|
ಏನು?
'ನವದೆಹಲಿಯ ಬಸ್ಸು ಅಪಘಾತಗಳಲ್ಲಿ ಸಾವಿಗೀಡಾದ ನೂರಕ್ಕೂ ಹೆಚ್ಚು ಮಂದಿಗೆ ಇನ್ನೂ ಪರಿಹಾರ ಧನ ಸಿಗದಿರುವ ಕುರಿತು.
ಏಕೆ?
ಈ ಅಪಘಾತಗಳ ಬಗ್ಗೆ ಹಿನ್ನೋಟ ಹರಿಸಿದರೆ ಮೊದಲು ಕಂಡುಬರುವುದು 'ಕಿಲ್ಲರ್' ಖ್ಯಾತಿಯ ಬ್ಲೂಲೈನ್ ಮತ್ತು ಡಿಟಿಸಿ ಬಸ್ಸುಗಳು. ಕಳೆದ ಒಂದು ವರ್ಷದ ಅಂಕಿ- ಅಂಶ ಗಮನಿಸಿದರೆ, ಇವುಗಳಿಂದಾಗಿರುವ ಅಪಘಾತಗಳು ಶತಕ ದಾಖಲಿಸಿವೆ! 2007ರ ಅಂಕಿ- ಅಂಶಗಳ ಪ್ರಕಾರ 180 ಜನರು ಸಾವಿಗೀಡಾಗಿದ್ದು 100ಕ್ಕೂ ಅಧಿಕ ಮಂದಿ ಅಂಗಹೀನರಾಗಿದ್ದಾರೆ. ಇಲ್ಲಿ ಬಲಿಯಾದವರಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುವ 'ಬ್ಲೂ ಲೈನ್ ಬಲಿಪಶುಗಳ ಸಂಘಟನೆ' ಪರಿಹಾರಕ್ಕಾಗಿ ಆಗ್ರಹಿಸುತ್ತಲೇ ಇದೆ. ಆದರೆ ಸರ್ಕಾರ ಜಾಣ ಕುರುಡುತನ ಪ್ರದರ್ಶಿಸುತ್ತಾ ಕನಿಷ್ಠ ಪರಿಹಾರ ನೀಡಲೂ ಮುಂದಾಗಿಲ್ಲ. ಜನತೆಗೆ ಮೃತ್ಯುಕೂಪ ವಾಗಿರುವ ಬ್ಲೂಲೈನ್ ಬಸ್ಸುಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲೂ ಸಿದ್ಧವಿಲ್ಲ.
ಮತ್ತೇನು?
ಈ ಅಪಘಾತದಿಂದಾಗುವ ರಕ್ತಪಾತಕ್ಕೆ ಮುಕ್ತಿ ದೊರಕುವಂತೆ ಕಾಣಿಸುತ್ತಿಲ್ಲ. ಹೊಸ ವರ್ಷವೂ ಈ 'ಕಿಲ್ಲರ್ ಬಸ್'ಗಳ ಸರಣಿ ಕೊಲೆಗೆ ಸಾಕ್ಷಿಯಾಗಿದೆ. ಈ ವರ್ಷದಲ್ಲಿ ಇನ್ನೂ ತಿಂಗಳಷ್ಟೇ ಪೂರ್ಣಗೊಂಡಿದೆ. ಆದರೆ ಈಗಾಗಲೇ ನಡೆದ ಅಪಘಾತಗಳಲ್ಲಿ ಐದು ಮಂದಿ ಸಾವಿಗೀಡಾಗಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬಲಿಪಶುಗಳಿಗೆ ಪರಿಹಾರ ಒದಗಿಸಬೇಕು. ಮುಂದಿನ ದಿನಗಳಲ್ಲಿ ಅಪಘಾತಗಳು ಸಂಭವಿಸದಂತೆ ಪರಿಣಾಮಕಾರಿಯಾಗಿ ತುರ್ತು ಕ್ರಮ ಕೈಗೊಳ್ಳಬೇಕು.
ಯಾವಾಗ?
ಆದಷ್ಟು ಶೀಘ್ರವಾಗಿ
ಟಿಎಸ್‌ಐ
ಪವನ್ ಪ್ರಣವ್
|