ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಮರೆಯಲಿ ಹ್ಯಾಂಗ?
 
 

 

ಏನು?

ಕೌಟುಂಬಿಕ ಹಿಂಸಾ ಕಾಯ್ದೆ, 2005ರ ಕುರಿತು.

ಏಕೆ?

ಸರ್ಕಾರ, ಮಹಿಳೆಯರನ್ನು ಕೌಟುಂಬಿಕ ಹಿಂಸೆಯಿಂದ ರಕ್ಷಿಸಲು ಇನ್ನಷ್ಟು ಸದೃಢ ಕಾನೂನು ರೂಪಿಸಲು 'ಕೌಟುಂಬಿಕ ಹಿಂಸೆಯಿಂದ ಮಹಿಳಾ ರಕ್ಷಣೆ ಕಾಯ್ದೆ'ಯನ್ನು 2005ರಲ್ಲಿ ಜಾರಿಗೆ ತಂದಿತು. 2006ರ ಅಕ್ಟೋಬರ್ 17ರಂದು ಈ ಕಾಯ್ದೆಯನ್ನು ಕಾರ್ಯರೂಪಕ್ಕೆ ತರಲಾಯಿತು. ಇದು ಸಂಪೂರ್ಣ ವ್ಯವಸ್ಥೆಗೇ ಹೊಸ ರೂಪ ನೀಡಿ ನಿಖರವಾದ ಬದಲಾವಣೆ ತರಬಲ್ಲದು ಎಂದು ಪ್ರತಿಯೊಬ್ಬರೂ ನಿರೀಕ್ಷಿಸಿದ್ದರು. ಆದರೆ ಯಾವ ಬದಲಾವಣೆಯೂ ಆಗಿಲ್ಲ. 'ಕೌಟುಂಬಿಕ ಹಿಂಸಾ ಕಾಯ್ದೆ' ಅನ್ವಯ ಮಹಿಳೆಯರಿಗೆ ರಕ್ಷಣೆ ನೀಡಲು ಎಲ್ಲಾ ರಾಜ್ಯ ಸರ್ಕಾರಗಳಲ್ಲಿ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಹಾಗೆ ನೇಮಕಗೊಂಡ ಅಧಿಕಾರಿಗಳು ಕಾಯ್ದೆಯಲ್ಲಿ ಸೂಚಿಸಲಾದ ನೀತಿ ನಿಯಮಾವಳಿಯನ್ನು ಪಾಲಿಸಬೇಕಾಗುತ್ತದೆ. ಮಹಿಳೆ ಕುಟುಂಬದಲ್ಲಿ ಎದುರಿಸುವ ಹಿಂಸೆಯ ವಿಚಾರಣೆ ನಡೆಸುವುದರಿಂದ ತೊಡಗಿ ಉತ್ತಮ ಕಾನೂನು ಸಲಹೆ , ಮತ್ತು ನ್ಯಾಯಾಂಗ ಕ್ರಮ ಕೈಗೊಳ್ಳಲು ಸಹಕಾರ ನೀಡುವುದು ಇವರ ಕರ್ತವ್ಯ.

ಮತ್ತೇನು?

ಆದರೆ ರಾಜಧಾನಿಯಲ್ಲೇ ಈ ಕಾನೂನಿನ ಬಗ್ಗೆ ಮಾಹಿತಿ ಇರುವವರು ವಿರಳ. ಇವೆಲ್ಲದರ ಹೊರತಾಗಿ ಮೇಘಾಲಯ, ನಾಗಲ್ಯಾಂಡ್, ಹರಿಯಾಣ ಮತ್ತು ರಾಜಸ್ತಾನದಂತಹ ರಾಜ್ಯಗಳಲ್ಲಿ ಇದುವರೆಗೆ ಆ ಸ್ಥಾನಕ್ಕೆ ಅಧಿಕಾರಿಗಳನ್ನೇ ನೇಮಿಸಲಾಗಿಲ್ಲ. ಹೀಗಾಗಿ ಸರ್ಕಾರ ಈ ಕಾಯ್ದೆಯು ಸಮರ್ಥವಾಗಿ ಜಾರಿಗೊಳ್ಳಲು ಕ್ರಮ ಕೈಗೊಳ್ಳಬೇಕು. ದೇಶದ ಪ್ರತಿ ಮಹಿಳೆಯೂ ಸುರಕ್ಷಿತ ಎಂಬ ಭಾವನೆ ತಾಳುವಂತಾಗಬೇಕು.

ಟಿಎಸ್‌ಐ

ಪವನ್ ಪ್ರಣವ್

 

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .