ್ನಷ್ಟು ವೃದ್ಧಿಸಲಿದೆ. ನಿಮ್ಮ ಜವಾಬ್ದಾರಿ ಮತ್ತು ಒತ್ತಡಗಳನ್ನು ಅರಿತು ಕಾರ್ಯಪ್ರವೃತ್ತರಾಗಿ, ದುಡುಕಬೇಡಿ.

Astrology  Vrushikaವೃಶ್ಚಿಕ

(ಅ.24-ನ.22)

ಅಡೆತಡೆಗಳನ್ನು ಮೀರಿ ಮಾಹಿತಿಯನ್ನು ಕಲೆಹಾಕುವುದು ಕಷ್ಟವೆನಿಸಬಹುದು. ಕಾಲಹರಣವಾಗುವ ವ್ಯರ್ಥ ವಾದಗಳಿಂದ ದೂರವೇ ಇರಿ. ನಿಮಗೆ ತೀವ್ರ ವಿರೋಧ ಕಂಡುಬಂದಲ್ಲಿ ಸೂಕ್ತ ಸಮಯಕ್ಕಾಗಿ ಕಾಯಿರಿ. ನಿಮ್ಮ ಕೆಲ ಯೋಜನೆಗಳ ಕುರಿತು ಇನ್ನೂ ಸ್ಪಷ್ಟತೆ ಇಲ್ಲದಿರುವುದರಿಂದ ವಿಳಂಬ ಸಾಧ್ಯತೆ. ಸದೃಢ ಸಂಬಂಧ ಬೆಳೆಸುವಾಗ ಎಚ್ಚರಿಕೆ ವಹಿಸಿ.

Astrology  Meshaಮೇಷ

(ಮಾ.21-ಏ.20)

ಹಿರಿಯರೊಂದಿಗೆ ಮಾತನಾಡುವಾಗ ಸ್ಪಷ್ಟತೆ ಮತ್ತು ಜಾಣ್ಮೆ ಪ್ರದರ್ಶಿಸಿ. ಕಾರ್ಯಸ್ಥಳದಲ್ಲಿ ಹೆಚ್ಚಿನ ಶ್ರಮ ವಹಿಸಿದ್ದಲ್ಲಿ ನಾಳೆ ಉತ್ತಮ ಪ್ರತಿಫಲ ಕಾದಿದೆ. ಮಾಡಬೇಕಿರುವ ಕೆಲಸದ ಬಗ್ಗೆ ವಸ್ತುನಿಷ್ಠವಾಗಿ ಒಂದು ಅಂತರದಲ್ಲಿ ನಿಂತು ವಿಶ್ಲೇಷಿಸಿ ಮುಂದುವರಿಯಿರಿ. ಆಗ ಕೆಲಸದ ಬಗ್ಗೆ ಸ್ಪಷ್ಟವಾದ ಗ್ರಹಿಕೆ ಸಾಧ್ಯ. ಅವಿವಾಹಿತರಿಗೆ ಶುಭಕಾಲ.

Astrology  Simhaಸಿಂಹ

(ಜು.23-ಆ.23)

ಈ ವಾರ ತೀರ ಸ್ಪರ್ಧಾತ್ಮಕ ಮನೋಭಾವ ಹೊಂದಿರುತ್ತೀರಿ. ಕಾರ್ಯಸ್ಥಳದಲ್ಲಿ ಶ್ರಮ ವಹಿಸಿದರೆ ಸಮಾನ ವಯಸ್ಕರನ್ನು ಮೀರಿಸಬಹುದು. ನಿಮ್ಮ ಸಂಗಾತಿ ತಮ್ಮದೇ ಕೆಲಸ- ಕಾರ್ಯದಲ್ಲಿ ಮುಳುಗಿದ್ದರೆ, ಅದನ್ನು ಅರ್ಥಮಾಡಿಕೊಂಡು ಅವರಿಗೆ ನೆರವಾಗಿ. ದುಡುಕಿ ವಿವಾದ ಸೃಷ್ಟಿಸಬೇಡಿ. ಅವಿವಾಹಿತರು ವಿಶೇಷ ವ್ಯಕ್ತಿಗಳ ಭೇಟಿ.

Astrology  Dhanuಧನು

(ನ.23-ಡಿ.21)

ನೆನಗುದಿಗೆ ಬಿದ್ದಿದ್ದ ಬಡ್ತಿ ಇದೀಗ ನಿಮ್ಮ ಪಾಲಾಗಲಿದೆ. ನಿಮ್ಮ ಅಧಿಕಾರದ ಪ್ರಶ್ನೆ ಬಂದಾಗ ದೃಢತೆ ಪ್ರದರ್ಶಿಸಿ. ಕೌಟುಂಬಿಕ ಮತ್ತು ಕಚೇರಿ ಕೆಲಸ ಕಾರ್ಯಗಳು ಹೆಚ್ಚಿನ ಕಾರ್ಯದೊತ್ತಡ ತರಲಿವೆ. ಕೌಟುಂಬಿಕ ವಿಚಾರ ನಿರ್ಲಕ್ಷಿಸುವಿರೆಂದು ಪ್ರೀತಿಪಾತ್ರರು ಅಸಮಾಧಾನಗೊಳ್ಳಬಹುದು. ಕಾನೂನು ಸಂಬಂಧಿತ ವಿಚಾರಗಳಲ್ಲಿ ನಿರ್ಲಕ್ಷ್ಯ ಬೇಡ.

ಟಿ.ಎಸ್.ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .