ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಇಷ್ಟೇ - ಇಷ್ಟು
ಪ್ರಕಾಶ್ ಶೆಟ್ಟಿ : ವ್ಯಂಗ್ಯಚಿತ್ರಕಾರ
 

 

ಭಾವಾಭಿವ್ಯಕ್ತಿಗೆ ವ್ಯಂಗ್ಯಚಿತ್ರ ಪ್ರಕಾರವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ?

ಬಾಲ್ಯದಿಂದಲೂ ವ್ಯಂಗ್ಯಚಿತ್ರಗಳಲ್ಲಿ ಆಸಕ್ತಿ ಹೆಚ್ಚು. ನಿತ್ಯ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರವನ್ನು ಗಮನಿಸುತ್ತಿದ್ದೆ. ಮುಂದೆ ಅದೇ ನನ್ನ ಪ್ರವೃತ್ತಿ ಹಾಗೂ ಅಭಿವ್ಯಕ್ತಿಯ ಮಾಧ್ಯಮವಾಯಿತು.

ತರಬೇತಿ ಇದೆಯೇ ಅಥವಾ ಸಹಜವಾಗಿ ರೂಢಿಸಿಕೊಂಡಿದ್ದೆ.....

ಯಾವುದೇ ತರಬೇತಿ, ಹಿನ್ನೆಲೆ ಇಲ್ಲ. ಪತ್ರಿಕೆಗಳಿಂದ ಪ್ರಭಾವಿತನಾಗಿದ್ದೆ. ಶ್ರದ್ಧೆ ಇದ್ದಲ್ಲಿ ಸಾಧನೆ ಸಾಧ್ಯ. ತರಬೇತಿಯ ಅವಶ್ಯಕತೆಯೇನೂ ಇಲ್ಲ.

ಪ್ರಸ್ತುತ ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಪ್ರೋತ್ಸಾಹ ಹೇಗಿದೆ?

ನಾನು ಕಳೆದ ಮೂವತ್ತು ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಿಂದೆ ಪ್ರೋತ್ಸಾಹ ಇತ್ತು, ಅವಕಾಶಗಳಿದ್ದವು. ಈಗ ಬೆರಳೆಣಿಕೆಯಷ್ಟು ವ್ಯಕ್ತಿಗಳು ಮಾತ್ರ ವ್ಯಂಗ್ಯಚಿತ್ರಗಳನ್ನು ಬರೆಯುತ್ತಾರೆ.

ವ್ಯಂಗ್ಯಚಿತ್ರ ಕ್ಷೇತ್ರದ ಸವಾಲುಗಳೇನು?

ವ್ಯಂಗ್ಯಚಿತ್ರ ಕ್ಷೇತ್ರವೇ ಒಂದು ಸವಾಲು. ಇಲ್ಲಿ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನಾವೇ ಅವಕಾಶಗಳನ್ನು ಅರಸಿ ಹೋಗಬೇಕು. ಹಾಗಿದ್ದರೆ ಮಾತ್ರ ಇಲ್ಲ್ಲಿ ಉಳಿಯಲು ಸಾಧ್ಯ.

ಇತರೆ ಹವ್ಯಾಸಗಳು...

ವ್ಯಂಗ್ಯಚಿತ್ರದಂಥ 'ಕೆಟ್ಟ' ಹವ್ಯಾಸ ಹೊರತುಪಡಿಸಿದರೆ ಹಾಡುವುದು ಕೂಡಾ ನನ್ನ ಹವ್ಯಾಸ. ಒಂದು ವೇಳೆ ನಾನು ವ್ಯಂಗ್ಯಚಿತ್ರಕಾರನಾಗಿರದಿದ್ದರೆ ಒಬ್ಬ ಗಾಯಕನಾಗಿರುತ್ತಿದ್ದೆ.

ಟಿಎಸ್‌ಐ

ಚಿತ್ರಾ ಕರ್ಕೇರಾ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .