|
ಸಂಗೀತದ ಹಿನ್ನೆಲೆ ಈ ಕ್ಷೇತ್ರದಲ್ಲಿ ನೆಲೆಗೊಳ್ಳಲು ಹೇಗೆ ಪೂರಕವಾಯಿತು?
ಸಂಗೀತ ನನಗೆ ಬಳುವಳಿ. ನಮ್ಮ ಮನೆಯಲ್ಲಿ ಪ್ರತಿಯೊಬ್ಬರೂ ಸಂಗೀತಾಸಕ್ತರು. ತಂದೆಯೇ ನನ್ನ ಮೊದಲ ಗುರು
ವಿಭಿನ್ನ ಶೈಲಿಯ ಸಂಗೀತಾಭ್ಯಾಸ ಗಾಯಕನ ಮೇಲೆ ಬೀರುವ ಪರಿಣಾಮ?
ಹೊಸ ಪದ್ಧತಿಗಳಿಗೆ ಹೊಂದಿಕೊಳ್ಳುವುದು ಕೆಲವೊಮ್ಮೆ ಕಷ್ಟ. ಆದರೆ ಹಾಡುಗಾರಿಕೆಗೆ ಸೌಂದರ್ಯ ನೀಡಿದ್ದೆ ಈ ವೈವಿಧ್ಯತೆ.
ಕನ್ನಡದ ಹಿನ್ನೆಲೆ ಗಾಯಕರಿಗೆ ಕನ್ನಡದಲ್ಲೇ ಅವಕಾಶ ಕಡಿಮೆ ಆಗುತ್ತಿದೆಯಲ್ಲ...
ಇದನ್ನು ಅಲ್ಲಗಳೆಯುವಂತಿಲ್ಲ. ಆದರೆ ಗಾಯಕ ಇವುಗಳೆಡೆಗೆ ಲಕ್ಷ್ಯ ವಹಿಸದೆ ತನ್ನ ಸಾಧನೆಯತ್ತ ಗಮನ ಹರಿಸಬೇಕು.
ಸಂಗೀತ ಸಂಯೋಜಕಿಯರು ಕಡಿಮೆಯಿರಲು ಕಾರಣ?
ಇದು ಪುರುಷ ಪ್ರಧಾನ ಸಮಾಜ. ಯಾವುದೇ ಕ್ಷೇತ್ರವಿರಲಿ, ಮಹಿಳೆಯರ ಆಗಮನ ನಿಧಾನವೇ. ಹಾಗಿದ್ದರೂ ಮಹಿಳಾ ಸಂಗೀತ ಸಂಯೋಜಕರು ಇತ್ತೀಚೆಗೆ ಕಾಣಿಸಿಕೊಳ್ಳತೊಡಗಿದ್ದಾರೆ.
ಪ್ರಸಿದ್ಧ ಸಂಗೀತಗಾರರೊಡನೆ ಕೆಲಸ ಮಾಡಿದ ಅನುಭವ...
ಸ್ವತಂತ್ರವಾಗಿ ಹಾಡಲು ಅವಕಾಶ ಕೊಡುವ ಜೊತೆಗೆ ನಮ್ಮ ಸಲಹೆಗಳನ್ನೂ ಸ್ವೀಕರಿಸುವ ಸಹೃದಯತೆ ಅವರಿಗಿದೆ.
ಯಾವ ಸಂಗೀತ ಪ್ರಕಾರದೆಡೆಗೆ ಹೆಚ್ಚಿನ ಒಲವು?
ಲಘು ಶಾಸ್ತ್ರೀಯ ಸಂಗೀತ.
ಟಿಎಸ್‌ಐ
ಡಿ.ಎಸ್. ಶ್ರೀಕಲಾ
|