ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಮುಖಾಮುಖಿ : ಪ್ರಫುಲ್ ಪಟೇಲ್
ಯಾದವ್

ದೇಶಕ್ಕೆ ಇನ್ನೂ 400 ವಿಮಾನ ನಿಲ್ದಾಣಗಳ ಅಗತ್ಯವಿದೆ
 

ನಾಗರಿಕ ವಿಮಾನಯಾನ ಖಾತೆ ಸಚಿವರಾಗಿ ನಾಲ್ಕು ವರ್ಷ ಪೂರೈಸಿರುವ ಪ್ರಫುಲ್ ಪಟೇಲ್ ಟಿಎಸ್‌ಐನ ರಂಜಿತ್ ಭೂಷಣ್‌ಗೆ ನೀಡಿದ ಸಂದರ್ಶನದಲ್ಲಿ ವಿಮಾನಯಾನ ಕ್ಷೇತ್ರಕ್ಕೆ ಖಾಸಗಿ ಬಂಡವಾಳ ಆಕರ್ಷಿಸಲು ಅಗತ್ಯ ನೀತಿ ರೂಪಿಸುವುದಾಗಿ ಹೇಳಿದ್ದಾರೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿ ಆ ಕ್ಷೇತ್ರದ ಮಹತ್ತರ ಬದಲಾವಣೆಗೆ ಸಾಕ್ಷಿಯಾಗಿದ್ದೀರಿ. ಈ ಅಭಿವೃದ್ಧಿಗೆ ಕಾರಣ?

ಕಳೆದ ಕೆಲ ವರ್ಷಗಳಿಂದ ವೈಮಾನಿಕ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಖಾಸಗಿ ಹಾಗೂ ಸಾರ್ವಜನಿಕ ವಲಯಗಳ ಮನಸ್ಥಿತಿಯಲ್ಲಿನ ಪರಿವರ್ತನೆಯಿಂದಾಗಿ ಸ್ಪರ್ಧೆಯೂ ತೀವ್ರವಾಗಿದೆ. ಜೊತೆಗೆ ಸ್ಪರ್ಧಾತ್ಮಕ ಮತ್ತು ಕೈಗೆಟುಕುವ ಪ್ರಯಾಣ ಶುಲ್ಕದಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ. ಸರ್ಕಾರದ ದೃಢ ಹಾಗೂ ಪಾರದರ್ಶಕ ಕ್ರಮಗಳಿಂದ ಇದೆಲ್ಲಾ ಸಾಧ್ಯವಾಗಿದೆ ಮತ್ತು ಸಾರ್ವಜನಿಕ ಮತ್ತು ಖಾಸಗೀ ವಲಯಗಳ ನಡುವಿನ ಆರೋಗ್ಯಕರ ಸ್ಪರ್ಧೆಗೆ ಇದು ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ.

ಕಳೆದ ವರ್ಷದ ಭಾರತ- ಅಮೆರಿಕ ವಿಮಾನಯಾನ ಶೃಂಗಸಭೆಯಲ್ಲಿ ನಿಮ್ಮ ಭಾಷಣ ಅಪೂರ್ವವಾಗಿತ್ತು. ಅಮೆರಿಕ ವಿಮಾನಯಾನ ವಲಯಕ್ಕೆ ಸಂಬಂಧಿಸಿದ ಪ್ರತಿಯೊಬ್ಬರೂ ಆ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ಜೊತೆಗಿನ ವೈಮಾನಿಕ ಒಪ್ಪಂದದಿಂದಾಗಿ ಭಾರತಕ್ಕೆ ಯಾವ ರೀತಿಯ ಲಾಭವಿದೆ? ತಾಂತ್ರಿಕವಾಗಿ ಅಮೆರಿಕದ ವೈಮಾನಿಕ ಉದ್ಯಮ ಭಾರತಕ್ಕಿಂತ ಎಷ್ಟೋ ಮುಂದಿದೆ. ಎರಡು ದೇಶಗಳು ಸಮಾನ ಆಸಕ್ತಿ ಹೊಂದಿರುವ ಕ್ಷೇತ್ರ ಯಾವುದು?

'ಭಾರತೀಯ ನಾಗರಿಕ ವೈಮಾನಿಕ ಉದ್ಯಮ'ದಲ್ಲಿ ಅಮೆರಿಕದ ಸಹಕಾರವನ್ನು ವೃದ್ಧಿಸುವುದು ಭಾರತ- ಅಮೆರಿಕ ವೈಮಾನಿಕ ಸಹಕಾರ ಕಾರ್ಯಕ್ರಮದ ಮುಖ್ಯ ಉದ್ದೇಶ. ಇದರ ಜೊತೆಗೆ ವೈಮಾನಿಕ ತರಬೇತಿ ಮತ್ತು ತಾಂತ್ರಿಕ ಸಹಾಯಕ ಸಭೆ ಮತ್ತು ಅಮೆರಿಕ ವೈಮಾನಿಕ ಸಂವಹನ ಸಭೆಗಳನ್ನು ಆಯೋಜಿಸುವುದು. ಅಮೆರಿಕದ ಸರ್ಕಾರಿ ಸಂಸ್ಥೆಗಳಾದ ಸಂಯುಕ್ತ ವೈಮಾನಿಕ ಆಡಳಿತ (ಎಫ್‌ಎಎ), ಅಮೆರಿಕ ವ್ಯಾಪಾರ ಮತ್ತು ಅಭಿವೃದ್ಧಿ ಸಂಸ್ಥೆ (ಯುಎಸ್‌ಟಿಡಿಎ), ಅಮೆರಿಕ ವಾಣಿಜ್ಯ ವಿಭಾಗಗಳೊಂದಿಗೆ ಸಹಕಾರ ವೃದ್ಧಿಸುವ ಉದ್ದೇಶವೂ ಇದೆ. ಈ ಕಾರ್ಯಕ್ರಮಕ್ಕೆ ಅಮೆರಿಕ ವ್ಯಾಪಾರ ಮತ್ತು ಅಭಿವೃದ್ಧಿ ಸಂಸ್ಥೆ (ಯುಎಸ್‌ಟಿಡಿಎ) ಹಣಕಾಸು ನೆರವು ಒದಗಿಸುವುದರ ಜೊತೆಗೆ ರಕ್ಷಣಾ ಸಹಾಯ, ಕಾರ್ಯ ಸಾಮರ್ಥ್ಯ, ವೈಮಾನಿಕ ಕ್ಷೇತ್ರದ ತಾಂತ್ರಿಕ ಅಭಿವೃದ್ಧಿಗೂ ಸ್ಪಂದಿಸಲಿದೆ. ತಾಂತ್ರಿಕ ವಿಭಾಗ ಮತ್ತು ನಿರ್ವಹಣೆಯಲ್ಲಿ ನಾಗರಿಕ ವಿಮಾನಯಾನದ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಸಂಯುಕ್ತ ವೈಮಾನಿಕ ಪ್ರಾಧಿಕಾರದಿಂದ ನೆರವು ಪಡೆಯಲು ಕೇಂದ್ರ ಸರ್ಕಾರ ಅಮೆರಿಕದ ಜೊತೆಗೆ ಒಪ್ಪಂದಕ್ಕೂ ಸಹಿ ಹಾಕಿದೆ.

ಭಾರತೀಯ ವೈಮಾನಿಕ ಉದ್ಯಮದಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆ ಹೆಚ್ಚಾಗಲು 'ವಿದೇಶಿ ನೇರ ಬಂಡವಾಳ' ಹೂಡುವ ಕುರಿತು ಮಾತುಕತೆ ನಡೆಸಿದ್ದೀರಿ. ವಾಸ್ತವದಲ್ಲಿ ಇದು ನಿಜವಾಗಲಿದೆಯೇ?

ಕೇಂದ್ರ ಸರ್ಕಾರ 2008ರ ಜನವರಿ 30ರಂದು ನಾಗರಿಕ ವಿಮಾನಯಾನ ವಿಭಾಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯನ್ನು ಸರಳಗೊಳಿಸಿದೆ. ಈ ಬೆಳವಣಿಗೆಯಿಂದಾಗಿ ಅಮೆರಿಕದ ಕಂಪನಿಗಳು ಬಂಡವಾಳ ಹೂಡುವುದು ಮಾತ್ರವಲ್ಲ ಇತರ ಅಂತರ್ ರಾಷ್ಟ್ರೀಯ ಕಂಪನಿಗಳು ಭಾರತೀಯ ವೈಮಾನಿಕ ಉದ್ಯಮದತ್ತ ಆಕರ್ಷಿತರಾದಲ್ಲಿ ಆಶ್ಚರ್ಯವಿಲ್ಲ.

ಖಾಸಗಿ ಕಂಪನಿಗಳ ಆಗಮನದಿಂದಾಗಿ ಭಾರತೀಯ ವಾಯುಯಾನ ಸಂಸ್ಥೆಗಳ ಮಾರುಕಟ್ಟೆ ಷೇರುಗಳು ಇಳಿಮುಖ ಕಂಡಿವೆ. ನಿಮ್ಮ ಆಡಳಿತ ಅವಧಿಯಲ್ಲೇ ಇಳಿಮುಖ ಅಧಿಕವಾಗಿದ್ದನ್ನು ಗಮನಿಸಬಹುದು. ಖಾಸಗಿ ಕಂಪನಿಗಳು ವೃದ್ಧಿಸುತ್ತಿರುವುದರಿಂದ ರಾಷ್ಟ್ರೀಯ ವಾಯುಯಾನ ಸಂಸ್ಥೆಗಳು ತಮ್ಮ ಮಹತ್ವ ಕಳೆದುಕೊಳ್ಳಲಿವೆಯೆ?

ರಾಷ್ಟ್ರೀಯ ವಾಯುಯಾನ ಸಂಸ್ಥೆಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಅಭಿವೃದ್ಧಿ ಸಾಧ್ಯವಾಗಿದ್ದರೂ, ಖಾಸಗಿ ವಾಯುಯಾನ ಸಂಸ್ಥೆಗಳ ಆಗಮನ, ಷೇರು ಹೂಡಿಕೆಯಲ್ಲಿನ ಸಾಮರ್ಥ್ಯ ಕುಸಿತ, ಅಗ್ಗದ ಪ್ರಯಾಣ ದರ ಹಾಗೂ ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಮಾರುಕಟ್ಟೆ ಷೇರುಗಳ ಮೇಲೆ ನೇರ ಪರಿಣಾಮ ಬೀರಿದೆ. ಸಾರ್ವಜನಿಕ ವಾಯುಯಾನ ಸಂಸ್ಥೆ ಹಲವು ಪ್ರಭಾವಶಾಲಿ ಕ್ರಮಗಳನ್ನು ಕೈಗೊಂಡಿದೆ. ನೂತನ ತಂತ್ರಜ್ಞಾನದ ವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಹಾಗೇ ಇಂಡಿಯನ್ ಏರ್‌ಲೈನ್ಸ್ ಹಾಗೂ ಏರ್ ಇಂಡಿಯಾ ಸಂಸ್ಥೆಗಳ ವಿಲೀನ, ಆಕ್ರಮಣಕಾರಿ ಮಾರುಕಟ್ಟೆ ವ್ಯವಹಾರ ಹಾಗೂ ವ್ಯಾಪಾರದಿಂದಾಗಿ ಸಂಸ್ಥೆ ತನ್ನ ಮಾರುಕಟ್ಟೆ ಷೇರುಗಳಲ್ಲಿ ಸುಧಾರಣೆ ಕಂಡಿದೆ.

ಇಂಡಿಯನ್ ಏರ್‌ಲೈನ್ಸ್ ಹಾಗೂ ಏರ್ ಇಂಡಿಯಾ ಸಂಸ್ಥೆ ವಿಲೀನವಾಗಿರುವುದು ಲಾಭ ಹಾಗೂ ಮಾರ್ಗ ಹಂಚಿಕೆ ಕಾರ್ಯಕ್ಕೆ ಯಾವ ರೀತಿಯಲ್ಲಿ ಸಹಕಾರಿ?

ಪ್ರಾದೇಶಿಕ ವಿಮಾನಯಾನದಲ್ಲಿ ಈ ಎರಡೂ ಸಂಸ್ಥೆಗಳು ಪರಸ್ಪರ ಸಂಪರ್ಕ ನೀಡುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತಿವೆ. ಸಮೀಪ ಮತ್ತು ಮಧ್ಯಮ- ದಿಕ್ಕು ಬದಲಾಯಿಸಿ ನಡೆಸುವ ಸಮೀಪ ಮತ್ತು ದೀರ್ಘ ಪ್ರಯಾಣ... ಹೀಗೆ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಯಶಸ್ಸು ಸಾಧಿಸಿದ್ದೇವೆ. ಈ ಹೊಸ ವಾಯುಯಾನ ಸಂಸ್ಥೆ ಏಷ್ಯಾದಲ್ಲೇ ಬೃಹತ್ ಸಂಸ್ಥೆ ಎಂಬ ಮನ್ನಣೆ ಪಡೆದಿದೆ. ಸುಮಾರು 120 ವಿಮಾನಗಳು ಈ ಸಂಸ್ಥೆಯಲ್ಲಿವೆ. ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯ ಪಡೆದಿದೆ. ಈ ವಿಲೀನದಿಂದ ಮಾರಾಟ ಮತ್ತು ಹಂಚಿಕೆಯಲ್ಲೂ ಸಂಸ್ಥೆ ಶ್ರೀಮಂತವಾಗಿದೆ.

ಉತ್ತಮ ನಿಯಂತ್ರಣಾ ವ್ಯವಸ್ಥೆ, ಸಿಬ್ಬಂದಿ ನೇಮಕ, ಕಾರ್ಯ ವಿಂಗಡಣೆ, ಕಾರ್ಮಿಕ ಸಂಘಟನೆ ಮತ್ತು ವರ್ಗಶ್ರೇಣಿಗಳ ಕುರಿತಾಗಿ ನೀವು ಏನು ಹೇಳುವಿರಿ?

ಕಾರ್ಪೊರೇಟ್ ವ್ಯವಹಾರ ಸಚಿವಾಲಯ ಒಪ್ಪಿಗೆ ಸೂಚಿಸಿದ ಸಮ್ಮಿಶ್ರ ಯೋಜನೆ ಮೂಲಕ ನಾವು ಸಿಬ್ಬಂದಿಗಳ ಹಿತಾಸಕ್ತಿಯನ್ನು ಅನುಸರಿಸಿ ಕ್ರಮ ಕೈಗೊಂಡಿದ್ದೇವೆ. ಇಂಡಿಯನ್ ಏರ್‌ಲೈನ್ಸ್ ಹಾಗೂ ಏರ್ ಇಂಡಿಯಾ ಸಂಸ್ಥೆಗಳ ಹಿಂದಿನ ಉದ್ಯೋಗಿಗಳೆಲ್ಲರೂ ಈಗ ರಾಷ್ಟ್ರೀಯ ವಿಮಾನಯಾನ ಕಂಪನಿಯಲ್ಲಿ (ಎನ್‌ಎಸಿಐಎಲ್) ಉದ್ಯೋಗಿಗಳಾಗಿದ್ದಾರೆ. ಯಾವ ಪಕ್ಷಪಾತ ಅಥವಾ ಸಮಸ್ಯೆಗಳಿಗೆ ಅವಕಾಶವಿಲ್ಲದೆ ವಿಲೀನ ಪ್ರಕ್ರಿಯೆ ನಡೆದಿದೆ. ಉದ್ಯೋಗಿಗಳ ಸಮಸ್ಯೆಗಳನ್ನು ಆಲಿಸಲು ಸಮಸ್ಯೆ ನಿವಾರಣಾ ಸಮಿತಿಯನ್ನೂ ರಚಿಸಿದ್ದೇವೆ.

ವಿಮಾನ ಹಾರಾಟವಿಲ್ಲದ ಪ್ರದೇಶದಲ್ಲಿಯೂ ಏರ್ ಇಂಡಿಯಾದ ಕಚೇರಿ ಇದೆ. ಈ ಇತರ ಕಚೇರಿಗಳನ್ನು ನೀವು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತೀರಿ?

ಏರ್ ಇಂಡಿಯಾ ತನ್ನ ವಿಮಾನಗಳ ದಿಕ್ಕು ಮತ್ತು ಹಾದಿ ಬದಲಾವಣೆ ಕುರಿತು ಹೊಸ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಹೆಚ್ಚು ವಿಮಾನಗಳನ್ನು ಖರೀದಿಸುವ ಮೂಲಕ ನಮ್ಮ ಸಂಪರ್ಕವನ್ನು ವೃದ್ಧಿಸಲು ಮುಂದಾಗಲಿದ್ದೇವೆ. ಸಾಕಷ್ಟು ವಿಮಾನಗಳ ಕೊರತೆ ಇದ್ದುದರಿಂದ ನಮಗೆ ಇದುವರೆಗೆ ಆ ಪ್ರದೇಶಗಳಲ್ಲಿ ವಿಮಾನ ಹಾರಾಟ ನಡೆಸಲಾಗಿಲ್ಲ.

ವಿಮಾನ ಹಾರಾಟವನ್ನು ಇನ್ನೂ ಅಧಿಕಗೊಳಿಸುವ ನಿಟ್ಟಿನಲ್ಲಿ ಯೋಜನೆಗಳೇನಾದರೂ ಇವೆಯೇ? ಈ ಬಗ್ಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವ ನಿರ್ಧಾರವೇನಾದರೂ...?

ಅಂತರ್ ರಾಷ್ಟ್ರೀಯ ಕಾರ್ಯಾಚರಣೆಗಳ ಬಗೆಗಿನ ನೀತಿನಿಯಮಗಳು ದ್ವಿಪಕ್ಷೀಯ ವಾಯುಯಾನ ಸೇವೆಯಲ್ಲಿ ನಿರ್ಧರಿತವಾಗಿರುತ್ತವೆ. ಕಾಲಕ್ಕೆ ತಕ್ಕಂತೆ ವಾಯುಯಾನ ಬೇಡಿಕೆ, ಹಾರಾಟದಲ್ಲಿನ ಲಾಭಾಂಶಗಳು, ದೇಶದ ಆರ್ಥಿಕ ಪರಿಸ್ಥಿತಿ, ರಾಜತಾಂತ್ರಿಕ ಮತ್ತು ದೇಶದ ರಾಜಕೀಯ ಸ್ಥಿತಿಗತಿಗಳನ್ನು ಗಮನದಲ್ಲಿರಿಸಿಕೊಂಡು ಬದಲಾವಣೆ ತರಲಾಗುತ್ತದೆ. ವಾಯು ಮಾರ್ಗ ಆಯ್ಕೆ ಮುಂತಾದವುಗಳನ್ನೊಳಗೊಂಡ ವಾಸ್ತವಿಕ ಕಾರ್ಯಾಚರಣೆ ವಿಮಾನಗಳ ವಾಣಿಜ್ಯೋದ್ದೇಶಗಳನ್ನು ಅವಲಂಬಿಸಿರುತ್ತದೆ. ಪ್ರಸ್ತುತ ಭಾರತ 100ಕ್ಕೂ ಅಧಿಕ ರಾಷ್ಟ್ರಗಳ ಜೊತೆ ವಾಯುಯಾನ ಒಪ್ಪಂದಕ್ಕೆ ಮಾಡಿಕೊಂಡಿದೆ.

ಗುಣಮಟ್ಟದಲ್ಲಿ ಯಾವುದೇ ಕಡಿತಗಳಿಲ್ಲದೆ ಸಾಮಾಜಿಕ ಬದ್ಧತೆ ಹಾಗೂ ಕಾಲಕಾಲಕ್ಕೆ ಸಿಬ್ಬಂದಿ ವರ್ಗವನ್ನು ಅನುಯೋಜ್ಯಗೊಳಿಸಿ ಉತ್ತಮ ಸೇವೆಯನ್ನು ಒದಗಿಸುವಿಕೆ ಮುಂತಾದವುಗಳು ಹಾಗೂ ಸರ್ಕಾರದ ಬದ್ಧತೆಗಳನ್ನು ಹೇಗೆ ಸರಿದೂಗಿಸುವಿರಿ?

ವೈಮಾನಿಕ ವಲಯದಲ್ಲಿ ಗಣನೀಯ ಅಭಿವೃದ್ಧಿಗಳಾಗುತ್ತಿರುವ ಕಾರಣ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆಗೊಳಿಸುವ ಅಗತ್ಯವಿಲ್ಲ. ವಿಮಾನ ನಿಲ್ದಾಣ ವಲಯದಲ್ಲಿ 'ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ' 35 ನಗರೇತರ ವಿಮಾನ ನಿಲ್ದಾಣಗಳನ್ನು ವಿಶ್ವ ದರ್ಜೆಗೆ ಏರಿಸಲಿದೆ. ಇದರ ಹೊರತಾಗಿ ಬಳಸದ ವಿಮಾನ ನಿಲ್ದಾಣಗಳು ಮತ್ತು ವಿಮಾನ ಹಾದಿಗಳನ್ನೂ ಅಭಿವೃದ್ಧಿಗೊಳಿಸುವ ಯೋಜನೆಗಳಿವೆ. ಆದ್ದರಿಂದ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುವ ಪ್ರಶ್ನೆಯೇ ಎದುರಾಗುವುದಿಲ್ಲ. ಏರ್ ಇಂಡಿಯಾ ತನ್ನ ಕಾರ್ಯ ವ್ಯಾಪ್ತಿ ವಿಸ್ತರಿಸಲು ಈಗಾಗಲೇ ಬೇಡಿಕೆ ಸಲ್ಲಿಸಿರುವ ವಿಮಾನಗಳು ಬಂದಲ್ಲಿ, ಸಿಬ್ಬಂದಿಗಳ ಬಲವರ್ಧನೆ ಮಾಡಲೇಬೇಕಾಗುತ್ತದೆ.

ಬಂಡವಾಳವನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ (ಬಂಡವಾಳ ಹರಣ) ಬಗ್ಗೆ?

ಏರ್ ಇಂಡಿಯಾ ವರ್ಷದ ಕೊನೆಯಲ್ಲಿ ಆರಂಭಿಕ ಬಂಡವಾಳ ಹೂಡಿಕೆಯನ್ನು (ಐಪಿಒ) ಹೊರ ತರುವ ನಿರೀಕ್ಷೆ ಇದೆ. ಈ ವಿಚಾರ ಸರ್ಕಾರದ ಪರಿಶೀಲನೆಯಲ್ಲಿದೆ. ವೈಮಾನಿಕ ಉದ್ಯಮದ ಕೆಲವು ವಿಚಾರಗಳು ಇನ್ನೂ ಬಗೆಹರಿದಿಲ್ಲ. ಉದಾಹರಣೆಗೆ ಎಟಿಫ್ (ವೈಮಾನಿಕ ಇಂಧನ) ವೆಚ್ಚ. ಈಗಿರುವ ಎಟಿಎಫ್ ಬೆಲೆ ಗಮನಿಸಿದಲ್ಲಿ ಕಾರ್ಯ ಸಾಮರ್ಥ್ಯ ಮತ್ತು ಆದಾಯ ವೃದ್ಧಿಸುವುದು ಕಷ್ಟ ಸಾಧ್ಯ ಎನ್ನುವ ಮಾತಿದೆ...ದೇಶೀಯ ವಿಮಾನಯಾನ ಸಂಸ್ಥೆಗಳು ಒಟ್ಟು ವೆಚ್ಚದಲ್ಲಿ ಶೇ.40ರಷ್ಟು ಹಣವನ್ನು ಕೇವಲ ಇಂಧನಕ್ಕಾಗಿಯೇ ಮೀಸಲಿಡಬೇಕಾಗುತ್ತದೆ. ಅಂತರ್ ರಾಷ್ಟ್ರೀಯ ಹಾರಾಟಕ್ಕೆ ಹೋಲಿಸಿದರೆ ನಮ್ಮ ಎಟಿಎಫ್ ವೆಚ್ಚ ಶೇ.60- 70ರಷ್ಟು ಅಧಿಕ. ಈ ಅಧಿಕ ವೆಚ್ಚದಿಂದಾಗಿ ಭಾರತೀಯ ವೈಮಾನಿಕ ಸಂಸ್ಥೆಗಳಿಗೆ ಹೆಚ್ಚಿನ ನಷ್ಟವುಂಟಾಗುತ್ತಿದೆ. ಹಾಗಾಗಿ ಮುಂದಿನ ಬಜೆಟ್‌ನಲ್ಲಾದರೂ ಕೊಂಚ ರಿಯಾಯಿತಿ ತೋರಬೇಕೆಂದು ವಿತ್ತ ಸಚಿವರಿಗೆ ಮನವಿ ಮಾಡಿದ್ದೇವೆ. ಸುಂಕ- ಅಧಿಕ ತೆರಿಗೆಗಳನ್ನು ಕಡಿತಗೊಳಿಸಿ ಎಟಿಎಫ್‌ಗೆ 'ಘೋಷಿತ ಸರಕ'ನ್ನಾಗಿಸಬೇಕು ಎಂದಿದ್ದೇವೆ.

ಈಗಲೂ ಓಬೀರಾಯನ ಕಾಲದ ನೀತಿಗಳು ನಮ್ಮ ವೈಮಾನಿಕ ಉದ್ಯಮದಲ್ಲಿ ಹಾಗೇ ಬೇರೂರಿವೆ ಎಂದು ಕೆಲವು ಖಾಸಗೀ ವೈಮಾನಿಕ ಸಂಸ್ಥೆಗಳು ದೂರುತ್ತಿವೆ. ಇದು ಅಭಿವೃದ್ಧಿಗೆ ದೊಡ್ಡ ಹೊಡೆತ ಎಂಬುದು ಅವರ ಅಭಿಪ್ರಾಯ. ಈ ನಿಟ್ಟಿನಲ್ಲಿ ಮಹತ್ತರ ಅಭಿವೃದ್ಧಿ ಅಥವಾ ತಿದ್ದುಪಡಿ ತರಬೇಕೆಂದು ನೀವು ಯೋಚಿಸಿದ್ದೀರಾ?

ಕಳೆದ ಮೂರೂವರೆ ವರ್ಷಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ವೈಮಾನಿಕ ಉದ್ಯಮ ಕ್ರಮಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಹಾಗೇ ಹಲವಾರು ತಿದ್ದುಪಡಿಗಳನ್ನೂ ತರಲಾಗಿದೆ. ವಿಮಾನ ನಿಲ್ದಾಣ ಮೂಲಸೌಕರ್ಯ ನೀತಿಯಲ್ಲೂ ಬದಲಾವಣೆ ತರಲಾಗಿದ್ದು, ಹೊಸ ವಿಮಾನ ನಿಲ್ದಾಣ ನೀತಿಯನ್ನು ಸದ್ಯದಲ್ಲೇ ಜಾರಿಗೊಳಿಸಲಿದ್ದೇವೆ. ವೈಮಾನಿಕ ಉದ್ಯಮದ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯಲ್ಲೂ ಬದಲಾವಣೆಯಾಗಿದೆ. ಎಂಆರ್‌ಒ, ಜೆಟ್ ಇಂಜಿನ್ ಷಾಪ್, ಕಾರ್ಗೋಸ್, ಗ್ರೌಂಡ್ ಹಾಂಡ್ಲಿಂಗ್ ಮುಂತಾದ ಕ್ಷೇತ್ರಗಳಲ್ಲಿನ ಹೂಡಿಕೆ ಗಣನೀಯ ಪ್ರಮಾಣದ ಏರಿಕೆ ಕಾಣಲಿದೆ. ವಾಯು ಸಂಚಾರ ದಟ್ಟಣೆಯನ್ನು ಸಮರ್ಥವಾಗಿ ನಿರ್ವಹಿಸಲು ಉಪಗ್ರಹಾಧಾರಿತ ದಿಕ್ಸೂಚಿ ವ್ಯವಸ್ಥೆ ಜಾರಿಗೊಳಿಸುವ ಮೊದಲ ದೇಶ ಎಂಬ ಕೀರ್ತಿ ಭಾರತದ ಪಾಲಾಗಲಿದೆ. ಈ ವಲಯವನ್ನು ಇನ್ನಷ್ಟು ಬಲಪಡಿಸಲು ವಿಲೀನ ಮತ್ತು ಸ್ವಾಧೀನ ನೀತಿ ಅಳವಡಿಸಲಾಗಿದೆ. ನೂತನ ನಾಗರಿಕ ವಿಮಾನಯಾನ ನೀತಿ ಸರ್ಕಾರದ ಪರಿಶೀಲನೆಯಲ್ಲಿದೆ. ಒಟ್ಟಾರೆ ಮಹತ್ತರ ಬದಲಾವಣೆಗಳಾಗಲಿವೆ.

ಕೊನೆಯ ಪ್ರಶ್ನೆ, ಮುಂದಿನ ದಿನಗಳಲ್ಲಿ ಅಂದರೆ ಈ ದಶಕ ಕೊನೆಗೊಳ್ಳುವ ಮುನ್ನ ವೈಮಾನಿಕ ವಿಭಾಗ ಹೇಗಿರಬಹುದು?

ವೈಮಾನಿಕ ವಲಯದ ಸ್ವಾಧೀನ- ವಿಲೀನ ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲು ಸರ್ಕಾರ ಸ್ವಾಧೀನ- ವಿಲೀನ ನೀತಿ ರೂಪಿಸಿದೆ. ಹೆಲಿಕಾಪ್ಟರ್ ಕಾರ್ಯ ನಿರ್ವಹಣೆ ಹಾಗೂ ವೈಮಾನಿಕ ಸರಕು ವ್ಯವಹಾರಗಳ ಪ್ರಮಾಣ ಹೆಚ್ಚಿಸಲು ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಭವಿಷ್ಯದಲ್ಲಿ ಭಾರತದ ವೈಮಾನಿಕ ಉದ್ಯಮ ಆರ್ಥಿಕತೆಯನ್ನು ಎತ್ತಿಹಿಡಿಯುವ ಮಹತ್ವದ ಸಾಧನವಾಗಲಿದೆ ಎಂದರೆ ತಪ್ಪಾಗಲಾರದು. 115- 120 ಶತಕೋಟಿ ಡಾಲರ್‌ಗಳಷ್ಟು ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಬಂಡವಾಳ ಹೂಡಿಕೆಗೆ ಮಹತ್ತರ ಕ್ಷೇತ್ರ ಎಂದು ಖ್ಯಾತಿ ಹೊಂದಿರುವುದು ಮಾತ್ರವಲ್ಲದೆ, ಮುಂಬರುವ 10 ವರ್ಷಗಳಲ್ಲಿ ವಾಯುಸಂಚಾರ ದಟ್ಟಣೆ ಶೇ. 25ರಷ್ಟು ಏರಲಿರುವುದರಿಂದ ಅಧಿಕ ಉದ್ಯೋಗಾವಕಾಶ ಸೃಷ್ಟಿಸಲಿರುವ ಅತ್ಯುತ್ತಮ ಕ್ಷೇತ್ರವೂ ಇದಾಗಲಿದೆ. 2008 ಅಂತ್ಯಕ್ಕೆ ದೇಶದಲ್ಲಿ 100 ಹೆಚ್ಚುವರಿ ವಿಮಾನ ನಿಲ್ದಾಣಗಳು ನಿರ್ಮಾಣವಾಗಬೇಕು. ಈ ಸಂಖ್ಯೆ ಏರುತ್ತಲೇ ಇರುತ್ತದೆ. ಏಕೆಂದರೆ ದೇಶದ ಉದ್ದಗಲಕ್ಕೆ ಸುಮಾರು 400 ವಿಮಾನ ನಿಲ್ದಾಣ ನಿರ್ಮಿಸುವ ಅಗತ್ಯವಿದ

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .