ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಪ್ರಸ್ತುತ

ಚುನಾವಣೆಗೆ ಹೊಸ ತಿರುವು

 

ಕೆನಡಿ ಬೆಂಬಲ ಪಡೆದ ಒಬಾಮ, ಕ್ಲಿಂಟನ್ ಕುಟುಂಬದ ನಿದ್ದೆಗೆಡಿಸಿದ್ದಾರೆ

ಅಮೆರಿಕದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಮೊದಲಿಗೆ ಕ್ಯಾರೊಲಿನ್ ಕೆನಡಿ, ನಂತರ ಎಡ್ವರ್ಡ್ ಕೆನಡಿ, ಕೊನೆಗೆ ಸೋದರಳಿಯ ಪ್ಯಾಟ್ರಿಕ್... ಹೀಗೆ ಒಬ್ಬರ ಹಿಂದೆ ಒಬ್ಬರಂತೆ ಅದ್ಭುತ ವರ್ಚಸ್ಸು ಹೊಂದಿರುವ ಕೆನಡಿ ಕುಟುಂಬದ ಬೆಂಬಲ ಗಳಿಸಿರುವ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಾರಕ್ ಒಬಾಮ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ವಿಜಯದ ನಗೆ ಬೀರಿದ್ದಾರೆ. ಅಮೆರಿಕದ ಉತ್ತರ ಕ್ಯಾರೊಲಿನಾ ಪ್ರಾಥಮಿಕ ಚುನಾವಣೆಯಲ್ಲಿ ತನ್ನ ಪ್ರತಿಸ್ಪರ್ಧಿಯಾದ ಹಿಲರಿ ಕ್ಲಿಂಟನ್ ಅವರನ್ನು ಒಬಾಮ ಭಾರೀ ಮತಗಳಿಂದ ಪರಾಭವಗೊಳಿಸಿದ್ದು ಆತ್ಮವಿಶ್ವಾಸವನ್ನು ತಂದುಕೊಟ್ಟದ್ದು ಮಾತ್ರವಲ್ಲ, ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಲ್ಲಿ ಹಿಲರಿ ಅವರನ್ನು ಹಿಂದೆ ಸರಿಸಿ ಒಬಾಮ ಮುನ್ನಡೆ ಸಾಧಿಸಿದ್ದಾರೆ. ಸೆನೆಟರ್ ಕೆನಡಿ ಅವರು ಒಬಾಮ ಅವರನ್ನು ಸಾರ್ವಜನಿಕವಾಗಿ ಶ್ಲಾಘಿಸಿದ್ದಾರೆ. ಅಮೆರಿಕದ ಪ್ರಜೆಗಳಲ್ಲಿ ಸ್ಫೂರ್ತಿ ತುಂಬುವ ಹಾಗೂ ಅಮೆರಿಕವನ್ನು ಹೊಸ ಹಾದಿಯಲ್ಲಿ ಕರೆದೊಯ್ಯುವ ಶಕ್ತಿ ಹೊಂದಿದ ಸಮರ್ಥ ನಾಯಕ ಎಂದು ಬಣ್ಣಿಸಿದ್ದಾರೆ. ಒಬ್ಬ ಅನುಭವಿ ರಾಜಕಾರಣಿಯೂ ಆಗಿರುವ ಸೆನೆಟರ್ ಕೆನಡಿ ಅವರು ಒಬಾಮ ಅವರಿಗೆ ಬೆಂಬಲ ಸೂಚಿಸಲು ಕಾರಣಗಳು ಇರಬಹುದು. ಆದರೆ ಹಿಲರಿ ಕ್ಲಿಂಟನ್ ಅವರ ಜಯವನ್ನು ವೀರೋಧಿಸುವ ಮೂಲಕ ಕೆನಡಿ ಅವರು ಕ್ಲಿಂಟನ್ ಕುಟುಂಬವಿಡೀ ಅಮೆರಿಕದ ಮಾಜಿ ಅಧ್ಯಕ್ಷ ದಿ. ಜಾನ್.ಎಫ್. ಕೆನಡಿ ಅವರ ವರ್ಚಸ್ಸು, ಪ್ರೇರಣೆ ಮತ್ತು ಬಳುವಳಿಯ ವಿರೋಧಿಯಾಗುವಂತೆ ಮಾಡುತ್ತಿದ್ದಾರೆ ಎನ್ನಬಹುದು. ಜಾನ್ ಎಫ್. ಕೆನಡಿ ಅವರ ಪುತ್ರಿ ಕರೋಲಿನ್ ಅವರು ಇತ್ತೀಚೆಗೆ 'ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು ಹಾಗೂ ಅಮೆರಿಕನ್ನರಲ್ಲಿ ಭಾರೀ ಪ್ರಭಾವ ಬೀರಿದ್ದು ಒಬಾಮ ವ್ಯಕ್ತಿತ್ವಕ್ಕೆ ಹೊಸ ಹುರುಪು ನೀಡಿದೆ. ಒಬಾಮ ಅವರು ಅಮೆರಿಕದ ರಾಜಕೀಯದಲ್ಲಿ ಮಹತ್ತರ ಬದಲಾವಣೆ ತರುವ ಹೊಸ ಚಳವಳಿಗೆ ನಾಂದಿ ಹಾಡಿದ್ದಾರೆ. ಜೊತೆಗೆ ಯುವ ಜನಾಂಗದವರು ರಾಷ್ಟ್ರ ರಾಜಕಾರಣದಲ್ಲಿ ಆಸಕ್ತರಾಗಲು ವಿಶೇಷ ಕೊಡುಗೆಯನ್ನೂ ನೀಡಿದ ನಾಯಕ ಅವರು. ಅಂದು ನನ್ನ ತಂದೆ ಅಮೆರಿಕದ ಜನರಿಗೆ ಸ್ಫೂರ್ತಿಯಾಗಿದ್ದಂತೆ, ನನ್ನಲ್ಲಿ ಸ್ಫೂರ್ತಿ ತುಂಬುವಂತಹಾ ಅಧ್ಯಕ್ಷನನ್ನು ನಾನು ಇದುವರೆಗೆ ಪಡೆದಿಲ್ಲ. ಆದರೆ ಇದೇ ಮೊದಲ ಬಾರಿ ಆ ಕಾಲ ಕೂಡಿ ಬಂದಿದೆಯೇನೋ ಎಂದು ನನಗೆ ಭಾಸವಾಗುತ್ತಿದೆ. ನನಗೆ ಮಾತ್ರವಲ್ಲ, ಇಡೀ ಅಮೆರಿಕದ ಜನ ಸಮೂಹಕ್ಕೇ ಸ್ಫೂರ್ತಿ ಬಾರಕ್ ಒಬಾಮ ಎಂದು ಅವರು ಸಂಪಾದಕೀಯದಲ್ಲಿ ಬಣ್ಣಿಸಿದ್ದರು. ಚುನಾವಣೆಗೆ ಇನ್ನೇನೂ ಒಂದು ವಾರ ಇದೆ ಎನ್ನುವಾಗ ಕೆನಡಿ ರಾಜಕೀಯ ಕುಟುಂಬದ ಬೆಂಬಲ ಪಡೆದಿರುವ ಒಬಾಮ ಅಮೆರಿಕದ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ ಎಂದರೆ ತಪ್ಪಿಲ್ಲ. ಅಮೆರಿಕದ ಇತಿಹಾಸಕ್ಕೆ ಹೊಸ ಅಧ್ಯಾಯ ಬರೆಯಲಿರುವ ಫೆಬ್ರುವರಿ ೫ರ ಮಂಗಳವಾರದಂದು ಅಮೆರಿಕದ ೨೨ ರಾಜ್ಯಗಳು ಸಮರ್ಥ ಡೆಮಾಕ್ರಟಿಕ್ ಅಭ್ಯರ್ಥಿ ಯಾರು ಎಂಬುದನ್ನು ನಿರ್ಧರಿಸಲಿವೆ. ಒಂದು ವೇಳೆ ಒಬಾಮ ರಾಜಕೀಯ ಚಾಕಚಕ್ಯತೆಯಿಂದ ಕ್ಯಾಲಿಫೋರ್ನಿಯಾದಂತಹ ರಾಜ್ಯಗಳಲ್ಲಿ ಗೆಲುವು ಸಾಧಿಸಲು ಯಶಸ್ವಿಯಾದರೆ ಹಿಲರಿ ಕ್ಲಿಂಟನ್ ಅವರ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಆಗಬೇಕೆಂಬ ಕನಸು ಭಗ್ನಗೊಳ್ಳಲಿದೆ. ಒಟ್ಟಾರೆ ಹಿಲರಿ ಹಾಗೂ ಒಬಾಮ ನಡುವಿನ ಸ್ಪರ್ಧೆ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಕಳೆದ ಜನವರಿ ತಿಂಗಳಲ್ಲಿ ಒಬಾಮ ಅವರ ಪತ್ನಿ ಮಿಷೆಲ್ ಒಬಾಮ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆರೋಪ- ಪ್ರತ್ಯಾರೋಪ ಮಾಡಿಕೊಂಡಿರುವುದನ್ನು ನೋಡಿದರೆ ಸ್ಪರ್ಧೆಯ ತೀವ್ರತೆ ಎಷ್ಟಿದೆ ಎಂದು ಅರ್ಥಮಾಡಿಕೊಳ್ಳಬಹುದು. ಸಾರ್ವಜನಿಕರ ಮನಸ್ಸನ್ನು ಬೇಗ ಅರ್ಥೈಸಿಕೊಳ್ಳುವಲ್ಲಿ ನಿಪುಣರಾದ ಬಿಲ್ ಕ್ಲಿಂಟನ್ ಅವರಿಗೆ ಒಬಾಮ ಅವರ ಚುನಾವಣಾ ಅಭಿಯಾನಗಳನ್ನು ಗಮನಿಸಿಯೇ ಹಿಲರಿ ಅವರ ಗೆಲುವಿನ ಮೇಲೆ ಅನುಮಾನ ಮೂಡುವಂತಾಗಿದೆ. ಅನುಮಾನ ನಿಜವಾಗುವ ದಿನಗಳೂ ಹತ್ತಿರದಲ್ಲಿವೆ ಎಂದರೆ ಆಶ್ಚರ್ಯವೇನಿಲ್ಲ. ಪ್ರಸ್ತುತ ಒಬಾಮರಿಗೆ ಕೆನಡಿ ಅವರ ಬೆಂಬಲವೂ ಪ್ರಾಪ್ತವಾಗಿರುವುದು ಕ್ಲಿಂಟನ್ ಕುಟುಂಬದ ನಿದ್ದೆಗೆಡಿಸಿದೆ.

ಟಿಎಸ್‌ಐ

ಸುತಾನು ಗುರು

ಪ್ರಸ್ತುತ

ಗಂಧದ ನಾಡು ಉಗ್ರರ ಬೀಡು? : ಭಯೋತ್ಪಾದಕರಿಗೆ ರಾಜ್ಯ ನೆಲೆ ಒದಗಿಸುವ ಜೊತೆಗೆ ಹೊಸ ಉಗ್ರರನ್ನು ಸೃಷ್ಟಿಸುತ್ತಿದೆ

ಚುನಾವಣೆಗೆ ಹೊಸ ತಿರುವು : ಕೆನಡಿ ಬೆಂಬಲ ಪಡೆದ ಒಬಾಮ, ಕ್ಲಿಂಟನ್ ಕುಟುಂಬದ ನಿದ್ದೆಗೆಡಿಸಿದ್ದಾರೆ

ಉಪಖಂಡದ ಪ್ರಥಮ ಜಯ! : ಪ್ರಕರಣಕ್ಕೆ ನಾಂದಿ ಹಾಡಿದ ಸೈಮಂಡ್ಸ್ ಅವರನ್ನು ಸುಮ್ಮನೆ ಬಿಟ್ಟಿದ್ದೇಕೆ?

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .