ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ರಾಶಿ ಚಕ್ರ
Rashi Chakra

Astrology Makara ಮಕರ

(ಡಿ.22-ಜ.21)

ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಮನೋಭಾವದಿಂದ ಮುನ್ನಡೆಯಲಿದ್ದೀರಿ. ಇದರಿಂದ ಕಾರ್ಯದೊತ್ತಡ, ವೈಯಕ್ತಿಕ ಒತ್ತಡಗಳು ಕಡಿಮೆಯಾಗಲಿವೆ. ಯೋಜನೆಗಳ ಪೂರ್ವಾಪರಗಳನ್ನು ತಿಳಿದೇ ಹೆಜ್ಜೆ ಇಡಿ. ಚಾಣಾಕ್ಷ ಕಾರ್ಯಗಳು ಭವಿಷ್ಯದಲ್ಲಿ ಸಹಕಾರಿಯಾಗಲಿವೆ. ಹೊಸ ಪ್ರಣಯ ಸಂಬಂಧ ಭವಿಷ್ಯದಲ್ಲಿ ನೆಮ್ಮದಿ ನೀಡಲಿದೆ.

Astrology  Vrushabhaವೃಷಭ

(ಏ.21-ಮೇ.20)

ಈ ವಾರ ಗುರಿ ತಲುಪುವುದು ಸುಲಭ ಸಾಧ್ಯವಾಗಲಿದೆ. ಕ್ರಿಯಾಶೀಲ ಹಾಗೂ ವಿಮರ್ಶಾತ್ಮಕ ಚಿಂತನೆ ನಿಮ್ಮ ಕೆಲಸವನ್ನು ಹಗುರಗೊಳಿಸಲಿದೆ. ಆದರೆ ಎಂದಿಗೂ ನಿಮ್ಮ ಸಂಯಮ ಕಳೆದುಕೊಳ್ಳಬೇಡಿ. ಆಪ್ತರೊಂದಿಗೆ ವ್ಯವಹರಿಸುವಾಗ ತಾಳ್ಮೆ ಅಗತ್ಯ. ಪ್ರೇಮ ಸಂಬಂಧ ಗರಿಗೆದರಲಿದೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

Astrology Kanyaಕನ್ಯಾ

(ಆ.24-ಸೆ.23)

ಕ್ರಿಯಾಶೀಲ ಚಿಂತನೆ, ದಿಟ್ಟ ಗುರಿ ಬಹುಕಾಲದ ನಿರೀಕ್ಷೆಯನ್ನು ಸಾಕಾರಗೊಳಿಸಲಿದೆ. ನಿಮ್ಮ ಯೋಜನೆ ಹಾಗೂ ಕಾರ್ಯೋದ್ದೇಶಗಳನ್ನು ಕೆಡಿಸಲು ಸಂಚು ಹೂಡುವವರಿದ್ದಾರೆ. ಎಷ್ಟೇ ಸಮಸ್ಯೆಯಿದ್ದರೂ ಪ್ರೀತಿ ಪಾತ್ರರೊಂದಿಗೆ ತಾಳ್ಮೆಯಿಂದ ವರ್ತಿಸಿ. ಪ್ರಣಯ ಸಂಬಂಧದಿಂದ ಮಾನಸಿಕ ತೃಪ್ತಿ ಸಿಗಲಿದೆ. ಆರೋಗ್ಯದ ಕಡೆ ಗಮನ ಅಗತ್ಯ.

Astrology  Kumbhaಕುಂಭ

(ಜ.22-ಫೆ.19)

ಕಾರ್ಯದೊತ್ತಡ ಅಧಿಕವಾಗಲಿದೆ. ನಿಮ್ಮ ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮ ಅನಿವಾರ್ಯ. ಬಿಡುವಿಲ್ಲದ ಕಾರ್ಯದಲ್ಲಿ ಇತರರು ತೊಡಗಿಸಿಕೊಂಡಿದ್ದಾಗ ನಿಮ್ಮ ಕಾರ್ಯಕ್ಕೆ ಮನ್ನಣೆ ದೊರಕದ ಸಂದರ್ಭ ಎದುರಾಗಬಹುದು. ಆಕ್ರಮಣಶೀಲ ವರ್ತನೆ ತ್ಯಜಿಸಿ ಮೃದು ಧೋರಣೆ ತಾಳಿ. ಹಣಕಾಸು ನಿರ್ಧಾರಗಳ ಕುರಿತು ಎಚ್ಚರಿಕೆಯಿರಲಿ.

Astrology  Mithunaಮಿಥುನ

(ಮೇ.21-ಜೂ.21)

ಅನಿರೀಕ್ಷಿತ ವಿಳಂಬ ಅಥವಾ ಕೊನೆ ಕ್ಷಣದ ಬದಲಾವಣೆಗಳ ಸಾಧ್ಯತೆಯಿದೆ. ಹಾಗಾಗಿ ನಿಮ್ಮ ಕೆಲಸದ ಕುರಿತಾಗಿ ಸೂಕ್ತ ವೇಳಾಪಟ್ಟಿ ಅಗತ್ಯ. ಪ್ರೀತಿ ಪಾತ್ರರು ನಿಮ್ಮ ಸಹಾಯ ಹಾಗೂ ಬೆಂಬಲ ಅರಸಿ ಬರಲಿದ್ದಾರೆ. ಬೇಜವಾಬ್ದಾರಿ ವರ್ತನೆ ಸಮಸ್ಯೆ ಸೃಷ್ಟಿಸಲಿದೆ. ಅವಿವಾಹಿತರು ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ.

Astrology  Tulaತುಲಾ

(ಸೆ.24-ಅ.23)

ಕಾರ್ಯದೊತ್ತಡ ನಿಮ್ಮನ್ನು ಕಾಡಲಿದ್ದು, ಯೋಜಿತ ಕಾರ್ಯ ವಿಳಂಬವಾಗಲಿದೆ. ನಿಮ್ಮ ನಿರೀಕ್ಷೆಯಂತೆ ಕಾರ್ಯ ನಡೆಯದಿದ್ದರೂ ಖಿನ್ನರಾಗುವ ಅಗತ್ಯವಿಲ್ಲ. ಮಕ್ಕಳ ಕುರಿತು ಚಿಂತಿಸಲಿದ್ದೀರಿ. ಆಪ್ತರೊಂದಿಗಿನ ಸಂಬಂಧ ಸುಧಾರಿಸಿ. ಸಂಗಾತಿಗೆ ನಿಮ್ಮ ಬೆಂಬಲ ಅಗತ್ಯ. ಅವರಿಗಾಗಿಯೇ ಸಮಯ ಮೀಸಲಿರಿಸಿ. ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ.

Astrology  Meenaಮೀನ

(ಫೆ.20-ಮಾ.20)

ನಿಮ್ಮ ಅಭಿಪ್ರಾಯಗಳ ಬಗ್ಗೆ ಅಸಮ್ಮತಿ ವ್ಯಕ್ತವಾದರೂ, ಇತರರ ಮಾತಿಗೂ ಬೆಲೆ ನೀಡಿ. ಕುಟುಂಬ ಕಲಹಗಳನ್ನು ಬಗೆಹರಿಸುವಲ್ಲಿ ವಿಫಲವಾದರೆ ನಿಮ್ಮ ನಿರ್ಧಾರಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಿ. ಸಂಗಾತಿಯೊಂದಿಗೆ ಸುಖಕರ ಸಮಯ ಕಳೆಯಲಿದ್ದೀರಿ. ದೈಹಿಕ ಹಾಗೂ ಮಾನಸಿಕವಾಗಿ ಉತ್ಸಾಹಭರಿತರಾಗಿರುತ್ತೀರಿ.

Astrology  Katakaಕಟಕ

(ಜೂ.22-ಜು.22)

ಕಾರ್ಯಗತಿಯಲ್ಲಿ ಪ್ರಗತಿ. ಬಾಕಿ ಉಳಿದ ಯೋಜನೆಗಳನ್ನು ಪೂರ್ಣಗೊಳಿಸಲು ಇದು ಸಕಾಲ. ಸ್ಪಷ್ಟ ನಿಲುವುಗಳಿಲ್ಲದ ಸಂದರ್ಭದಲ್ಲಿ ಅವಸರದ ನಿರ್ಧಾರ ಕೈಗೊಳ್ಳಬೇಡಿ. ಇತರರ ಸಲಹೆ ಸೂಚನೆಗಳಿಗೂ ಆದ್ಯತೆ ನೀಡಿ. ಪ್ರೇಮ ಸಂಬಂಧದಿಂದ ಶಾಂತಿ, ನೆಮ್ಮದಿ. ಆರೋಗ್ಯ, ಹಣಕಾಸು ವ್ಯವಹಾರಗಳ ಕುರಿತು ಎಚ್ಚರಿಕೆ ಇರಲಿ.

Astrology  Vrushikaವೃಶ್ಚಿಕ

(ಅ.24-ನ.22)

ಈ ವಾರ ಸಂಪೂರ್ಣವಾಗಿ ಕಾರ್ಯನಿರತರಾಗಿರುತ್ತೀರಿ. ಸಾಂಘಿಕ ಕಾರ್ಯಕ್ಕೆ ಪ್ರಾಮುಖ್ಯತೆ ನೀಡಿ. ಹೊಸ ವಿಚಾರಗಳನ್ನು ಕಲಿಯುವ ಉತ್ಸಾಹ ವೈಯಕ್ತಿಕ ಅಭಿವೃದ್ಧಿಗೆ ಸಹಕಾರಿ. ಉದ್ಯೋಗ ವಲಯದಿಂದಲೂ ಪ್ರಶಂಸೆ ಗಿಟ್ಟಿಸಲಿದ್ದೀರಿ. ಸಂಗಾತಿಯೊಂದಿಗೆ ಸಂತಸದಿಂದಿರಿ. ಅನಿರೀಕ್ಷಿತ ಖರ್ಚುಗಳಿಂದ ಹಣಕಾಸು ತೊಂದರೆ.

Astrology  Meshaಮೇಷ

(ಮಾ.21-ಏ.20)

ನಿಮ್ಮ ಸ್ವಂತ ನಿರ್ಧಾರಗಳು ಕಾರ್ಯರೂಪಕ್ಕೆ ಬರುವಂತೆ ಮಾಡುವ ಕ್ರಿಯಾಶೀಲ ಚಿಂತನೆಗಳು ನಿಮ್ಮಲ್ಲಿರಲಿ. ಹೊಸ ಸ್ನೇಹ-ಸಂಬಂಧಗಳು ನಿಮ್ಮನ್ನರಸಿ ಬರಲಿವೆ. ಒತ್ತಡದ ಸಂದರ್ಭಕ್ಕೆ ತೆರೆದುಕೊಳ್ಳುವ ಮನಸ್ಥಿತಿ ಅಗತ್ಯ. ಇಲ್ಲದಿದ್ದಲ್ಲಿ ಅನವಶ್ಯಕ ಕಲಹಗಳು ಎದುರಾಗುವ ಸಾಧ್ಯತೆ ಇದೆ. ಅನಗತ್ಯ ದುಂದುವೆಚ್ಚ ಕಡಿಮೆಯಾಗಲಿದೆ.

Astrology  Simhaಸಿಂಹ

(ಜು.23-ಆ.23)

ಅವಾಸ್ತವಿಕ ನಿರೀಕ್ಷೆಗಳು ನಿಮ್ಮ ಕಾರ್ಯವೈಖರಿಯನ್ನು ಬುಡಮೇಲು ಮಾಡಲಿವೆ. ದುಡುಕಿನ ನಿರ್ಧಾರ ಬೇಡ. ಸಮರ್ಪಕ ಮಾಹಿತಿ ಆಧರಿಸಿಯೇ ನಂತರದ ಹೆಜ್ಜೆ ಇಡಿ. ನಿಮ್ಮ ಸಿದ್ಧಾಂತಗಳಿಗೆ ಬದ್ಧರಾಗಿರಿ. ಪ್ರಣಯ ಜೀವನಕ್ಕೆ ತೆರೆದುಕೊಳ್ಳುವ ಮನೋಭಾವ ನಿಮ್ಮದಾಗಿರಲಿ. ಸಾಮಾಜಿಕ ಕಾರ್ಯಗಳಲ್ಲಿ ಸಂಪೂರ್ಣ ನಿರತರಾಗಲಿದ್ದೀರಿ.

Astrology  Dhanuಧನು

(ನ.23-ಡಿ.21)

ನಿಮ್ಮ ವಿಶ್ವ್ವಾಸಾರ್ಹ ನಡವಳಿಕೆ ಹಾಗೂ ಸಾಮರ್ಥ್ಯ ಮೆಚ್ಚುಗೆಗೆ ಪಾತ್ರವಾಗಲಿದೆ. ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ. ಪ್ರಣಯ ಜೀವನದಲ್ಲಿ ಇರಿಸು- ಮುರಿಸು ಉಂಟಾಗುವ ಸಾಧ್ಯತೆಯಿದೆ. ಪ್ರೀತಿಪಾತ್ರರೊಂದಿಗಿನ ಸಂಬಂಧಕ್ಕೆ ಬದ್ಧರಾಗಿರಿ. ಹಣಕಾಸು ವಿಚಾರದತ್ತ ಗಮನವಿರಲಿ. ಯಾವುದೇ ಪ್ರಸ್ತಾಪಗಳಿಗೂ ಯೋಚಿಸಿ ಸಮ್ಮತಿ ಸೂಚಿಸಿ.

ಟಿ.ಎಸ್.ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .