|
ನಟನೆಗೆ ಪ್ರವೇಶ ಹೇಗೆ?
ಕಾಲೇಜು ದಿನಗಳಲ್ಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ನಂತರ 'ಜನನಿ' ಎಂಬ ಮೆಗಾ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶವಾಯಿತು.
ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಯಾವುದಕ್ಕೆ ಆದ್ಯತೆ ನೀಡುವಿರಿ?
ನಟನೆಗೆ ಉತ್ತಮ ವೇದಿಕೆ ಸಿಕ್ಕರೆ ಸಾಕು. ಅದು ಸಿನಿಮಾವೋ, ಧಾರಾವಾಹಿಯೋ ಎನ್ನುವುದು ಮುಖ್ಯವಲ್ಲ.
ಸಿನಿಮಾ ಮತ್ತು ಧಾರಾವಾಹಿಗಳ ನಡುವಿನ ವ್ಯತ್ಯಾಸ?
ಸಿನಿಮಾದಲ್ಲಿ ಒಂದು ಪಾತ್ರ ಹಲವು ಭಾವಗಳನ್ನು ಅಭಿವ್ಯಕ್ತಿಗೊಳಿಸಬಹುದು. ಧಾರಾವಾಹಿಯಲ್ಲಿ ಅತ್ಯಲ್ಪ ಅವಕಾಶಗಳಲ್ಲಿ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ.
ನಾಯಕ ಅಥವಾ ಖಳ ಪಾತ್ರಗಳಲ್ಲಿ ಯಾವುದಿಷ್ಟ?
ಯಾವುದೇ ಪಾತ್ರ ಮಾಡಲೂ ಸಿದ್ಧ.
ಹೊಸ ಧಾರಾವಾಹಿಗಳಲ್ಲಿ ನಟಿಸುತ್ತಿದ್ದೀರಾ?
ಸದ್ಯಕ್ಕಂತೂ ಇಲ್ಲ. ಈಗಿರುವ ಧಾರಾವಾಹಿಗಳಲ್ಲೇ ಸಾಕಷ್ಟು ಬ್ಯುಸಿ.
'ಕುಣಿಯೋಣ ಬಾರ' ಅನುಭವ...
ಚೆನ್ನಾಗಿದೆ. ನಾನು ಮೂಲತಃ ಒಬ್ಬ ನೃತ್ಯಪಟುವಾದ್ದರಿಂದ ಇವುಗಳಲ್ಲಿ ಆಸಕ್ತಿ ಹೆಚ್ಚು.
ಸಿನಿಮಾದಲ್ಲಿ ಇತ್ತೀಚೆಗೆ ನೀವು ಮುಖ್ಯ ಪಾತ್ರಗಳಲ್ಲಿ ಕಾಣಿಸುತ್ತಿಲ್ಲವಲ್ಲ?
ಈ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಳ್ಳುತ್ತಿದ್ದೇನೆ. ಆದರೆ ಇದುವರೆಗೂ ಉತ್ತರ ಸಿಕ್ಕಿಲ್ಲ..
ಟಿಎಸ್‌ಐ
ಚಿತ್ರಾ ಕರ್ಕೇರಾ
|