ಕ್ರಿಯಾಶೀಲ ಚಿಂತನೆಗಳು ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಗುರಿ ಸಾಧನೆಗೆ ರಹದಾರಿ. ಉದ್ಯಮ ಕ್ಷೇತ್ರದಲ್ಲಿರುವವರು ಸಾರ್ವಜನಿಕ ಸಂಪರ್ಕವನ್ನು ಇನ್ನಷ್ಟು ವೃದ್ಧಿಸಿಕೊಳ್ಳಿ ಮತ್ತು ಮಾರುಕಟ್ಟೆ ವಲಯದಲ್ಲಿ ಹೊಸ ಕೌಶಲ್ಯಗಳನ್ನು ಪ್ರಯೋಗಿಸಿ. ಮಹತ್ವದ ಸಭೆಗಳಲ್ಲಿ ಭಾಗವಹಿಸಿ. ಮಕ್ಕಳ ಕಡೆಗೆ ಹೆಚ್ಚಿನ ಗಮನಹರಿಸಿ. ಆರ್ಥಿಕ ಸ್ಥಿತಿ ಉತ್ತಮ, ಧನಲಾಭ.
ಕಾರ್ಯಕ್ಷೇತ್ರದ ಕುರಿತು ನಿರ್ಧರಿಸುವಾಗ ಎಚ್ಚರ. ಆತುರದಿಂದ ಅಚಾತುರ್ಯ ಖಚಿತ. ನಷ್ಟದ ವ್ಯವಹಾರ ಎನಿಸಿದಲ್ಲಿ, ಅದನ್ನು ಎದುರಿಸಲು ಸೂಕ್ತ ಯೋಜನೆಗಳನ್ನು ಹಾಕಿಕೊಳ್ಳಿ. ಪ್ರಣಯ ಬದುಕು ತೃಪ್ತಿಕರ. ಪ್ರೀತಿ ಪಾತ್ರರು ಸಲಹೆಗಳನ್ನು ಆಶಿಸಿದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರಬೇಡಿ.
ಕಟಕ
(ಜೂ.22-ಜು.22)
ಹೊಸತನವಿರುವ ಚಿಂತನೆಗಳಿಂದ ಕಾರ್ಯಸಾಧನೆ. ಯಾವುದೇ ವಿಷಯಗಳ ಕುರಿತು ಗೊಂದಲವಿದ್ದಲ್ಲಿ, ಸ್ನೇಹಿತರು ಅಥವಾ ಪ್ರೀತಿಪಾತ್ರರ ಸಲಹೆ ಪಡೆಯಿರಿ. ಪ್ರಯಾಣದಲ್ಲಿ ಮುಂಜಾಗ್ರತೆ. ಮನೆ ಅಭಿವೃದ್ಧಿ ಯೋಜನೆಗಳಲ್ಲಿ ಪ್ರಗತಿ. ಅವಿವಾಹಿತರಿಗೆ ಪರ್ವಕಾಲ. ಹಿರಿಯರ ಬಗ್ಗೆ ಗಮನವಿರಲಿ.
ವೃಶ್ಚಿಕ
(ಅ.24-ನ.22)
ಅಧಿಕ ಕಾರ್ಯದೊತ್ತಡ, ಆದರೆ ಕಾರ್ಯಪ್ರಗತಿ. ಅವಸರದಿಂದ ಅಚಾತುರ್ಯ. ನಿಮ್ಮ ಯೋಜನೆಗಳ ಕುರಿತು ವಸ್ತುನಿಷ್ಠ ಆಲೋಚನೆ ಅಗತ್ಯ, ಇದರಿಂದ ರಹಸ್ಯ ಮಾಹಿತಿಗಳು ಲಭ್ಯವಾಗಲಿವೆ. ಇತರರ ಖಾಸಗಿ ವಿಚಾರಗಳನ್ನು ಗೌರವಿಸಿ, ಇದರಿಂದ ನಿಮ್ಮ ಜೀವನದ ಒತ್ತಡ ನಿವಾರಣೆಯಾಗಲಿದೆ. ಕಾನೂನು ಸಂಬಂಧಿತ ವಿಚಾರಗಳಲ್ಲಿ ಗೆಲುವು.
ಮೇಷ
(ಮಾ.21-ಏ.20)
ಕ್ರಿಯಾಶೀಲ ಚಿಂತನೆಗಳಿಂದ ಕಾರ್ಯಸಾಧನೆ ಮತ್ತು ಕ್ಲಿಷ್ಟಕರ ಸಮಸ್ಯೆಗಳ ಪರಿಹಾರಕ್ಕೆ ರಹದಾರಿಯಾಗಲಿವೆ. ಕೌಟುಂಬಿಕ ವಿಚಾರಗಳಲ್ಲಿ ಪ್ರಗತಿ. ಆತ್ಮೀಯರ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ, ಇದರಿಂದ ಸಮಸ್ಯೆ ಪರಿಹಾರವಾಗಲಿದೆ. ಸಂಗಾತಿ ಜೊತೆ ನಿಮ್ಮ ದುಃಖವನ್ನು ಹಂಚಿಕೊಳ್ಳಿ, ನೆಮ್ಮದಿ ದೊರೆಯಲಿದೆ.
ಸಿಂಹ
(ಜು.23-ಆ.23)
ಕಾರ್ಯಸಾಧನೆ. ಸಹೋದ್ಯೋಗಿಗಳು ನಿಮ್ಮ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಲಿದ್ದಾರೆ. ನಿಮ್ಮ ಸಂಪರ್ಕ ವಲಯಗಳ ಮೂಲಕ ಹೊಸ ವೃತ್ತಿಪರ ಅವಕಾಶ. ನಿರ್ಧಾರ ಕೈಗೊಳ್ಳುವಾಗ ಸಂಗಾತಿಯ ಮಾತಿಗೂ ಮನ್ನಣೆ ನೀಡಿ. ಭಾವನೆಗಳನ್ನು ಪ್ರದರ್ಶಿಸುವಾಗ ಎಚ್ಚರ. ಅಪಾರ್ಥಕ್ಕೆ ಅವಕಾಶ ಕೊಡಬೇಡಿ.
ಧನು
(ನ.23-ಡಿ.21)
ಹೊಸ ಯೋಜನೆಗಳನ್ನು ಆರಂಭಿಸುವ ಆತುರದಲ್ಲಿ, ಒತ್ತಡಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ. ಏಕೆಂದರೆ ಇದರಲ್ಲಿ ನಿಮಗೇ ಆಸಕ್ತಿ ಬೆಳೆಯದು. ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದಿರಿ. ನಿಮ್ಮ ಕೆಲಸಗಳಿಗೆ ಅವರ ಪ್ರೋತ್ಸಾಹ ದೊರೆಯಲಿದ್ದು, ಇದು ನಿಮ್ಮ ಕಾರ್ಯಸಾಧನೆಗೆ ಪೂರಕ. ಪ್ರೇಮಿಗಳಿಗೆ ಒಳ್ಳೆಯ ಸುದ್ದಿ.
ಟಿ.ಎಸ್.ಐ