|

ರಂಗಭೂಮಿಯಲ್ಲಾಗಿರುವ ಬದಲಾವqಣೆ ?
ಆಧುನಿಕ ರಂಗಭೂಮಿಯಲ್ಲಿ ಪ್ರಯೋಗಗಳು ಹೆಚ್ಚುತ್ತಿವೆ .
ಅದರಲ್ಲೂ ಕರ್ನಾಟಕದ ರಂಗಭೂಮಿಯಲ್ಲಿ ಪ್ರಯೋಗಶೀಲತೆ
ಸ್ವಲ್ಪ ಹೆಚ್ಚೇ ಎನ್ನಬಹುದು.
ತಿರುಗಾಟಗಳೂ ರಂಗಭೂಮಿ ಅಭಿವೃದ್ಧಿಯಲ್ಲಿ
ಗಮನಾರ್ಹ ಪಾತ್ರ ವಹಿಸುತ್ತಿವೆ.
' ನಟನಾ'
ರಂಗ ಚಟುವಟಿಕೆ ಕೇಂದ್ರ ಸ್ಥಾಪನೆಗೆ ಪ್ರೇರಣೆ?
' ನೀನಾಸಂ'
ವೃತ್ತಿಪರತೆ,
'ರಂಗಾಯಣ'
ಪ್ರಯೋಗಶೀಲತೆ ಮತ್ತು ಹವ್ಯಾಸಿ ತಂಡಗಳ ಉತ್ಸುಕತೆಯೇ
'ನಟನಾ'
ಹುಟ್ಟಿಗೆ ಪ್ರೇರಣೆ.
' ನಟನಾ'ದಲ್ಲಿ
ಹೆಚ್ಚಾಗಿ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶೇಷ ಶಿಬಿರ ನಡೆಸಲು
ಕಾರಣ?
ದೇಶೀ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವುದೇ ಮುಖ್ಯ ಉದ್ದೇಶ.
ನಿಮ್ಮ ಪ್ರಕಾರ ರಂಗಭೂಮಿಯ ಭವಿಷ್ಯ ಹೇಗಿರಬೇಕು ?
ಶಿಕ್ಷಣ ಸಂಸ್ಥೆಗಳಲ್ಲಿ ನಾಟಕಕ್ಕಾಗಿಯೇ ವಿಶೇಷ ತರಗತಿಗಳು ಆರಂಭವಾಗಬೇಕು .
ಸಿನಿಮಾಗಳಂತೆ ನಾಟಕಕ್ಕೂ ಪ್ರಚಾರ ದೊರಕಬೇಕು.
ಮಾಧ್ಯಮಗಳ ಪಾತ್ರವೂ ಇಲ್ಲಿ ಮುಖ್ಯ
ಆರೋಗ್ಯಪೂರ್ಣ ಹಾಸ್ಯ ಈಗ ಕಡಿಮೆಯಾಗುತ್ತಿದೆಯಲ್ಲಾ ....?
ನಮ್ಮಲ್ಲಿ ಪ್ರಜ್ಞಾವಂತ ದೃಷ್ಟಿ ಮಾಯವಾಗುತ್ತಿದೆ. ಅಧ್ಯಯನಶೀಲತೆ ಕಡಿಮೆಯಾಗುತ್ತಿರುವುದೂ ಇದಕ್ಕೆ
ಕಾರಣ.
ಡಿ.ಎಸ್. ಶ್ರೀಕಲಾ
|