ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ರಾಶಿ ಚಕ್ರ
Rashi Chakra

Astrology Makara ಮಕರ

(ಡಿ.22-ಜ.21)

ಉತ್ತಮ ಕೇಳುಗರಾದಲ್ಲಿ ನಿಮಗೇ ಲಾಭ. ಪ್ರಮುಖ ವಿಚಾರ ನಿರ್ಲಕ್ಷಿಸಿದಲ್ಲಿ ನಿಮ್ಮ ಪ್ರೀತಿ ಪಾತ್ರರ ಬೇಸರಕ್ಕೆ ಕಾರಣವಾಗಬಹುದು. ಅನಗತ್ಯ ಒತ್ತಡ ಅಥವಾ ಅಪಾಯ ತಂದುಕೊಳ್ಳುವ ಬದಲು ನಿಮ್ಮ ಮನಸ್ಥಿತಿಯ ಕುರಿತು ಅವರಲ್ಲಿ ವಿವರವಾಗಿ ತಿಳಿಸಿ. ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯ ವೃದ್ಧಿಯಾಗಲಿದೆ.

Astrology  Vrushabhaವೃಷಭ

(ಏ.21-ಮೇ.20)

ಕಾರ್ಯದೊತ್ತಡ ಮತ್ತು ಜವಾಬ್ದಾರಿ ಇನ್ನಷ್ಟು ಹೆಚ್ಚಲಿವೆ. ಇತರರ ಜೊತೆ ಮಾತಾಡುವಾಗ ಜಾಣ್ಮೆಯಿಂದಿರಿ. ತೀರಾ ಮೈಮೇಲೆ ಬೀಳುವುದು ನಿಮ್ಮ ಆಪ್ತರು ದೂರ ಸರಿಯಲು ಕಾರಣವಾಗಬಹುದು. ಪ್ರಣಯ ಬದುಕಿನಲ್ಲಿ ಬದಲಾವಣೆ ಇರದು. ಹಣಕಾಸು ವಿಚಾರದಲ್ಲಿ ಜಾಗ್ರತೆವಹಿಸಿ. ಅವಸರದ ನಿರ್ಧಾರ ಅಪಾಯಕ್ಕೆ ನಾಂದಿ.

Astrology Kanyaಕನ್ಯಾ

(ಆ.24-ಸೆ.23)

ಸಣ್ಣ-ಪುಟ್ಟ ತೊಂದರೆಗಳು ಮತ್ತು ವಿಳಂಬ ನಿಮ್ಮ ವೃತ್ತಿಕ್ಷೇತ್ರದ ಮೇಲೆ ಯಾವುದೇ ಪರಿಣಾಮ ಬೀರದು. ಹೊಸ ಯೋಜನೆಗಳು ಯಶಸ್ವಿಯಾಗಲಿವೆ. ಸಾಂಸಾರಿಕ ಜೀವನದಲ್ಲಿ ತುಸು ಬಿಕ್ಕಟ್ಟು ಎದುರಾಗಬಹುದು. ಅನಗತ್ಯ ಖರ್ಚು ಬೇಡ. ಅವಿವಾಹಿತರು ವಿಶೇಷ ವ್ಯಕ್ತಿಗಳನ್ನು ಭೇಟಿಯಾಗಲು ಸಕಾಲ.

Astrology  Kumbhaಕುಂಭ

(ಜ.22-ಫೆ.19)

ಕಾರ್ಯ ಸ್ಥಿರತೆ ಹಾಗೂ ವಿಶ್ವಾಸಾರ್ಹ ನಡವಳಿಕೆಯಿಂದ ನಿಮ್ಮ ವ್ಯಕ್ತಿತ್ವ ವೃದ್ಧಿ. ಸಮಯ ಪ್ರಜ್ಞೆ ಹಾಗೂ ಚತುರತೆಯಿಂದ ಪ್ರೀತಿಪಾತ್ರರೊಂದಿಗಿನ ಮನಸ್ತಾಪವನ್ನು ಪರಿಹರಿಸಿಕೊಳ್ಳಿ. ಪ್ರೇಮ ಜೀವನದಿಂದ ಸಂತಸ ಪ್ರಾಪ್ತಿ. ಉನ್ನತ ಶಿಕ್ಷಣದ ಕುರಿತಾಗಿ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ದೊರಕುವ ಸಾಧ್ಯತೆ.

Astrology  Mithunaಮಿಥುನ

(ಮೇ.21-ಜೂ.21)

ಪ್ರೀತಿಪಾತ್ರರು ಹಾಗೂ ಸಹೋದ್ಯೋಗಿ ಗಳ ಅಭಿಪ್ರಾಯ ಗೌರವಿಸಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಆದಷ್ಟು ಸಮಯದ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ಈಗಾಗಲೇ ವಿಳಂಬವಾಗಿರುವ ಕೆಲಸಗಳನ್ನು ತಕ್ಷಣ ಮುಗಿಸಿ. ನಿಮ್ಮ ಸಂಗಾತಿ ಚಿಂತೆಯಲ್ಲಿದ್ದರೆ, ಸಮಾಧಾನಪಡಿಸಿ. ಆರೋಗ್ಯದೊಂದಿಗೆ ಚೆಲ್ಲಾಟ ಬೇಡ.

Astrology  Tulaತುಲಾ

(ಸೆ.24-ಅ.23)

ನಿಮ್ಮ ಆಸಕ್ತಿಯ ಗುರಿ ಸಾಧಿಸಲು ಹೊಸ ಯೋಜನೆಗಳನ್ನು ರೂಪಿಸಲಿದ್ದೀರಿ. ಹೊಸ ಯೋಜನೆಗಳಲ್ಲಿನ ನಿಮ್ಮ ದೃಷ್ಟಿಕೋನ ಸಂಬಂಧಪಟ್ಟವರನ್ನು ಆಕರ್ಷಿಸಲಿದೆ. ಪ್ರಣಯಿಗಳಿಗೆ ಪ್ರೇಮ ಪರ್ವ ಕಾಲ. ಕುಟುಂಬದ ಹಿರಿಯರು ಮತ್ತು ಮಕ್ಕಳೊಂದಿಗೆ ಕಳೆಯಲು ಹೆಚ್ಚು ಸಮಯ ಮೀಸಲಿಡಲಿದ್ದೀರಿ.

Astrology  Meenaಮೀನ

(ಫೆ.20-ಮಾ.20)

ತಾಳ್ಮೆ ಮತ್ತು ನಿರಂತರ ಪ್ರಯತ್ನ ನಿಮ್ಮ ಯೋಜನೆಗಳ ಪ್ರಗತಿಗೆ ರಹದಾರಿ. ಸಂಗಾತಿ ಜೊತೆ ವಿಶೇಷ ದಿನಗಳನ್ನು ಕಳೆಯಲಿದ್ದೀರಿ. ಆರ್ಥಿಕ ವಿಚಾರಗಳಲ್ಲಿ ದುಡುಕಿನ ನಿರ್ಧಾರ ಸಲ್ಲದು, ಬಂಡವಾಳ ಹೂಡಿಕೆ ಅಥವಾ ಇನ್ನಿತರ ಆರ್ಥಿಕ ಸಂಬಂಧಿತ ಯೋಜನೆಗಳಲ್ಲಿ ಯೋಚಿಸಿ ಮುಂದಿನ ಹೆಜ್ಜೆಯಿಡಿ.

Astrology  Katakaಕಟಕ

(ಜೂ.22-ಜು.22)

ಕ್ರಿಯಾಶೀಲ ಕಾರ್ಯ ಕೌಶಲ್ಯತೆಗಳಿಂದಾಗಿ, ನಿಮ್ಮ ಸಹೋದ್ಯೋಗಿಗಳನ್ನು ಹಿಮ್ಮೆಟ್ಟಿಸಿ ಗೆಲುವು ಸಾಧಿಸಬಹುದು. ವೈಯಕ್ತಿಕ ಮತ್ತು ವೃತ್ತಿಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪರಿಣಾಮಕಾರಿ ಯೋಜನೆಗಳನ್ನು ಕೈಗೊಳ್ಳಲಿದ್ದು, ಅವುಗಳಲ್ಲಿ ಗೆಲುವು ನಿಮ್ಮದೇ. ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಿರಿ, ಇಲ್ಲದಿದ್ದರೆ ಮನಸ್ತಾಪವುಂಟಾಗಬಹುದು.

Astrology  Vrushikaವೃಶ್ಚಿಕ

(ಅ.24-ನ.22)

ಯಾವುದೇ ಕಾರ್ಯದಲ್ಲಿ ಆತುರ ಬೇಡ. ಯೋಜನೆಗಳ ಕುರಿತು ಪೂರ್ಣ ವಿವರ ಪಡೆಯಲು ಸಮಯ ಮೀಸಲಿಡಿ. ಕಾರ್ಯಕ್ಷೇತ್ರದಲ್ಲಿ ದೃಢ ನಿರ್ಧಾರ ಮತ್ತು ಸಮರ್ಪಣಾ ಮನೋಭಾವದಿಂದ ತೃಪ್ತಿಕರ ಫಲಿತಾಂಶ ಸಿಗಲಿದೆ. ಪ್ರಣಯ ಜೀವನದಲ್ಲಿ ಸಂತಸ. ಉದ್ಯೋಗದ ನಿರೀಕ್ಷ್ಷೆಯಲ್ಲಿರುವವರಿಗೆ ಶುಭಕಾಲ. ವಿದ್ಯಾರ್ಥಿಗಳ ಓದಿನಲ್ಲಿ ಪ್ರಗತಿ.

Astrology  Meshaಮೇಷ

(ಮಾ.21-ಏ.20)

ತಾಳ್ಮೆಯಿಂದ ವ್ಯವಹರಿಸಿದಲ್ಲಿ ಎದುರಾಗುವ ಅನಿರೀಕ್ಷಿತ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬಹುದು. ನಿರ್ಣಾಯಕ ವಿಷಯಗಳಲ್ಲಿ ವಸ್ತುನಿಷ್ಠವಾಗಿ ಯೋಚಿಸಿ ಸೂಕ್ತ ತೀರ್ಮಾನ ಕೈಗೊಂಡಲ್ಲಿ ಭವಿಷ್ಯದ ಅವಕಾಶಗಳು ಕೈಗೂಡಲಿವೆ. ಹೊಸ ಪ್ರಣಯ ಸಂಬಂಧವೊಂದು ಖುಷಿ ತರಲಿದೆ ಮತ್ತು ನಾಳೆಯ ಬದುಕಿಗೆ ಬದ್ಧತೆಯಾಗಲಿದೆ.

Astrology  Simhaಸಿಂಹ

(ಜು.23-ಆ.23)

ಅಧಿಕ ಕಾರ್ಯದೊತ್ತಡದ ನಡುವೆ ಪ್ರಸ್ತುತ ವಿಷಯಗಳತ್ತ ಗಮನ ಹರಿಸಿ. ವೈಯಕ್ತಿಕ ಮತ್ತು ವೃತ್ತಿಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈಗಾಗಲೇ ಆರಂಭಿಸಿರುವ ಹೊಸ ಯೋಜನೆಗಳನ್ನು ಬೇಗನೇ ಪೂರ್ಣಗೊಳಿಸಿ. ಪ್ರಣಯ ಜೀವನ ಗರಿಗೆದರಲಿದೆ. ಆರ್ಥಿಕ ಸ್ಥಿರತೆಯಲ್ಲಿ ಮಹತ್ತರ ಬದಲಾವಣೆ ಆಗಲಿದೆ.

Astrology  Dhanuಧನು

(ನ.23-ಡಿ.21)

ದೃಢ ಚಿತ್ತದಿಂದಿರಿ ಮತ್ತು ನಿಮ್ಮ ಕಾರ್ಯತತ್ಪರತೆಯಿಂದಾಗಿ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಬಹುದು. ನಿಮ್ಮ ಪ್ರೀತಿಪಾತ್ರರ ವೈಯಕ್ತಿಕ ವಿಷಯಗಳಲ್ಲಿ ನೀವು ತೀರಾ ಮೂಗು ತೂರಿಸುವುದು ತರವಲ್ಲ. ವೈಯಕ್ತಿಕ ತೃಪ್ತಿ ಮುಖ್ಯ. ನಿಮ್ಮ ಮನಸ್ಸಿಗೆ ಸಂತಸ ನೀಡುವ ವಿಚಾರಕ್ಕೆ ಹೆಚ್ಚು ಗಮನ ನೀಡಿಲಿದ್ದೀರಿ.

ಟಿ.ಎಸ್.ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .