ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಅಂಕದ ಪರದೆ
 
 

ಪ್ಯಾಲೆಸ್ತೀನ್: ಸಮಸ್ಯೆ

ಮಧ್ಯಪ್ರಾಚ್ಯ ಎಂಬ ಗೊಂದಲಪುರ

ಇಸ್ರೇಲ್-ಪ್ಯಾಲೆಸ್ತೀನ್ 'ಪ್ರೇಮ ವಿವಾಹ' ಸಮಸ್ಯೆಗೆ ಪರಿಹಾರವೇ?

ಭಾರತ ಗಡಿಯ ಎರಡೂ ಕಡೆಗೆ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನವೆಂಬ ರಾಷ್ಟ್ರದ ಅಸ್ತಿತ್ವ ಸಮರ್ಥನೀಯವಲ್ಲ ಎಂದು ಕಂಡುಕೊಳ್ಳಲು 25 ವರ್ಷ ಸಾಕಾಯಿತು. ಈ ಸತ್ಯವನ್ನು ಕಂಡುಕೊಂಡಿದ್ದು ಯಾರೋ ಮೂರನೇಯವರಲ್ಲ. ಪೂರ್ವ ಪಾಕಿಸ್ತಾನ ನಿವಾಸಿಗಳೇ. ಆ ಬಳಿಕ ಜೋರ್ಡನ್ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ ಬಿಡಿ! ಆದರೂ ಇಲ್ಲಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಪಂಚದ ಬಹುತೇಕ ರಾಷ್ಟ್ರಗಳು ಪ್ಯಾಲೆಸ್ತೀನ್ ಸಮಸ್ಯೆಗಳಿಗೆ ಇಸ್ರೇಲ್‌ಅನ್ನು ದೂರಬಹುದು. ಆದರೆ ಒಂದೊಮ್ಮೆ ಸ್ವತಂತ್ರ ರಾಷ್ಟ್ರವಾಗುವ ಅವಕಾಶ ಸಿಕ್ಕರೆ ಪ್ಯಾಲೆಸ್ತೀನ್ ಎಷ್ಟರ ಮಟ್ಟಿಗೆ ಯಶಸ್ವಿಯಾಗಬಹುದು ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ! ಪ್ಯಾಲೆಸ್ತೀನ್ ಮೇಲೆ ಅಧಿಕಾರ ಸ್ಥಾಪಿಸಲು ಹಮಾಸ್ ಮತ್ತು ಫತ್ಹಾ ಸಮುದಾಯಗಳ ನಡುವೆ ನಡೆಯುತ್ತಿರುವ ಅಂತರ್ಯುದ್ಧಗಳನ್ನು ಗಮನಿಸಿದರೆ ನಿಮಗೆ ಮೇಲಿನ ಮಿಲಿಯನ್ ಡಾಲರ್ ಪ್ರಶ್ನಗೆ ಸಿದ್ಧ ಉತ್ತರವೂ ದೊರಕುತ್ತದೆ! ಇಸ್ರೇಲ್ ಎಂಬ ರಾಷ್ಟ್ರ ಭೂಮಿ ಮೇಲಿಂದ ಅಳಿಸಿ ಹೋಗಲಿ ಎಂದು ತೀವ್ರವಾಗಿ ಹಂಬಲಿಸುವ ಪ್ಯಾಲೆಸ್ತೀನ್ ಔಷಧಿ, ಇಂಧನ, ನೀರು ಮತ್ತು ಉದ್ಯೋಗ ಮುಂತಾದ ಪ್ರಾಥಮಿಕ ಅವಶ್ಯಕತೆಗಳಿಗೂ ಈ ಯಹೂದಿ ರಾಷ್ಟ್ರವನ್ನೇ ಅವಲಂಬಿಸಿದೆ ಎನ್ನುವುದು ಮಾತ್ರ ವ್ಯಂಗ್ಯ. ಗಾಜಾ ಪ್ರದೇಶದ ಮೇಲಿನ ಕೆಲವು ದಿನಗಳ ತಡೆ ಪ್ಯಾಲೆಸ್ತೀನ್‌ನ್ನು ಎಂಥ ದುರವಸ್ಥೆಗೆ ತಳ್ಳಿತ್ತು ಎಂದರೆ ಅದು ಈಜಿಪ್ಟ್ ಗಡಿ ರೇಖೆಯ ಉಲ್ಲಂಘನೆ ಮಾಡಿತ್ತು. ನಂತರ ಜಾಗತಿಕ ಸಮುದಾಯಗಳ ಒತ್ತಾಯದ ಮೇರೆಗೆ ಇಸ್ರೇಲ್ ಗಾಜಾ ಮೇಲಿನ ತನ್ನ ಹಿಡಿತವನ್ನು ಹಿಂತೆಗೆಯಿತು. ಆದರೆ ಇನ್ನು ಮುಂದೆ ಗಾಜಾ ಪ್ರದೇಶಕ್ಕೆ ಬೇಕಾದ ಎಲ್ಲಾ ಸೌಲಭ್ಯ ಪೂರೈಕೆಯ ಜವಾಬ್ದಾರಿ ತಮ್ಮ ಮೇಲೆ ಬೀಳಬಹುದು ಎಂದು ಈಜಿಪ್ಟ್ ಬೆಚ್ಚಿ ಬಿದ್ದಿತು! ಅರ್ಥಾತ್ ಜವಾಬ್ದಾರಿ ವಹಿಸಿಕೊಳ್ಳಲು ತಯಾರಿಲ್ಲದಿದ್ದರೂ ಇಸ್ರೇಲ್ ಮೇಲೆ ಗೂಬೆ ಕೂರಿಸುವ ಸುವರ್ಣಾವಕಾಶವನ್ನೂ ಯಾರೂ ಬಿಡುವುದಿಲ್ಲ. ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸಿದ ದೌರ್ಜನ್ಯಕ್ಕೆ ಕ್ಷಮೆ ಇಲ್ಲ. ಆದರೆ ಇಸ್ರೇಲ್ ಎಂದೂ ಶತ್ರುವಿನ ಸಂಪೂರ್ಣ ನಾಶ ಎಂಬ ಪೂರ್ವಗ್ರಹ ಪೀಡಿತ ಭಾವನೆಗೆ ಕಟ್ಟುಬಿದ್ದಿರಲಿಲ್ಲ. ಆರ್ಥಿಕವಾಗಿ ಕುಸಿಯುತ್ತಾ, ಸಿಕ್ಕಿದ ಸೌಲಭ್ಯವನ್ನೂ ಯಶಸ್ವಿಯಾಗಿ ಬಳಸಿಕೊಳ್ಳುವಲ್ಲಿ ಪ್ಯಾಲೆಸ್ತೀನ್ ಸೋಲುತ್ತಿದ್ದರೆ ಇಸ್ರೇಲ್ ಆರ್ಥಿಕವಾಗಿ ಸದೃಢವಾಗುವುದರ ಜೊತೆಗೆ ಹೈ-ಟೆಕ್ ಕ್ಷೇತ್ರದಲ್ಲೂ ಅಪಾರ ಪ್ರಗತಿ ಸಾಧಿಸಿತು. ನಾಸ್ಡಾಕ್ (ನ್ಯಾಷನಲ್ ಅಸೋಸಿಯೇಷನ್ ಆಫ್ ಸೆಕ್ಯೂರಿಟೀಸ್ ಡೀಲರ್‍ಸ್ ಅಟೋಮೇಟೆಡ್ ಕೊಟೇಷನ್) ಷೇರು ವಿನಿಮಯ ಕಂಪನಿಯಲ್ಲಿ ೭೦ಕ್ಕೂ ಅಧಿಕ ಇಸ್ರೇಲಿ ಹೈ- ಟೆಕ್ ಕಂಪನಿಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಹನಿ ನೀರಾವರಿ ವ್ಯವಸ್ಥೆಯ ತವರೂರಾದ ಇಸ್ರೇಲ್ ಶಸ್ತ್ರಾಸ್ತ್ರ ಉದ್ಯಮಕ್ಕೆ ಹೊಸ ಭಾಷ್ಯ ಬರೆಯಿತು. ಇಸ್ರೇಲ್ ಬೆನ್ನ ಹಿಂದೆ ಅಮೆರಿಕ ಇದೆ ಎಂದು ಹಲವರು ವಾದಿಸಬಹುದು. ಇಸ್ರೇಲ್‌ನಿಂದ ಯಾವುದೇ ರೀತಿಯ ಲಾಭ ಸಿಗುವುದಿಲ್ಲ ಎಂದರಿತ ಮೇಲೂ ಅಮೆರಿಕ ಬೆಂಬಲ ನೀಡುತ್ತದೆಯೇ? ಲಾಭವಿಲ್ಲದ ಯಾವುದನ್ನೂ ಅಮೆರಿಕ ಸ್ಪರ್ಶಿಸಿಯೂ ನೋಡುವುದಿಲ್ಲ ಎಂಬುದು ಇಡೀ ಜಗತ್ತಿಗೇ ಗೊತ್ತಿರುವ ಸತ್ಯ. ಅದೇ ರೀತಿ ಪಶ್ಚಿಮ ಯುರೋಪ್, ರಷ್ಯಾ ಮತ್ತು ಹಲವಾರು ಮುಸ್ಲಿಂ ರಾಷ್ಟ್ರಗಳ ಬೆಂಬಲ ಪ್ಯಾಲೆಸ್ತೀನ್‌ಗೂ ಇದೆ. ಇತ್ತೀಚಿನ ವರದಿಯೊಂದರ ಪ್ರಕಾರ, ಪ್ಯಾಲೆಸ್ತೀನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರನ್ನು ಹಮಾಸ್‌ಗಳಿಂದ ಕಾಪಾಡುವುದಕ್ಕಾಗಿಯೇ ಅಮೆರಿಕ ೮೦ ದಶಲಕ್ಷ ಡಾಲರ್‌ಗಳನ್ನು ಮುಡಿಪಾಗಿಟ್ಟಿದೆ!

ಐಐಪಿಎಂ
'ಥಿಂಕ್ ಟ್ಯಾಂಕ್'

ವೈದ್ಯಕೀಯ: ಹೊಸ ಹೆಜ್ಜೆ

ಪರ್ಯಾಯ ಚಿಕಿತ್ಸೆಯ ಪವಾಡ!

ಹೋಮಿಯೋಪತಿ ಮೂಲಕ್ಕೇ ಚಿಕಿತ್ಸೆ ನೀಡುತ್ತದೆಯೇ ವಿನಾ ಬರೀ ರೋಗಕ್ಕಲ್ಲ

ಮಾಧ್ಯಮದ ಅಗಾಧ ಪ್ರಸಾರ ವ್ಯಾಪ್ತಿಯನ್ನು ಮೆಚ್ಚಲೇಬೇಕು. ಸಾವಿರಗಟ್ಟಲೆ ಜನರಿಗೆ ಚಿಕಿತ್ಸೆ ನೀಡಿದ ನಂತರ ಪರ್ಯಾಯ ಚಿಕಿತ್ಸಾ ಪದ್ಧತಿ ವ್ಯಾಪಕ ಜನಪ್ರಿಯತೆ ಗಳಿಸುತ್ತಿದೆ. ಯೋಗದ ಪ್ರಾಚೀನತೆಯ ಬಳಿಕ ೩,೫೦೦ ವರ್ಷಗಳಷ್ಟು ಹಿಂದಿನ ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಈಗ ಪ್ರಚಾರಕ್ಕೆ ಬರುತ್ತಿದೆ. ಭಾರತದಲ್ಲಿ ಪ್ರಸ್ತುತ ಇರುವ ಅಧಿಕೃತ ಹೋಮಿಯೋಪತಿ ವೈದ್ಯರ ಸಂಖ್ಯೆ ಸುಮಾರು ೪,೦೦,೦೦೦. ಭಾರತದಾದ್ಯಂತ ಇರುವ 2860 ಆಸ್ಪತ್ರೆಗಳಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ ಆಸ್ಪತ್ರೆಗಳ ಸುಮಾರು ೪೫,೭೨೦ ಹಾಸಿಗೆಗಳು ಹೋಮಿಯೋಪತಿ ಚಿಕಿತ್ಸೆಗೆ ಮೀಸಲಾಗಿದೆ ಎಂದಾಯಿತು. ದೇಶದ ಉದ್ದಗಲಕ್ಕೂ ಸುಮಾರು 22100 ಹೋಮಿಯೋಪತಿ ಔಷಾಧಾಲಯಗಳಿವೆ. ಬೇಡಿಕೆಯ ಹೆಚ್ಚಳ ಮತ್ತು ಚಿಕಿತ್ಸಾ ಪದ್ಧತಿಯ ಮೇಲಿನ ಜನರ ಭರವಸೆ ಹಾಗೇ ಸುಮ್ಮನೆ ಹುಟ್ಟಿಕೊಂಡದ್ದಲ್ಲ. ಈ ಯಶಸ್ಸಿನ ಕೀರ್ತಿ ಯಶಸ್ವೀ ಚಿಕಿತ್ಸಾ ಪದ್ಧತಿಗೇ ಸಲ್ಲಬೇಕು. ಈ ಚಿಕಿತ್ಸಾ ಪದ್ಧತಿಯಲ್ಲಿ ಸಮಸ್ಯೆ ಮೂಲಕ್ಕೇ ಚಿಕಿತ್ಸೆ ನೀಡಲಾಗುತ್ತದೆ ವಿನಾ ಬರೀ ಸಮಸ್ಯೆಗಲ್ಲ. ಜಗತ್ತಿನ 95 ರಾಷ್ಟ್ರಗಳು ಮತ್ತು ಸುಮಾರು 10 ದಶಲಕ್ಷ ಜನರು ಹೋಮಿಯೋಪತಿ ಆನ್‌ಲೈನ್ ಸೌಲಭ್ಯವನ್ನೂ ಪಡೆಯುತ್ತಿದ್ದಾರೆ. 'ಅಸೋಸಿಯೇಟೆಡ್ ಚೇಂಬರ್‍ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀ ಆಫ್ ಇಂಡಿಯಾ' ಪ್ರಕಾರ 2010ರೊಳಗಾಗಿ ಭಾರತೀಯ ಹೋಮಿಯೋಪತಿ ಮಾರುಕಟ್ಟೆ ವಹಿವಾಟು 26 ಶತಕೋಟಿ ರೂಪಾಯಿಗಳನ್ನು ದಾಟಲಿದೆ. ಪ್ರಸ್ತುತ ಮಾರುಕಟ್ಟೆ ದರ 12.5 ಶತಕೋಟಿ ರೂಪಾಯಿಗಳಾಗಿದ್ದರೂ ಮಾರುಕಟ್ಟೆ ದರ ವರ್ಷವೊಂದಕ್ಕೆ ಶೇ.30ರಂತೆ ಬೆಳೆಯುತ್ತಿದೆ. ಅಂದರೆ ಅಲೋಪತಿ ಮಾರುಕಟ್ಟೆ ಬೆಳವಣಿಗೆ ದರ (ವಾರ್ಷಿಕ ಬೆಳವಣಿಗೆ ದರ ಶೇ.13)ಕ್ಕಿಂತ ಎಷ್ಟೋ ಹೆಚ್ಚು. ದುಬಾರಿ ಚಿಕಿತ್ಸೆ, ನಿರಂತರ ಚಿಕಿತ್ಸೆಯಿಂದಾಗಿಯೇ ಬಡತನ ರೇಖೆಗಿಂತ ಕೆಳಗಿನ ಜೀವನ ನಡೆಸುತ್ತಿರುವ ಜನರಿರುವ ನಮ್ಮಲ್ಲಿ ಹೋಮಿಯೋಪತಿ ಭರವಸೆಯ ಆಶಾಕಿರಣ ಎಂಬುದರಲ್ಲಿ ಎರಡು ಮಾತಿಲ್ಲ. ಅಲೋಪತಿ ಚಿಕಿತ್ಸಾ ವಿಧಾನಕ್ಕೆ ಹೋಲಿಸಿದರೆ ಹೋಮಿಯೋಪತಿ ಚಿಕಿತ್ಸೆಯ ವೆಚ್ಚ ಎಷ್ಟೋ ಕಡಿಮೆ. ಹಳೆ ರೋಗಕ್ಕೂ ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ಹೋಮಿಯೋಪತಿ ಚಿಕಿತ್ಸೆ ಕೈಗೆಟುಕುವ ದರದಲ್ಲಿದೆ. ಈ ವಿಧಾನದಲ್ಲಿ ಅಡ್ಡ ಪರಿಣಾಮಗಳೂ ಇಲ್ಲ. ಸ್ವಾಭಾವಿಕ ಚಿಕಿತ್ಸಾ ವಿಧಾನವಾದ ಹೋಮಿಯೋಪತಿಯನ್ನು ಡಾ. ಸ್ಯಾಮ್ಯುಯಲ್ ಹಾನಿಮನ್ ಎಂಬ ಜರ್ಮನ್ ವೈದ್ಯ 19ನೇ ಶತಮಾನದ ಆರಂಭದ ಅವಧಿಯಲ್ಲಿ ವೈಜ್ಞಾನಿಕ ತಳಹದಿಯೊಂದಿಗೆ ಆರಂಭಿಸಿದರು. ಹೋಮಿಯೋಪತಿ ಚಿಕಿತ್ಸಾ ಪದ್ಧತಿಯ ಮುಖ್ಯ ಅಂಶವೆಂದರೆ ಒಂದೇ ಮಾದರಿಯ ರೋಗ ಇರುವ ಎಲ್ಲಾ ರೋಗಿಗಳಿಗೂ ಒಂದೇ ಬಗೆಯ ಔಷಧ ನೀಡಲಾಗುವುದಿಲ್ಲ. ರೋಗಿಯ ದೇಹ, ಮನಸ್ಸು, ಬೆಳೆದ ಪರಿಸರ ಮುಂತಾದ ಅಂಶಗಳನ್ನು ಗಮನಿಸಿ ಭಿನ್ನ ಔಷಧಿ ನೀಡಲಾಗುತ್ತದೆ. 2006-07ರಲ್ಲಿ ಸುಮಾರು 4ರಿಂದ 5 ಕೋಟಿ ಜನರು ಹೋಮಿಯೋಪತಿ ಚಿಕಿತ್ಸೆ ಪಡೆದಿದ್ದಾರೆ. 2010ರಲ್ಲಿ ಇದರ ಸಂಖ್ಯೆ 10 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಸಮೀಕ್ಷೆಯೊಂದರ ಪ್ರಕಾರ ನೂರರಲ್ಲಿ ೨೪ ಜನರ ಆಯ್ಕೆ ಹೋಮಿಯೋಪತಿ. ಡಾ. ಬಾತ್ರಾ, ಡಾ. ಬಾಕ್‌ಸನ್ ಮುಂತಾದ ಕ್ಲಿನಿಕ್‌ಗಳು ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದೇ ಅಲ್ಲದೆ ಹೋಮಿಯೋಪತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಮಾರುಕಟ್ಟೆ ಬೆಳವಣಿಗೆ ದರ ಹೆಚ್ಚಳ ಮತ್ತು ಜನರ ಭರವಸೆ ಹೋಮಿಯೋಪತಿಗೆ ಸುಭದ್ರ ಭವಿಷ್ಯವನ್ನು ಸಾಬೀತು ಮಾಡಿದೆ. ಜಾಗೃತಿಯ ಜೊತೆಗೆ ಸಂಘಟಿತ ಹೋಮಿಯೋಪತಿ ಕ್ಲಿನಿಕ್‌ಗಳು ಮತ್ತು ವೈದ್ಯರ ಸಂಖ್ಯೆ ಹೆಚ್ಚಾಗಬೇಕು. ಅಂದರೆ ಮಾತ್ರ ಹೋಮಿಯೋಪತಿ ಎಂಬ ಅಪೂರ್ವ ವೈದ್ಯ ಶಾಸ್ತ್ರದ ವ್ಯಾಪಕ ಬೆಳವಣಿಗೆ ಸಾಧ್ಯ.

ಐಐಪಿಎಂ
'ಥಿಂಕ್ ಟ್ಯಾಂಕ್'

ಸ್ರೇಅಗರ್‌ವಾಲ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .