ನಿಮ್ಮ ಸಂಬಂಧಗಳಲ್ಲಿ ಏರಿಳಿತಗಳಿದ್ದರೆ ಓಘವನ್ನು ಕೊಂಚ ಬದಲಿಸಿ, ಪ್ರೇಮದ ಹಾದಿ ಸುಗಮವಾಗಲಿದೆ! ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ತಯಾರಾಗಿ. ಕಾಲ ಮೀರುವ ಮುನ್ನ ಸಂಗಾತಿಯನ್ನು ಅರಿಯಲು ಪ್ರಯತ್ನಿಸಿ. ಏಕಾಂಗಿಗಳು ಪ್ರೇಮ ಪಾಶಕ್ಕೆ ಸಿಲುಕಲಿದ್ದೀರಿ, ಹಸೆ ಮಣೆ ಏರಿದರೂ ಆಶ್ಚರ್ಯವಿಲ್ಲ!
ಈ ವರ್ಷ ಪ್ರೇಮಕ್ಕೆ ಪರ್ವ ಕಾಲ. ಸಂಗಾತಿ ಆಯ್ಕೆ ನಿಮಗೆ ಖುಷಿ ನೀಡಲಿದೆ. ಒಂದು ಆಕಸ್ಮಿಕ ಭೇಟಿ ಪ್ರೇಮಕ್ಕೆ ನಾಂದಿ ಹಾಡಲಿದೆ! ಈಗಾಗಲೇ ಪ್ರೇಮದಲ್ಲಿ ಬಂಧಿಯಾಗಿದ್ದರೆ ಈ ವರ್ಷ ನಿಮ್ಮ ಸಂಬಂಧ ಇನ್ನಷ್ಟು ಗಾಢವಾಗಲಿದೆ. ವಿವಾಹ ಆದರೂ ಆಶ್ಚರ್ಯಪಡಬೇಕಾಗಿಲ್ಲ. ವಿವಾಹಿತರು ಪುಟ್ಟ ಅತಿಥಿಯ ಆಗಮನವನ್ನು ನಿರೀಕ್ಷಿಸಬಹುದು!
ಮೇಷ
(ಮಾ.21-ಏ.20)
ಪ್ರೇಮಕ್ಕೆ ನಿಮ್ಮದೇ ಆದ ವಿಭಿನ್ನ ಅರ್ಥ ನೀಡುವಿರಿ. ಮುಂದಿನ ವರ್ಷದೊಳಗೆ ಕುಟುಂಬಕ್ಕೆ ಹೊಸ ವ್ಯಕ್ತಿಯ ಆಗಮನದ ಸೂಚನೆಗಳಿವೆ. ಏಕಾಂಗಿಗಳಿಗೆ 'ವಿಶಿಷ್ಟ ವ್ಯಕ್ತಿ'ಯೊಬ್ಬರ ಭೇಟಿ ಆಗಾಗ ಕಾಡಲಿದ್ದು, ಪ್ರೇಮ ತನ್ನ ಜಾದೂ ತೋರಲಿದೆ. ನಿಧಾನವೇ ಪ್ರಧಾನ ಎಂಬುದನ್ನು ಮರೆಯಬೇಡಿ. ನಿರೀಕ್ಷೆಗಳು ವಾಸ್ತವವಾಗಿದ್ದಲ್ಲಿ ಭಯಪಡಬೇಕಾಗಿಲ್ಲ.
ಸಿಂಹ
(ಜು.23-ಆ.23)
ಪ್ರೇಮ ಜೀವನಕ್ಕೆ ಪ್ರಾಶಸ್ತ್ಯ. ಬರೀ ನೋವನ್ನೇ ನೀಡಿದ ಬಂಧವನ್ನು ಮುರಿಯುವುದೇ ಲೇಸು ಎಂಬ ಹಂತಕ್ಕೆ ತಲುಪಲಿದ್ದೀರಿ. ಅಡೆತಡೆಗಳಿಲ್ಲದೆ ಸಾಗುತ್ತಿರುವ ಪ್ರೇಮ ಜೀವನ ಸುಮಧುರ ಅನುಭವ ನೀಡಲಿದೆ. ಏಕಾಂಗಿಗಳೇ ಜಾಗ್ರತೆ, ಹಗಲು ಕಂಡ ಬಾವಿಗೆ ಇರುಳು ಬೀಳುವ ಪ್ರಯತ್ನ ಬೇಡ. ಕಾಲವೇ ಎಲ್ಲಕ್ಕೂ ಉತ್ತರ. ನೆನಪಿಡಿ.
ಪ್ರಣಯಕ್ಕೆ ಹೇಳಿ ಮಾಡಿಸಿದಂತಹ ವರ್ಷ. ಒತ್ತಡ ಹಾಗೂ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳೇನೂ ಇಲ್ಲ. ನಿಮ್ಮ ಸಂಬಂಧ ಇನ್ನಷ್ಟು ಬಿಗಿಯಾಗಲಿದೆ. ಏಕಾಂಗಿಗಳು ಪರಿಣಾಮವನ್ನು ಲೆಕ್ಕಿಸದೆ ಪ್ರೇಮದ ಮೋಹಕ್ಕೆ ಮರುಳಾಗುವ ಸಾಧ್ಯತೆಗಳಿವೆ. ಹೆಜ್ಜೆ ಇಡುವ ಮುನ್ನ ಪರಿಣಾಮಗಳ ಬಗ್ಗೆ ಒಂದು ಕ್ಷಣ ಯೋಚಿಸಿದರೆ ಅಪಾಯದಿಂದ ಪಾರಾಗಬಹುದು.