ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಇಷ್ಟೇ - ಇಷ್ಟು
ಹರಿಪ್ರಸಾದ್ ಚೌರಾಸಿಯಾ :ಖ್ಯಾತ ಬಾನ್ಸುರಿ ವಾದಕ
 

 

ಭಾರತದಲ್ಲಿ ಶಾಸ್ತ್ರೀಯ ಸಂಗೀತದ ಭವಿಷ್ಯ ಏನು?

ಉಜ್ವಲ ಭವಿಷ್ಯವೇ ಇದೆ. ತುಂಬಾ ಹಿಂದಿನಿಂದಲೂ ಸಂಗೀತ ಭಾರತದ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ಬೆಳ್ಳಂಬೆಳಗ್ಗೆ 4 ಗಂಟೆಯ ಹೊತ್ತಿಗೇ ಶಾಸ್ತ್ರೀಯ ಸಂಗೀತ ಆಲಿಸುವ ಲೆಕ್ಕವಿಲ್ಲದಷ್ಟು ನಾದಪ್ರಿಯರನ್ನು ನಾನು ಕಂಡಿದ್ದೇನೆ.

ವಿದೇಶ ಮತ್ತು ಸ್ವದೇಶದಲ್ಲಿ ನಿಮ್ಮ ಸಂಗೀತಕ್ಕೆ ಸಿಕ್ಕ ಪ್ರತಿಕ್ರಿಯೆ?

ಎಲ್ಲೆಡೆ ಉತ್ತಮವಾದ ಪ್ರತಿಕ್ರಿಯೆಯೇ ಸಿಕ್ಕಿದೆ. ಆದರೆ ಎಷ್ಟಾದರೂ ನಮ್ಮ ದೇಶ ನಮ್ಮ ದೇಶವೇ. ಭಾರತೀಯ ಅಭಿಮಾನಿಗಳ ಪ್ರತಿಕ್ರಿಯೆ ನನಗೆ ನಿರಂತರ ಸ್ಫೂರ್ತಿ ನೀಡುತ್ತಿದೆ.

ಶಾಸ್ತ್ರೀಯ ಸಂಗೀತಾಭ್ಯಾಸಿಗಳಿಗೆ ನಿಮ್ಮ ಕಿವಿಮಾತು ಏನು?

ಸಂಗೀತ ಮತ್ತು ದೇವರು ಬೇರೆ ಅಲ್ಲ. ಸಂಗೀತವನ್ನು ಒಬ್ಬ ಪರಿಪೂರ್ಣ ಗುರುವಿನ ಹತ್ತಿರ ಕಲಿಯಬೇಕು. ನಮ್ಮ ಸಾಂಪ್ರದಾಯಿಕ ಶಾಸ್ತ್ರೀಯ ಸಂಗೀತವನ್ನು ಮುಂದುವರಿಸಬೇಕು.

ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರೋತ್ಸಾಹಿಸಲು ಯಾವುದಾದರೂ ಕಾರ್ಯಕ್ರಮ ಹಾಕಿಕೊಂಡಿದ್ದೀರಾ?

ಸದ್ಯಕ್ಕೆ ನಾನು ಬೃಂದಾವನ್ ಗುರುಕುಲದಲ್ಲಿ 50 ಮಂದಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಗೀತ ಶಿಕ್ಷಣ ನೀಡುತ್ತಿದ್ದೇನೆ. ಆದರೆ ನಮ್ಮ ಈ ಪಾರಂಪರಿಕ ವಿದ್ಯೆಯನ್ನು ರಕ್ಷಿಸಲು ಸರ್ಕಾರ ಅಗತ್ಯ ಯೋಜನೆ ಕೈಗೊಂಡಿಲ್ಲ.

ಟಿಎಸ್‌ಐ

ಮಾಯಾಂಕ್ ವ್ಯಾಸ್

 

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .