ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಇಷ್ಟೇ - ಇಷ್ಟು
ಸುಚೇಂದ್ರ ಪ್ರಸಾದ್: ನಟ
 

 

ರಂಗಭೂಮಿಯೆಡೆಗೆ ಒಲವು ಮೂಡಲು ಕಾರಣ?

ಪ್ರೀತಿ ಹೇಗೆ ಹುಟ್ಟುತ್ತದೆ ಎನ್ನಲು ಸಾಧ್ಯವಿಲ್ಲವೋ ಹಾಗೆ ರಂಗದೆಡೆಗೆ ಒಲವು ಹೇಗೆ ಬೆಳೆಯಿತು ಎನ್ನುವುದೂ ಕಷ್ಟ. ರಂಗಭೂಮಿ ಎಡೆಗೆ ಸೆಳೆತ ಇತ್ತು. ಇಲ್ಲಿಗೆ ಬಂದೆ.

ಕ್ಯಾಮರಾ ಹಿಂದೆ ನಿಲ್ಲಲು ಪ್ರೇರಣೆ?

ಇನ್ನೊಬ್ಬರ ಕೈಗೊಂಬೆ ಆಗುವುದರ ಬದಲು ನಾನೇ ಸ್ವತಃ ಏನಾದರೂ ಮಾಡಬೇಕೆಂದು ಅನಿಸಿದ್ದೇ ಕ್ಯಾಮರಾ ಹಿಂದೆ ನಿಲ್ಲಲು ಕಾರಣ.

ಈ ಕ್ಷೇತ್ರದ ಹಿರಿಯರೊಂದಿಗೆ ಕೆಲಸ ಮಾಡಿದ ಅನುಭವ?

ಇಲ್ಲಿ ಹಿರಿತನ ಎಂಬುದೇ ಇಲ್ಲ. ವೈಚಾರಿಕ ಸ್ಪಷ್ಟತೆ, ಬದ್ಧತೆ, ಕರ್ತವ್ಯ ಪ್ರಜ್ಞೆಗಳು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತವೆ.

ನೀವು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೀರಿ. ಹಾಗಿದ್ದಲ್ಲಿ ಮೂಲತಃ ನೀವೇನು?

ಮೂಲತಃ ನಾನೊಬ್ಬ ಮಾನವ. ಮಾನವೀಯತೆ ಎಡೆಗೆ ಒಲವಿದೆ. ಆದರೆ ಯಾವುದು ತೃಪ್ತಿ ನೀಡುತ್ತದೋ ಅಲ್ಲಿ ದುಡಿಯಬಯಸುತ್ತೇನೆ.

ಪೂರ್ಣಪ್ರಮಾಣದ ನಿರ್ದೇಶನದಲ್ಲಿ ತೊಡಗುವ ಯೋಚನೆ ಇದೆಯೇ?

ಇಂತಹುದ್ದನ್ನೇ ಮಾಡಬೇಕು ಎಂಬ ಯೋಚನೆ ಏನಿಲ್ಲ. ಯಾವ ಕಾರ್ಯದಲ್ಲಿ ತೊಡಗಿದರೂ ನಮ್ಮನ್ನು ನಾವು ಸಂಪೂರ್ಣ ತೊಡಗಿಸಿಕೊಳ್ಳುವುದು ಮುಖ್ಯ ಅಷ್ಟೆ.

ನಿಮ್ಮ ಕುಟುಂಬದ ಬಗ್ಗೆ?

ನಾನು ವಿಶ್ವಮಾನವ!

ಟಿಎಸ್‌ಐ

ಡಿ.ಎಸ್. ಶ್ರೀಕಲಾ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .